Advertisement

ಕಲರ್‌ಫ‌ುಲ್‌ ಸಂಚಿಕೆಯಂತೆ ಬದುಕಿಗೆ ಬಾ…

08:56 PM Mar 09, 2020 | Sriram |

ನೀನು ನನ್ನ ಬದುಕಲ್ಲಿ ಹೊಸ ಪತ್ರಿಕೆಯಂತೆ ಬಂದೆ. ಒಲುಮೆಯೆಂಬ ಹೊಸ ಸುದ್ದಿಯೊಂದಿಗೆ, ನಲುಮೆಯೆಂಬ ಕಲರ್‌ಫ‌ುಲ್‌ ಹಾಳೆಗಳೊಂದಿಗೆ. ಅನುರಾಗ ಎಂಬ ಅಕ್ಷರಗಳನ್ನು ಹೊತ್ತು, ನನ್ನ ಹೃದಯ ಎಂಬ ಮಾರುಕಟ್ಟೆಗೆ ಲಗ್ಗೆಯಿಟ್ಟೆ. ನಾ ನಿನ್ನನ್ನು ಮೊದಲಬಾರಿ ನೋಡಿದ ಕ್ಷಣ, ನೀ ನನಗೆ ಪ್ರೇಮನಿವೇದಿಸಿದ ಆ ಕ್ಷಣ..ವಾವ್‌ ನನ್ನ “ಅಂಕಣಬರಹ’ ಪತ್ರಿಕೆಯಲ್ಲಿ ಪ್ರಕಟವಾದಷ್ಟೇ ಖುಷಿಯಾಗಿತ್ತು. ಆದರೆ, ಮರುದಿನವೇ ನೀ ನನ್ನ ಬಾಳಿನ “ದೈನಿಕ’ವಾಗಿರದೇ ಕೇವಲ “ವಿಶೇಷ ಸಂಚಿಕೆ’ ಮಾತ್ರ ಅಗಿರುವೆ ಎಂಬ ಕಹಿಸತ್ಯ ತಿಳಿದಾಗ ಮನಸ್ಸು ಬಹಳಷ್ಟು ಕ್ಷಿುರುಗಿತು.

Advertisement

ನೀ ನನ್ನ ಬದುಕಿನ “ಸಂಪಾದಕೀಯ ಪುಟ’ವಾಗುತ್ತೀಯ. ನಿನ್ನೊಂದಿಗೆ Öಕ್ಷಿತ್ತು
-ಹಲವು ವಿಚಾರಗಳನ್ನು ಚರ್ಚಿಸಬಹುದೆಂದು ಕನಸು ಕಟ್ಟುಕೊಂಡಿದ್ದ ನನ್ನ ಕಣ್ಣು ರೆಪ್ಪೆ ಮುಚ್ಚದಾದವು. ಹೃದಯವು ಸೂತ್ರ ಹರಿದ ಗಾಳಿಪಟದಂತೆ ದಿಕ್ಕು ಕಾಣದೆ ಹೊರಳಾಡಿತು. ಇರಲಿಬಿಡು ಅದು ವಿಧಿಲಿಖೀತ. ದುಃಖೀಸಿ ಲಾಭವಿಲ್ಲ. ನಿನಗೆ “ತಲೆಬರಹ’ ಕಟ್ಟುವ ಅವಕಾಶ ನನ್ನೀ ಹಣೆಬರಹಕ್ಕೆ ಇಲ್ಲದಿದ್ದರೂ, ನಿನ್ನ ಜೊತೆ “ಕಿರು-ಸಂದರ್ಶನ’ವನ್ನಾದರೂ ನಡೆಸಲು ಅವಕಾಶ ಪಡೆದೆನಲ್ಲ. ನಾನೇ ಧನ್ಯಾ. ಅದಕ್ಕೆ, ಆ ದೇವನಿಗೊಂದು ಥ್ಯಾಂಕ್ಸ್‌.

ಇತ್ತೀಚೆಗೆ ನನ್ನ ಬದುಕಿನಲ್ಲಿ ಕೆಲವೊಂದು ಹುಡುಗಿಯರು “ಸಾಪ್ತಾಹಿಕ’, “ಪಾಕ್ಷಿಕ’ದಂತೆ ಬರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ್ಯಾರೂ ನಿನ್ನಷ್ಟು ಕಾಡುತ್ತಿಲ್ಲ. ಮೋಹಿಸುತ್ತಲೂ ಇಲ್ಲ. ಮನಸ್ಸೆಲ್ಲ ನೀನೇ ತುಂಬಿರುವಾಗ ಅವರಿಗೆಲ್ಲಿದೆ ಜಾಗ? ಸುಳ್ಳೆನಿಸಿದರೆ, ಅನುಮಾನವಿದ್ದರೆ, ನೀನೇ ನನ್ನ ಹೃದಯದ ಅಂತರಾಳಕ್ಕೆ ಬೇಟಿ ಕೊಟ್ಟು “ಪ್ರತ್ಯಕ್ಷ ವರದಿಯನ್ನೋ’.. “ತನಿಖಾ ಪತ್ರಿಕೋದ್ಯಮವನ್ನೋ’.. ಮಾಡಿನೋಡು.. ಅಲ್ಲೆಲ್ಲ ನೀನದೇ “ಚಿತ್ರ’, ‘ಶೀರ್ಷಿಕೆ ‘ ಜಾಹೀರಾತು’ಗಳು ತುಂಬಿವೆ.

ಹೇಳ್ಳೋದು ಮರೆತೆ. ನಿನ್ನ ಬಗ್ಗೆ ಪ್ರೇಮ ಕವನವೊಂದನ್ನು ಬರೆಯವ ಆಸೆ. ಆದರೆ ಪದಗಳು ಸಹಕರಿಸುತ್ತಿಲ್ಲ. ಭಾವನೆಗಳ ಮಳೆಗಾಲದಲ್ಲಿ ಶಬ್ಧಕೋಶಕ್ಕೆ ಭೀಕರ ಬರಗಾಲ. ನನ್ನೊಂದಿಗೆ ಇರುವಷ್ಟು ದಿನ ನೀ ಕೊಡುವ ಪ್ರತಿ “ಬೈಟ್‌’ಗಳು ನನ್ನ ನೆನಪಿನ ಸ್ಮತಿಪಟಲದಲ್ಲಿ ಎಂದಿಗೂ ಮಾಸದು. ನೀ ಜೊತೆಗಿದ್ದರೂ, ಇಲ್ಲದಿದ್ದರೂ ನಿನ್ನ ನೆನಪಿನ “ನೋಟಿಫಿಕೇಶನ್‌’ಗಳು ಮನದಲ್ಲಿ ಸದಾ “ಬೆಲ್‌’ ಬಾರಿಸುತ್ತಲೇ ಇರುತ್ತವೆ.

ಕೊನೇ ಮಾತು. ಯಾವತ್ತಿದ್ದರೂ, ನೀನೇ ನನ್ನ ಮನದ “ಮಾಲಕಿ’ ಕಂ ಸಂಪಾದಕಿ’. ಜಗಮಗಿಸುವ “ಪುರವಣಿ’ಯಂತೆ ನೀ ನನ್ನ ಬಾಳಿಗೆ ಬಾ ಎಂದು ಪ್ರಾರ್ಥಿಸುವೆ.

Advertisement

-ಸುಮ್ಮನೆ ರೂಪೇಶ್‌

Advertisement

Udayavani is now on Telegram. Click here to join our channel and stay updated with the latest news.

Next