ರಾಂಚಿ :”ನಾನು ದೊಡ್ಡ ಅಪರಾಧ ಮಾಡಿದ್ದೇನೆ, ಬಂದು ನನ್ನನ್ನು ಬಂಧಿಸಿ. ಏಕೆ ಪ್ರಶ್ನಿಸುವುದು?” ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕೇಂದ್ರ ಸರಕಾರದ ವಿರುದ್ದ ಗುರುವಾರ ಕಿಡಿ ಕಾರಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಂಚಿ ಮೂಲದ ಕಚೇರಿಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಜಾರ್ಖಂಡ್ ಸಿಎಂಗೆ ಸಮನ್ಸ್ ನೀಡಿದ ನಂತರ ಈ ಹೇಳಿಕೆ ನೀಡಿದ್ದಾರೆ.
‘ಇಂದು ನಾನು ಛತ್ತೀಸ್‌ಗಢದಲ್ಲಿ ಈಗಾಗಲೇ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದ್ದು, ಇಡಿ ನನ್ನನ್ನು ಕರೆಸಿದೆ. ನಾನು ದೊಡ್ಡ ಅಪರಾಧ ಮಾಡಿದ್ದರೆ, ಬಂದು ನನ್ನನ್ನು ಬಂಧಿಸಿ… ಇಡಿ ಕಚೇರಿ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಜಾರ್ಖಂಡ್ ನವರಿಗೆ ಯಾಕೆ ಹೆದರುತ್ತಿದ್ದೀರೀ ?’ ಎಂದು ಸೊರೇನ್ ಕಿಡಿ ಕಾರಿದ್ದಾರೆ.
‘ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಸೊರೆನ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿ ಇಂದು ರಾಂಚಿ ಮೂಲದ ಕಚೇರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ‘ಬಿಜೆಪಿ ಸರಕಾರವು ಸಂಸ್ಥೆಗಳನ್ನು ತಪ್ಪು ದಾರಿಯಲ್ಲಿ ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ ನಾಲ್ಕು ಬಾರಿ ಪರಾಭವಗೊಂಡಿರುವ ಬಿಜೆಪಿ ಸರಕಾರವು ಜಾರ್ಖಂಡ್ ನವರಿಗೆ ಹೆದರುತ್ತಿದೆ’ ಎಂದರು.