Advertisement

ಎರಡು ಕಾರು ಮತ್ತು ಒಂದು ಬೈಕ್‌ಗಳ ನಡುವೆ ಸರಣಿ ಅಪಘಾತ: ಮಹಿಳೆ ಸಾವು

02:24 PM Sep 13, 2020 | keerthan |

ಮಳವಳ್ಳಿ: ಎರಡು ಕಾರು ಮತ್ತು ಒಂದು ಬೈಕ್‌ಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾನುವಾರ   ರಾಷ್ಟ್ರೀಯ ಹೆದ್ದಾರಿ 209ರ ದಾಸನದೊಡ್ಡಿ ಗ್ರಾಮದ ಬಳಿ ನಡೆದಿದೆ.

Advertisement

ಮೃತಪಟ್ಟ ಮಹಿಳೆಯನ್ನು ಚನ್ನಪಟ್ಟಣದ ನಿವಾಸಿ ಗಂಗಾ ಜೋಶಿ (40) ಎಂದು ಗುರುತಿಸಲಾಗಿದೆ.

ಚನ್ನಪಟ್ಟಣದಿಂದ ಕಾರಿನಲ್ಲಿ ಗಂಗಾ ಜೋಶಿ, ಮಧುಸೂದನ್ ಜೋಶಿ ಮತ್ತು ಅನುಷಾ ಅವರು ತಾಲ್ಲೂಕಿನ ಶಿವಸಮುದ್ರದ ಗಗನಚುಕ್ಕಿ ಜಲಪಾತ ವೀಕ್ಷಣೆ ಹೋಗುತ್ತಿದ್ದರು. ಯಳದೂಂರು ಕಡೆಯಿಂದ ಮದ್ದೂರುಗೆ ಕಾರಿನಲ್ಲಿ ನಾಗರಾಜು, ಕುಮಾರ್ ಸೇರಿದಂತೆ ನಾಲ್ವರು ತೆರಳುತ್ತಿದ್ದರು. ಬೆಳಕವಾಡಿ ಗ್ರಾಮದ ಮೂವರು ಬೈಕ್ ನಲ್ಲಿ ಮಳವಳ್ಳಿಗೆ ಹೋಗುತ್ತಿದ್ದ ವೇಳೆ ಸರಣಿ ಅಪಘಾತವಾಗಿದೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್: ನಿಯಂತ್ರಣ ತಪ್ಪಿ ಪಲ್ಟಿಯಾಗಿ ಜಲಪಾತದತ್ತ ನುಗ್ಗಿದ ಕಾರು

ಘಟನೆಯಲ್ಲಿ ಎರಡು ಕಾರುಗಳು ನಜ್ಜುಗುಜ್ಜುಯಾಗಿದ್ದು, ಬೈಕ್ ಮತ್ತು ಕಾರಿನಲ್ಲಿದ್ದ ಹತ್ತು ಜನರಿಗೆ ಗಾಯವಾಗಿದೆ. ಮಧುಸೂದನ್ ಜೋಶಿ ಅವರ ಸ್ಥಿತಿ ಗಂಭೀರವಾಗಿದ್ದು, ಕೆ.ಎಂ.ದೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗಾಳುಗಳನ್ನು ತಕ್ಷಣವೇ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಗ್ರಾಮಾಂತರ ಮತ್ತು ಬೆಳಕವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next