Advertisement

ಮರಳಿ ಬರುತ್ತಿದ್ದಾರೆ ಗುಳೆ ಹೋದವರು

05:39 AM May 12, 2020 | Suhan S |

ಗದಗ: ದುಡಿಮೆಗಾಗಿ ಗೋವಾಕ್ಕೆ ತೆರಳಿದ್ದವರಲ್ಲಿ ಸೋಮವಾರ 226 ಜನರು ಕಾರ್ಮಿಕರು ಜಿಲ್ಲೆಗೆ ಮರಳಿದ್ದಾರೆ. ಅವರನ್ನು ಇಲ್ಲಿನ ಹೊಸಬಸ್‌ ನಿಲ್ದಾಣದಲ್ಲಿ  ಆರೋಗ್ಯ ತಪಾಸಣೆಗೆ ಒಳಪಡಿಸಿ, ಬಳಿಕ ಅವರ ಊರುಗಳಿಗೆ ಪ್ರಯಾಣ ಬೆಳೆಸಲು ಅನುವು ಮಾಡಿಕೊಡಲಾಯಿತು.

Advertisement

ತಾಲೂಕಿನ ಅಡವಿಸೋಮಾಪುರ ತಾಂಡಾ, ಕಳಸಾಪೂರ ತಾಂಡಾ, ನಾಗಾವಿ ತಾಂಡ, ಬೆಳಧಡಿ, ಮುಂಡರಗಿ ತಾಲೂಕಿನ ಸಿಂಗಟರಾಯನಕೆರೆ ತಾಂಡಾ ಸೇರಿದಂತೆ ಗದಗ, ಮುಂಡರಗಿ, ರೋಣ ಹಾಗೂ ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳಿಂದ ಗೋವಾ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ತೆರಳಿದ್ದ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಮರಳುತ್ತಿದ್ದಾರೆ. ಆ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಿಂದ 681, ಹಾಸನದಿಂದ 21, ಧಾರವಾಡದಿಂದ 20, ಉತ್ತರ ಕನ್ನಡದಿಂದ 16, ಬಳ್ಳಾರಿಯಿಂದ 10, ಉಡುಪಿ 34, ಬೆಂಗಳೂರು 6, ರಾಮನಗರ ದಿಂದ 16 , ಶಿವಮೊಗ್ಗದಿಂದ ಜಿಲ್ಲೆಯ 3 ಕಾರ್ಮಿಕರು ಮರಳಿ ತಮ್ಮ ಸ್ವಂತ ಊರುಗಳಿಗೆ ಬಂದಿದ್ದಾರೆ.

ಜಿಲ್ಲೆಗೆ ಮರಳಿದ ಕಾರ್ಮಿಕರನ್ನು ಇಲ್ಲಿನ ಹೊಸ ಬಸ್‌ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಕೈಗೆ 14 ದಿನಗಳ ಹೋಂ ಕ್ವಾರಂಟೈನ್‌ ಮುದ್ರೆಯೊತ್ತಲಾಗುತ್ತದೆ. ಅಲ್ಲದೇ, ಅವರ ಸಂಪರ್ಕ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರ ಪಡೆದು, ಸ್ವಗ್ರಾಮಕ್ಕೆ ತೆರಳು ಅನುವು ಮಾಡಿಕೊಡಲಾಯಿತು. 16 ಜನ ತಬ್ಲಿಘಿಗಳ ಆಗಮನ: ಈ ನಡುವೆ ಎರಡು ದಿನಗಳ ಹಿಂದೆ 16 ಜನ ತಬ್ಲಿಘಿ ಗಳು ಜಿಲ್ಲೆಗೆ ಮರಳಿದ್ದಾರೆ. ಇವರು= ಗದಗಿನವರೇ ಆಗಿದ್ದು, ಲಾಕ್‌ಡೌನ್‌ ಮುನ್ನವೇ ಗುಜರಾತ್‌ನ ಪಾಲನ್‌ಪೂರ್‌ ಎಂಬ ಊರಿಗೆ ತೆರಳಿದ್ದರು. ಇದೀಗ ಲಾಕ್‌ಡೌನ್‌ ಸಡಿಲಿಕೆಯಾಗಿದ್ದರಿಂದ ಸರಕಾರದಿಂದ ಪಾಸ್‌ ಪಡೆದು, ಬಸ್‌ನಲ್ಲಿ ಗದಗಿಗೆ ಮರಳಿದ್ದಾರೆ.

ಮೇಲ್ನೋಟಕ್ಕೆ ಅವರೆಲ್ಲರೂ ಆರೋಗ್ಯವಂತರಾಗಿರುವುದು ಕಂಡು ಬರುತ್ತದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಗರದ ವಿದ್ಯಾರ್ಥಿ ನಿಲಯವೊಂದರಲ್ಲಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next