ತೀರ್ಥಹಳ್ಳಿ : ತಾಲೂಕಿನ ಸೊಪ್ಪು ಗುಡ್ಡೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಲ್ಸಿಯಂ ಮಾತ್ರೆ ಸೇವಿಸಿದ್ದ 15 ಜನ ವಿದ್ಯಾರ್ಥಿನಿಯರು ವಾಂತಿ – ಬೇದಿ ಯಾಗಿ ಅಸ್ವಸ್ಥ ರಾದ ಘಟನೆ ನಡೆಸಿದೆ.
ವೈದ್ಯರು ಸೂಚಿಸಿದಂತೆ ಕ್ಯಾಲ್ಸಿಯಂ ಮಾತ್ರೆ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಅದರಂತೆ ಮಧ್ಯಾಹ್ನದ ಊಟದ ನಂತರ ಸೇವಿಸಲು ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ಹೇಳಿದ್ದರು.
ಆದರೆ ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಇಲ್ಲದಿರುವುದರಿಂದ ಊಟಕ್ಕೆ ಮೊದಲೇ ವಿದ್ಯಾರ್ಥಿಗಳು ಮಾತ್ರೆ ಸೇವಿಸಿದ್ದು ಈ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಟಿ ಹೆಚ್ ಓ ಅನಿಕೇತನ್ ” ಮಾತ್ರೆಗಳನ್ನು ಊಟದ ಮೊದಲೇ ಸೇವನೆ ಹಾಗೂ ಗ್ಯಾಸ್ಟ್ರಿಕ್ ಇರುವವರಿಗೆ ಈ ಸಮಸ್ಯೆ ಕಾಡುವುದು ಸಹಜ. ವಿದ್ಯಾರ್ಥಿನಿಯರು ಹಾಗೂ ಪೋಷಕರು ಈ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಅದೇನೇ ಇರಲಿ ವಿದ್ಯಾರ್ಥಿಗಳು ಕೂಡ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸುವುದು ಹಾಗೂ ಕಾಲೇಜು ಆಡಳಿತ ಮಂಡಳಿ ಆಗಲಿ ಅಥವಾ ಹಾಸ್ಟೆಲ್ ನಲ್ಲೆ ಆಗಲಿ ಇದರ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಒಳ್ಳೆಯದು ಎಂಬ ಮಾತು ಕೇಳಿ ಬರುತ್ತಿದೆ.