Advertisement

ಮತ್ತೆ ಬಂದಳು, ಮದುಮಗಳು…

07:45 PM Jan 17, 2020 | Lakshmi GovindaRaj |

ಬೆಂಗಳೂರಿಗೆ ಮತ್ತೆ ಮತ್ತೆ ಮಲೆನಾಡನ್ನು, ಸಹ್ಯಾದ್ರಿಯ ದಟ್ಟ ಕಾಡಿನ ನೆನಪುಗಳನ್ನು ಹೊತ್ತು ತರುವ ನಾಟಕ, “ಮಲೆಗಳಲ್ಲಿ ಮದುಮಗಳು’. ಇಡೀ ರಾತ್ರಿಯ ನಿದ್ರೆ, ಚಳಿಯನ್ನೂ ಲೆಕ್ಕಿಸದೆ, ರಾಷ್ಟ್ರೀಯ ನಾಟಕ ಶಾಲೆಯ ಹುಡುಗರು, ಬರೋಬ್ಬರಿ 9 ಗಂಟೆಗಳ ಕಾಲ ಪಾತ್ರಗಳ ಪರಕಾಯ ಪ್ರವೇಶಿಸಿ, ಕುವೆಂಪು ಅವರ ಬೃಹತ್‌ ಕಾದಂಬರಿಗೆ ರಂಗಜೀವ ನೀಡಲಿದ್ದಾರೆ. ಜಾನಪದ ನೋಟಗಳಿಂದ ಮದುಮಗಳನ್ನು ಈ ಬಾರಿಯೂ ಕಟ್ಟಿ ಕೊಡುತ್ತಿರುವುದು ನಿರ್ದೇಶಕ, ಸಿ. ಬಸವಲಿಂಗಯ್ಯ.

Advertisement

ಡಾ.ಕೆ.ವೈ. ನಾರಾಯಣ ಸ್ವಾಮಿ ಅವರ ರಂಗರೂಪ, ಹಂಸಲೇಖ ಅವರ ಸಂಗೀತ, ಗಜಾನನ ನಾಯಕ್‌ ಅವರ ಸಂಗೀತ ನಿರ್ವಹಣೆ, ಶಶಿಧರ ಅಡಪ ಅವರ ರಂಗವಿನ್ಯಾಸ, ನಂದಕಿಶೋರ್‌ ಅವರ ಬೆಳಕಿನ ಸಂಯೋಜನೆ ಈ ನಾಟಕದ ಶಕ್ತಿ. ಈ ಮಹಾ ನಾಟಕವು ಈಗಾಗಲೇ 85 ಪ್ರದರ್ಶನಗಳನ್ನು ಪೂರೈಸಿದೆ. ನಾಟಕದ ಸ್ಥಳದಲ್ಲಿ ಮತ್ತು ಬುಕ್‌ ಮೈ ಶೋನಲ್ಲಿ ಟಿಕೆಟ್‌ಗಳು ಲಭ್ಯ.

ಯಾವಾಗ?: ಜ.20- ಫೆ.29ರವರೆಗೆ, ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ
ಸಮಯ: ರಾತ್ರಿ 8ರಿಂದ ಮುಂಜಾನೆ 6
ಎಲ್ಲಿ?: ಕಲಾಗ್ರಾಮ, ಮಲ್ಲತ್ತಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next