ಅಬ್ಟಾ ! ಅದೆಷ್ಟು ಚೆಂದ ಈ ಬಣ್ಣ ಬಣ್ಣದ ಚಕ್ರಗಳು. ಈ ಬಣ್ಣಬಣ್ಣದ ಚಕ್ರಗಳೇ ಗಿರ್‌ಗಿಟ್ಲೆ ಅಥವಾ ಗಿರ್ಗಿಟ್. ಇದು ಹೆಚ್ಚಾಗಿ ಜಾತ್ರೆಗಳಲ್ಲಿ, ದೇವಸ್ಥಾನ ಉತ್ಸವಗಳಲ್ಲಿ ಕಾಣಸಿಗುವ ಮಕ್ಕಳ ಅತ್ಯಂತ ನೆಚ್ಚಿನ ಆಟಿಕೆ. ಮಕ್ಕಳು ಈ ಗಿರಿಗಿಟ್ಲೆಯನ್ನು ನೋಡಿದ ಕೂಡಲೇ ಪೋಷಕರ ಬಳಿ ಅದು ಬೇಕೆಂದು ರಂಪಾಟ ಮಾಡುವುದುಂಟು. ಜಾತ್ರೆಗಳಲ್ಲಿ ಎಲ್ಲಿ ನೋಡಿದರೂ ಗಿರಿಗಿಟ್ಲೆà ಮಯ. ಸಾಮಾನ್ಯವಾಗಿ ಇದನ್ನು ಮಾರುವವರು ಉದ್ದನೆಯ ಕೋಲಿಗೆ ಕೆಳಗಿನಿಂದ ಮೇಲಿನವರೆಗೂ ಈ ರೆಕ್ಕೆಗಳನ್ನು ಹೊಂದಿರುವ ಬಣ್ಣಬಣ್ಣದ ಗಿರಿಗಿಟ್ಲೆನ್ನು ಜೋಡಿಸಿ ಮಾರಲು ಸಿದ್ಧ ಮಾಡಿರುತ್ತಾರೆ. ಅದಲ್ಲದೇ ಅದರ ರಂಗುರಂಗಿನ ಸೊಬಗು ಮಕ್ಕಳನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಸಾಮಾನ್ಯವಾಗಿ ಇದರ ದರ 10 ರೂಪಾಯಿಗಳಿಂದ 20 ರೂಪಾಯಿವರೆಗೆ ಇರುತ್ತದೆ. ಮಕ್ಕಳು ಇದನ್ನು ಹಿಡಿದು ಗಾಳಿ ಬರುವ ವಿರುದ್ಧ ದಿಕ್ಕಿಗೆ ಓಡುವಾಗ ಅದರ ಬಣ್ಣ ಬಣ್ಣದ ರೆಕ್ಕೆಗಳು ಫ್ಯಾನಿನಂತೆ ತಿರುಗುವುದನ್ನು ನೋಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ.
ಇಂದಿನ ಹೆಚ್ಚಿನ ಮಕ್ಕಳಿಗೆ ಗಿರಿಗಿಟ್ಲೆ ಎಂದರೆ ಏನು ಎಂಬುದೇ ತಿಳಿಯದೆ ಇರುವುದು ನಿಜಕ್ಕೂ ಬೇಸರದ ಸಂಗತಿ. ಕಾಲ ಮುಂದುವರಿದಂತೆ ಹಿಂದಿನ ಆಟಿಕೆಗಳಾದ ಕುಂಟೆಬಿಲ್ಲೆ, ಗಿಲ್ಲಿದಾಂಡು, ಲಗೋರಿ, ಮರಕೋತಿಯಾಟ, ಚೆಂಡಾಟ, ಮುಂತಾದವು ಕಣ್ಮರೆಯಾಗಿವೆ. ಇವುಗಳನ್ನು ಮೊಬೈಲ್‌ಗಳು, ವಿಡಿಯೋ ಗೇಮ್‌ಗಳು, ಸೋಶಿಯಲ್ ಮೀಡಿಯಾಗಳು ಆಕ್ರಮಿಸಿವೆ. ಇದರೊಂದಿಗೆ ಗಿರಿಗಿಟ್ಲೆಯು ಕೂಡ ಕಣ್ಮರೆಯಾಗಿದೆ. ಬೀದಿಬೀದಿಯಲ್ಲಿ ಮಾರಲ್ಪಡು ತ್ತಿದ್ದ ಈ ಗಿರಿಗಿಟ್ಲೆ ಇಂದಿನ ಆನ್‌ಲೈನ್ ಶಾಪಿಂಗ್ ಯುಗದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ಜ್ಯೋತಿ ಭಟ್
ತೃತೀಯ ಬಿ. ಎ., ಪತ್ರಿಕೋದ್ಯಮ ವಿಭಾಗ, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು