Advertisement

ಪ್ರಿಯಾಂಕಾ ಬಂದರೆ ಕಾಂಗ್ರೆಸ್‌ ಚೇತರಿಕೆ: ಲಾಲು

10:12 AM May 01, 2017 | Team Udayavani |

ಹೊಸದಿಲ್ಲಿ: ಅಖೀಲ ಭಾರತ ಮಟ್ಟದಲ್ಲಿ ಬಿಜೆಪಿಯನ್ನು ಕಟ್ಟಿಹಾಕಿ ದೇಶದಲ್ಲಿ ಮೇಲಕ್ಕೆ ಏಳಬೇಕು, ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಮನಸ್ಸು ಕಾಂಗ್ರೆಸ್‌ಗೆ ಇದ್ದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಮುಂಚೂಣಿ ಹುದ್ದೆಗೆ ಕರೆತಂದು, ನಾಯಕತ್ವದ ಜವಾಬ್ದಾರಿ ನೀಡಬೇಕು ಎಂದು ಆರ್‌ಜೆಡಿ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಸಲಹೆ ನೀಡಿದ್ದಾರೆ.  

Advertisement

ಕಾಂಗ್ರೆಸ್‌ ದಿನೇ ದಿನೆ ನೆಲಕಚ್ಚುತ್ತಿದ್ದರೂ ಏಕೆ ಹೊಸ ಬದಲಾವಣೆಗೆ ಪ್ರಯತ್ನ ಮಾಡುತ್ತಿಲ್ಲ ಎಂದು ಪ್ರಶ್ನಿಸಿರುವ ಅವರು, “ರಾಹುಲ್‌ ನಾಯಕತ್ವ ಹಲವು ಬಾರಿ ಪರೀಕ್ಷೆಗೆ ಒಳಪಟ್ಟಿದೆ. ಈಗ ಪ್ರಿಯಾಂಕಾರನ್ನು ಕರೆತರಲು ಕಾಲ ಪಕ್ವವಾಗಿದೆ. ಪ್ರಿಯಾಂಕಾ ಸೂಕ್ಷ್ಮ ಸಂವೇದನೆಯ ಮಹಿಳೆ. ಬೇಗ ಎಲ್ಲವನ್ನು ಗ್ರಹಿಸುವ ಗುಣವಿದೆ. ಆಕೆ ಮುಂದಾಗಿ ನಿಂತರೆ ಭವಿಷ್ಯದಲ್ಲಿ ಬಿಜೆಪಿಗೆ ಫೈಟ್‌ ಕೊಡಬಹುದು’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next