Advertisement

ಕಲರೋಥಾನ್‌

07:45 PM Jan 17, 2020 | Lakshmi GovindaRaj |

ಇದು ದೇಶದ ದೊಡ್ಡ ಡ್ರಾಯಿಂಗ್‌ ಹಬ್ಬ. ಡ್ರಾಯಿಂಗ್‌, ಪೇಂಟಿಂಗ್‌ಗಳಿಂದ ಕಲಾವಿದರು ತಮ್ಮ ಕಲ್ಪನೆಯನ್ನು ಕಾಗದದ ಮೇಲೆ ಜೀವಂತವಾಗಿಡುವ ಸಂಭ್ರಮ. ಕಲರೋಥಾನ್‌ ಸೀಸನ್‌ 12ಕ್ಕೆ ರಾಜಧಾನಿ ಸಜ್ಜಾಗಿದ್ದು, ಇಡೀ ದಿನ ಚಿತ್ರಗಳದ್ದೇ ಧ್ಯಾನ ಏರ್ಪಡಲಿದೆ. ಕಳೆದವರ್ಷ ಈ ಕಲರೋಥಾನ್‌ನಲ್ಲಿ 7 ಸಾವಿರ ಮಂದಿ ಪಾಲ್ಗೊಂಡಿದ್ದರು. ಈ ಬಾರಿ 10 ಸಾವಿರ ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Advertisement

ಅತ್ಯಂತ ದೊಡ್ಡ ಮುಕ್ತ ಡ್ರಾಯಿಂಗ್‌ ಮತ್ತು ಪೇಂಟಿಂಗ್‌ ಕಾರ್ಯಕ್ರಮದಲ್ಲಿ 3ರಿಂದ 90 ವರ್ಷಗಳ ವಯಸ್ಸಿನವರು ಪಾಲ್ಗೊಳ್ಳಬಹುದು. 5 ವಯೋಶ್ರೇಣಿಗಳಲ್ಲಿ 15 ಅತ್ಯುತ್ತಮ ಪೇಂಟಿಂಗ್‌ಗಳನ್ನು ಆರಿಸಲಾಗುತ್ತದೆ. ಉದಯೋನ್ಮುಖ ಕಲಾವಿದರಿಗೆ ಸ್ಫೂರ್ತಿ ತುಂಬಲು, 30 ಖ್ಯಾತ ಕಲಾವಿದರು ಪೇಂಟಿಂಗ್‌ ಮಾಡಲಿದ್ದಾರೆ.

– ಪ್ರವೇಶ ಉಚಿತ ಮತ್ತು ಸ್ಥಳದಲ್ಲೇ ನೋಂದಣಿ.
– 3ರಿಂದ 90 ವಯೋಮಾನದವರಿಗೆ ಅವಕಾಶ.
– ಪ್ರತಿ ಅಭ್ಯರ್ಥಿಯೂ ಪ್ರಮಾಣ ಪತ್ರ ಪಡೆಯಲಿದ್ದಾರೆ.
– ಐದು ವಯೋಮಾನದ 15 ಶ್ರೇಷ್ಠ ಪೇಂಟಿಂಗ್‌ಗಳಿಗೆ ಸ್ಮರಣಿಕೆ ನೀಡಲಾಗುತ್ತದೆ.
– ಪೇಂಟಿಂಗ್‌ ಸಾಮಗ್ರಿಗಳನ್ನು ಅಭ್ಯರ್ಥಿಗಳೇ ತರಬೇಕು.
– ಎ3 ಡ್ರಾಯಿಂಗ್‌ ಶೀಟ್‌ಗಳನ್ನು ಸಂಘಟಕರು ನೀಡುತ್ತಾರೆ.

ಯಾವಾಗ?: ಜ.19, ಭಾನುವಾರ, ಬೆ.8ರಿಂದ 4
ಎಲ್ಲಿ?: ಕಿತ್ತೂರು ರಾಣಿ ಚನ್ನಮ್ಮ ಸ್ಟೇಡಿಯಂ, ಜಯನಗರ
ಆನ್‌ಲೈನ್‌ ನೋಂದಣಿ: //breatheentertainment.com/colorothon/

Advertisement

Udayavani is now on Telegram. Click here to join our channel and stay updated with the latest news.

Next