Advertisement

ಕೊಲೀಜಿಯಂ ನಿರ್ಧಾರ: ಆರ್‌ಟಿಐನಲ್ಲಿ ಮಾಹಿತಿ ನೀಡಲು ಸಾಧ್ಯವಿಲ್ಲ

12:37 AM Dec 11, 2022 | Shreeram Nayak |

ಹೊಸದಿಲ್ಲಿ: ನ್ಯಾಯಮೂರ್ತಿಗಳ ನೇಮಕ ಸಂಬಂಧ 2018 ಡಿ.12ರಂದು ಕೊಲೀಜಿಯಂ ನಡೆಸಿದ್ದ ಸಭೆಯ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಲ್ಲಿ ನೀಡಲು ಸಾಧ್ಯವಿಲ್ಲ. ಇಂಥ ವಿಚಾರಗಳನ್ನು ಬಹಿರಂಗಪಡಿ ಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಜತೆಗೆ ಮಾಹಿತಿ ಕೋರಿದ್ದ ಅರ್ಜಿಯನ್ನೂ ತಿರಸ್ಕರಿಸಿದೆ.ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ| ಎಂ.ಆರ್‌. ಶಾ, ನ್ಯಾ| ಸಿ.ಟಿ. ರವಿ ಕುಮಾರ್‌ ನೇತೃತ್ವದ ನ್ಯಾಯಪೀಠ, ಸಭೆಯಲ್ಲಿ ಅನುಮೋದನೆಗೊಂಡು ಸಹಿ ಹಾಕಲ್ಪಟ್ಟ ಅಂತಿಮ ನಿರ್ಧಾರಗಳು ಮಾತ್ರ ಅಧಿಕೃತ.

ತಾತ್ಕಾಲಿಕವಾಗಿ ಚರ್ಚೆಗೆ ಕೈಗೆತ್ತಿಕೊಂಡ ಮತ್ತು ಸಮಾಲೋಚನೆ ನಡೆಸಿದ ಅಂಶಗಳನ್ನು ಅಂತಿಮ ಎಂದು ಪರಿಗಣಿಸಲು ಸಾಧ್ಯ ವಿಲ್ಲ ಎಂದು ಹೇಳಿದೆ.

ಕೊಲೀಜಿಯಂ ಎನ್ನುವುದು ಬಹು ಸದಸ್ಯರ ತಂಡ. ಅದರಲ್ಲಿ ಕೈಗೊಂಡ ನಿರ್ಧಾರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸಾಧ್ಯವಿಲ್ಲ ಎಂದಿತು.

Advertisement

Udayavani is now on Telegram. Click here to join our channel and stay updated with the latest news.

Next