ಮಹಾನಗರ: ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚಿನ ಮಂದಿ ಕೊರೊನಾ ಮೊದಲ ಡೋಸ್‌ನ ಅವಧಿ ಪೂರ್ಣಗೊಂಡರೂ ಎರಡನೇ ಡೋಸ್ ಲಸಿಕೆ ಪಡೆಯಬೇಕಿದೆ.
5 ನಗರ ಆರೋಗ್ಯ ಕೇಂದ್ರ ಮತ್ತು
ವೆನ್ಲಾಕ್ ಆಸ್ಪತ್ರೆ ವ್ಯಾಪ್ತಿಗಳಲ್ಲಿ 14 ಸಾವಿರಕ್ಕೂ ಹೆಚ್ಚಿನ ಮಂದಿ ಎರಡನೇ ಡೋಸ್ ಪಡೆಯಲು ಬಾಕಿಯಿದ್ದು, ಅವರನ್ನು ಮನವೊಲಿಸಿ ಲಸಿಕೆ ಹಾಕಿಸಲು ಪಾಲಿಕೆ ಮತ್ತು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ.
ನಗರದಲ್ಲಿ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಕದ್ರಿ ಲೇಡಿಹಿಲ್, ಬಂದರು, ಸುರತ್ಕಲ್, ಕೂಳೂರು, ಪಡೀಲ್ ಪ್ರಾ. ಆರೋಗ್ಯ ಕೇಂದ್ರ,
ವೆನ್ಲಾಕ್ ಆಸ್ಪತ್ರೆ ವ್ಯಾಪ್ತಿ ಸರಾಸರಿ 2,000ಕ್ಕೂ ಹೆಚ್ಚಿನ ಮಂದಿ 2ನೇ ಡೋಸ್ ಲಸಿಕೆ ಪಡೆಯಬೇಕಿದೆ.
ಅತೀ ಹೆಚ್ಚು ಮಂದಿ ಲಸಿಕೆ ಪಡೆಯ ಬೇಕಿರುವ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಪ್ರತೀ ದಿನ ಒಂದೊಂದು ಪ್ರದೇಶಗಳಿಗೆ ಪಾಲಿಕೆ ಮತ್ತು ಆರೋಗ್ಯ ಇಲಾಖೆ ತಂಡ ಭೇಟಿ ನೀಡಲಿದೆ. ನಗರ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಮೊಬೈಲ್ ವ್ಯಾನ್ ಮುಖೇನ ವಿವಿಧೆಡೆ ಸಾರ್ವಜನಿಕರಿಗೆ ಲಸಿಕೆ ನೀಡಲಾಗುತ್ತಿದೆ. ಬೀಚ್‌ಗಳು, ಮಾಲ್, ಸರಕಾರಿ ಕಚೇರಿ, ಜನ ಸೇರುವ ಸ್ಥಳಗಳಲ್ಲಿ ಅಭಿಯಾನ ನಡೆಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ, ಎನ್ನೆಸ್ಸೆಸ್ ವಿದ್ಯಾರ್ಥಿ ಗಳೂ ಮನೆ ಮನೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಸಾರ್ವಜನಿಕರಿಗೆ ಅರಿವು
ಲಸಿಕೆ ಅಭಿಯಾನಕ್ಕೆ ಚುರುಕು ನೀಡುತ್ತಿದ್ದೇವೆ. ಯಾವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಎಷ್ಟು ಮಂದಿ ಲಸಿಕೆ ಪಡೆದುಕೊಳ್ಳಲು ಬಾಕಿ ಇದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದೇವೆ. ನಗರದ ಪ್ರದೇಶ ಗಳಿಗೆ ಭೇಟಿ ನೀಡಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದೇವೆ.
– ಅಕ್ಷಯ್ ಶ್ರೀಧರ್, ಮನಪಾ ಆಯುಕ್ತ
– ನವೀನ್ ಭಟ್ ಇಳಂತಿಲ