Advertisement

ಹೊಸ ಕಾಂಬಿನೇಷನ್‌ ತೆರೆಯಲು ಕಾಲೇಜುಗಳಿಗೆ ಅನುಮತಿ

11:15 PM Jun 25, 2019 | Lakshmi GovindaRaj |

ಬೆಂಗಳೂರು: ರಾಜ್ಯದ 20 ಪದವಿಪೂರ್ವ ಕಾಲೇಜುಗಳಿಗೆ ಹೊಸ ಕಾಂಬಿನೇಷನ್‌ ಹಾಗೂ ವಿಭಾಗಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ಕಲ್ಪಿಸಿದೆ. 2019-20ನೇ ಸಾಲಿನಿಂದ ರಾಜ್ಯದ ಕೆಲವು ಕಾಲೇಜುಗಳಲ್ಲಿ ಹೊಸ ಸಂಯೋಜನೆ ಅಥವಾ ವಿಭಾಗ ತೆರೆಯಲು ಜಿಲ್ಲಾ ಉಪನಿರ್ದೇಶಕರು, ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳು ಪ್ರಸ್ತಾವನೆ ಸಲ್ಲಿಸಿದ್ದರು.

Advertisement

ವಿದ್ಯಾರ್ಥಿಗಳ ಹಿತದೃಷ್ಟಿ ಹಾಗೂ ಕಾಲೇಜಿನ ಅಭಿವೃದ್ಧಿ ಪರಿಗಣಿಸಿ 20 ಕಾಲೇಜುಗಳಿಗೆ ಹೊಸ ಕಾಂಬಿನೇಷನ್‌ ಹಾಗೂ ವಿಭಾಗಗಳನ್ನು ತೆರೆಯಲು ಪದವಿಪೂರ್ವ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಹೊಸ ಕಾಂಬಿನೇಷನ್‌ ಅಥವಾ ವಿಭಾಗದಲ್ಲಿ ಬೋಧನೆ ಮಾಡಲು ಜಿಲ್ಲೆಯಲ್ಲಿರುವ ಹೆಚ್ಚುವರಿ ಉಪನ್ಯಾಸಕರ ಕಾರ್ಯಭಾರಕ್ಕೆ ಅನುಗುಣವಾಗಿ ಹಂಚಿಕೆ ಮಾಡಬೇಕು.

ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಂಡು 15 ದಿನದೊಳಗೆ ವರದಿ ಸಲ್ಲಿಸಲು ಜಿಲ್ಲಾ ಉಪನಿರ್ದೇಶಕರಿಗೆ ಇಲಾಖೆ ಸೂಚಿಸಿದೆ. ವಿಜಯಪುರ, ಬೆಂಗಳೂರು ಉತ್ತರ, ಹಾಸನ, ಬಳ್ಳಾರಿ, ರಾಮನಗರ, ಬಾಗಲಕೋಟೆ, ದಕ್ಷಿಣ ಕನ್ನಡ, ಬೀದರ್‌, ತುಮಕೂರು, ರಾಯಚೂರು, ಉಡುಪಿ ಮತ್ತು ಶಿವಮೊಗ್ಗದ ಆಯ್ದ ಕಾಲೇಜಿನಲ್ಲಿ ಹೊಸ ವಿಭಾಗ ಅಥವಾ ಕಾಂಬಿನೇಷನ್‌ ತೆರೆಯಲು ಅನುಮತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next