ಬೀದರ: ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೋವಿಡ್-19 ಸಂದಿಗ್ಧತೆಯ ನಡುವೆ ಸರ್ಕಾರ ಕಾಲೇಜು ಆರಂಭಿಸಿ ವಾರ ಕಳೆದಿದೆ. ಆದರೆ, ವೈರಸ್‌ನ ಆತಂಕ ಹಿನ್ನೆಲೆಯಲ್ಲಿ ತರಗತಿಯಲ್ಲಿ ಕುಳಿತ ಪಾಠ ಕೇಳಲು ನಿರಾಸಕ್ತಿ ತೋರುತ್ತಿರುವ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್‌ಗೆ ಸೈ ಎನ್ನುತ್ತಿದ್ದಾರೆ. ಹಾಗಾಗಿ ಕಾಲೇಜಿನತ್ತ ಬೆರಳಣಿಕೆಯಷ್ಟು ಮಕ್ಕಳು ಮಾತ್ರ ಹೆಜ್ಜೆ ಹಾಕುತ್ತಿರುವುದು ಕಾಣಿಸಿಗುತ್ತಿದೆ.
ಕೋವಿಡ್ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಕಳೆದೆಂಟು ತಿಂಗಳಿಂದ ಪದವಿ ಮತ್ತು ತಾಂತ್ರಿಕ ಕೋರ್ಸ್‌ಗಳ ತರಗತಿ ಕೊಠಡಿ ಬಾಗಿಲುಗಳನ್ನುನ.17ರಿಂದ ಮುಂಜಾಗ್ರತಾ ಕ್ರಮಗಳೊಂದಿಗೆ ತೆರೆದು, ಬೋಧನಾ ಚಟುವಟಿಗಳಿಗೆ ಚಾಲನೆ ನೀಡಲಾಗಿದೆ.ಆದರೆ, ಬೀದರ ನಗರ ಸೇರಿದಂತೆ ಜಿಲ್ಲೆಯ ಎಲ್ಲಕಾಲೇಜುಗಳಲ್ಲೂ ಒಟ್ಟು ವಿದ್ಯಾರ್ಥಿಗಳ ಹಾಜರಾತಿಪೈಕಿ ಶೇ.10ರಷ್ಟು ಸಹ ದಾಟುತ್ತಿಲ್ಲ. ಬೀದರ ಜಿಲ್ಲೆಯಲ್ಲಿ ಗುಲಬರ್ಗಾ ವಿವಿ ಮತ್ತುವಿಜಯಪುರ ಮಹಿಳಾ ವಿವಿ ವ್ಯಾಪ್ತಿಯ 10 ಸರ್ಕಾರಿಮತ್ತು 18 ಅನುದಾನಿತ ಪದವಿ ಕಾಲೇಜುಗಳಿದ್ದು, ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.
ಬಹುತೇಕ ಕಾಲೇಜುಗಳಲ್ಲಿ ಸ್ಯಾನಿಟೈಸರ್ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಸೀನರಾಗಲುಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ.ಈ ನಡುವೆ ದೇಶದಲ್ಲಿ ಎರಡನೇ ಅಲೆರೂಪದಲ್ಲಿ ಕೋವಿಡ್ ಆರ್ಭಟ ಹೆಚ್ಚುತ್ತಿರುವುದರಜತೆಗೆ ಕಾಲೇಜು ತರಗತಿಗೆ ಕೂಡಲು ಪಾಲಕರ ಸಮ್ಮಿತ ಪತ್ರ, ಕೋವಿಡ್ ತಪಾಸಣಾ ವರದಿಜೊತೆಗಿಟ್ಟುಕೊಳ್ಳುವುದು ಅನಿವಾರ್ಯ ಹಿನ್ನೆಲೆಯಲ್ಲಿ ಕೋವಿಡ್ ವರದಿ ಕೈಸೇರದಿರುವುದು ಮತ್ತು ಅನೇಕ ವಿದ್ಯಾರ್ಥಿಗಳು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಜತೆಗೆ ಕಾಲೇಜಿಗೆ ಬರಬೇಕೆಂಬುದು ಕಡ್ಡಾಯ ಇಲ್ಲವಾದ್ದರಿಂದ ತರಗತಿಗೆ ಗೈರಾಗುತ್ತಿದ್ದಾರೆ. ಕೆಲವರುಕಾಲೇಜಿಗೆ ಬಂದು ಶೈಕ್ಷಣಿಕ ದಾಖಲೆಗಳ ಸಲ್ಲಿಕೆ,ಅಗತ್ಯ ಮಾಹಿತಿ ಪಡೆದು ವಾಪಸ್ಸಾಗುತ್ತಿದ್ದಾರೆ.ಹಾಗಾಗಿ ಕ್ಲಾಸ್ ರೂಮ್‌ಗಳು ಮಕ್ಕಳಿಲ್ಲದೇ ಭಣಗುಡುತ್ತಿವೆ.
ಆನ್‌ಲೈನ್ ಶಿಕ್ಷಣದ ಮೊರೆ: ತರಗತಿಗೆ ವಿದ್ಯಾರ್ಥಿಗಳ ನಿರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಉನ್ನತ ಶಿಕ್ಷಣ ಇಲಾಖೆ ಆನ್‌ಲೈನ್ ಶಿಕ್ಷಣಕ್ಕೆ ಮತ್ತಷ್ಟು ಒತ್ತು ಕೊಡುತ್ತಿದೆ. ಹಾಗಾಗಿ ಕಾಲೇಜಿಗೆಬರಲು ಹಿಂದೇಟು ಹಾಕುತ್ತಿರುವ ವಿದ್ಯಾರ್ಥಿಗಳು, ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯೂಟ್ಯೂಬ್ ಮತ್ತು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ವಿಷಯ-ಅಧ್ಯಾಯವಾರು ಪಾಠಗಳನ್ನುಹರಿಬಿಡುತ್ತಿದ್ದು, ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ.
ಬೀದರ ಜಿಲ್ಲೆಯ ಪದವಿ ಕಾಲೇಜುಗಳಿಗೆ ಬೆರಳಣಿಕೆ ವಿದ್ಯಾರ್ಥಿಗಳು ಮಾತ್ರಬರುತ್ತಿದ್ದಾರೆ. ಮಕ್ಕಳ ಹಾಜರಾತಿಗೆ ಕೋವಿಡ್ ಪರೀಕ್ಷಾ ವರದಿ ಕಡ್ಡಾಯ. ಆದರೆ, ಬಹುತೇಕರು ಟೆಸ್ಟ್‌ಗೆ ಹಿಂದೇಟು ಹಾಕಿದರೆ, ಕೆಲವರದ್ದು ವರದಿ ಕೈ ಸೇರುತ್ತಿಲ್ಲ. ಹಾಗಾಗಿ ನೌಬಾದ್‌ಪಿಎಚ್‌ಸಿಯಲ್ಲಿ ಪಿಜಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಪರೀಕ್ಷಾ ಕೇಂದ್ರ ಆರಂಭಿಸಲು ಮನವಿಮಾಡಲಾಗಿದೆ. ಯೂಟ್ಯೂಬ್, ವಾಟ್ಸ್‌ಆ್ಯಪ್‌ಮೂಲಕ ಪಾಠಗಳನ್ನು ಪರಿಣಾಮಕಾರಿಯಾಗನಡೆಸಲಾಗುತ್ತಿದೆ.
-ಮನೋಹರ ಬಿ., ಪದವಿ ಕಾಲೇಜುಗಳ ನೋಡಲ್ ಅಧಿಕಾರಿ