ಹೊಸದಿಲ್ಲಿ: “ವಸಾಹತುಶಾಹಿ ಮನಃಸ್ಥಿತಿಗಳಿಂದ ದೇಶದ ಪ್ರಗತಿಗೆ ಅಡ್ಡಿಯುಂಟಾಗಿದೆ. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಇಂಥ ಮನಃಸ್ಥಿತಿಗಳು ದೇಶದ ಅಭಿವೃದ್ಧಿಯನ್ನು ತಡೆಹಿಡಿಯುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ಸಂವಿ ಧಾನ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅವರು, “ಭಾರತದಲ್ಲಿ ದಶಕಗಳ ಹಿಂದೆಯೇ ವಸಾಹತುಶಾಹಿ ವ್ಯವಸ್ಥೆ ಕೊನೆಗೊಂಡಿದೆ. ಆದರೆ ಇಲ್ಲಿನ ಕೆಲವರು ಆ ವ್ಯವಸ್ಥೆಯ ಪಡಿಯಚ್ಚುಗಳಂತಿದ್ದಾರೆ. ಇಂಥ ಶಕ್ತಿಗಳು ಭಾರತದ ಅಭಿವೃದ್ಧಿಗೆ ತೊಡರುಗಾಲು ಹಾಕುತ್ತಲೇ ಬಂದಿದ್ದಾರೆ’ ಎಂದು ಅವರು ಹೇಳಿದ್ದಾರೆ.
“ಪ್ಯಾರಿಸ್ ಪರಿಸರ ಸಂರಕ್ಷಣ ಸಮ್ಮೇಳನದಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಪರಿಣಾಮಕಾರಿಯಾಗಿ ಅನುಸರಿಸುತ್ತಿರುವುದು ಭಾರತ ಮಾತ್ರ. ಜಗತ್ತಿನ ಬಡ ರಾಷ್ಟ್ರಗಳು ಕೈಗಾರಿಕೆಗಳತ್ತ ಮುಖ ಮಾಡುವ ಮುನ್ನವೇ ಸಿರಿವಂತ ರಾಷ್ಟ್ರಗಳು ಸಾಂಪ್ರದಾಯಿಕ ತೈಲಾಧಾರಿತ ಕೈಗಾರಿಕೆಗಳನ್ನು ತಮ್ಮಲ್ಲಿ ಸ್ಥಾಪಿಸಿ, ಪರಿಸರ ಮಾಲಿನ್ಯಕ್ಕೆ ಕಾರಣೀಭೂತ ರಾಗಿದ್ದಾರೆ.
ಇದನ್ನೂ ಓದಿ:ಕುಟುಂಬ ಆಧಾರಿತ ಪಕ್ಷಗಳಿಂದ ಪ್ರಜಾಸತ್ತೆಗೆ ಅಪಾಯ
ಇಂದಿಗೂ ಮಾಲಿನ್ಯಕ್ಕೆ ಅವರ ಕಾಣಿಕೆ ಹೇರಳವಾಗಿವೆ. ಆದರೂ ಆ ರಾಷ್ಟ್ರಗಳು ಮಾಲಿನ್ಯದ ಆರೋಪ ಮಾಡುತ್ತಲೇ ಬಂದಿವೆ ಎಂದು ಅವರು ಹೇಳಿದ್ದಾರೆ.