ಚಿತ್ರ ಬಿಡಿಸೋಕೆ ಬಳಸೋ ಬಣ್ಣದ ಪೆನ್ಸಿಲ್ ನಿಮ್ಮ ಬಳಿಯೂ ಇದೆ. ಬಣ್ಣ ಬಣ್ಣದ ಬಳಸಿ ಚಂದದ ಚಿತ್ರಗಳನ್ನು ನೀವು ಬಿಡಿಸಿರುತ್ತೀರ. ಆದರೆ, ಬಣ್ಣ ಬದಲಿಸೋ ಪೆನ್ಸಿಲ್ ಬಗ್ಗೆ ಗೊತ್ತಿದ್ಯಾ? ಪೆನ್ಸಿಲ್ ತುದಿಯನ್ನು ಬಲ ಕೈಯಲ್ಲಿ ಹಿಡಿದು, ಎಡ ಕೈಯಿಂದ ಅದನ್ನು ಮುಚ್ಚಿ ತೆಗೆಯೋಷ್ಟರಲ್ಲಿ, ಗೋಸುಂಬೆಯಂತೆ ಬಣ್ಣವನ್ನು ಬದಲಾಯಿಸಿಬಿಡೋ ಪೆನ್ಸಿಲ್ ಇದು. ಅರೇ, ಇದೇನಾಗಿ ಹೋಯ್ತು ಅಂತ ಮತ್ತೂಮ್ಮೆ ಕೈ ಮುಚ್ಚಿ ತೆಗೆದರೆ, ಮೊದಲಿನ ಬಣ್ಣಕ್ಕೇ ತಿರುಗಿರುತ್ತದೆ ಈ ಪೆನ್ಸಿಲ್. ಹೇಗೆ ಮಾಡೋದು ಈ ಜಾದೂವನ್ನು?
ಬೇಕಾಗುವ ವಸ್ತುಗಳು: ಕಲರ್ ಪೆನ್ಸಿಲ್, ಕಲರ್ ಪೇಪರ್, ಅಂಟು, ಕತ್ತರಿ.
ಪ್ರದರ್ಶನ: ಒಂದು ಕಲರ್ ಪೆನ್ಸಿಲ್ ತೆಗೆದುಕೊಳ್ಳಿ. ಅದರ ಒಂದು ಬದಿಗೆ ಯಾವುದಾದರೂ ಬೇರೆ ಬಣ್ಣದ ಕಾಗದವನ್ನು ಪೆನ್ಸಿಲ್‌ನ ಉದ್ದಕ್ಕೂ ಹಚ್ಚಿ. (ಚಿತ್ರಗಳನ್ನು ಗಮನಿಸಿ) ಒಂದು ಬದಿಗೆ ಪೆನ್ಸಿಲ್‌ನ ನಿಜವಾದ ಬಣ್ಣ, ಇನ್ನೊಂದು ಬದಿಗೆ ಬಣ್ಣದ ಕಾಗದ. ಒಮ್ಮೆ ಪೆನ್ಸಿಲ್‌ನ ನಿಜವಾದ ಬಣ್ಣವಿರುವ ಮುಖವನ್ನು ಪ್ರೇಕ್ಷಕರಿಗೆ ಕಾಣುವಂತೆ ಒಂದು ಕೈಯಲ್ಲಿ ಹಿಡಿದು (ಚಿತ್ರ ಗಮನಿಸಿ) ಮತ್ತೂಂದು ಕೈಯಿಂದ ಪೂರ್ತಿ ಪೆನ್ಸಿಲ್ ಭಾಗ ಮುಚ್ಚುವಂತೆ ಕೈ ಅಡ್ಡ ಹಿಡಿಯಿರಿ. ಅಡ್ಡ ಹಿಡಿದ ಕೈ ತೆಗೆಯುವ ಮುಂಚೆ ಬಲಕೈಯಿಂದ ಹಿಡಿದಿರುವ, ಬಣ್ಣದ ಕಾಗದ ಹಚ್ಚಿದ ಪೆನ್ಸಿಲ್‌ನ ಮುಖ ಮುಂದಕ್ಕೆ ಬರುವಂತೆ ಕೊಂಚವೇ ತಿರುಗಿಸಿ. ಕೈ ತೆಗೆದಾಗ ಪ್ರೇಕ್ಷಕರಿಗೆ ಪೆನ್ಸಿಲ್ ಬಣ್ಣವೇ ಬದಲಾದಂತೆ ಅನ್ನಿಸುತ್ತದೆ.
ವಿಡಿಯೊ ಕೊಂಡಿ: HHHgfsddgdf
ಗಾಯತ್ರಿ ಯತಿರಾಜ್