ಬೆಂಗಳೂರು: ರಾಜ್ಯದ ಪದವಿ ಕಾಲೇಜಿನಲ್ಲಿ ಗ್ರಂಥಾಲಯಗಳ ನಿರ್ವಹಣೆಯನ್ನು ದೈಹಿಕ ಶಿಕ್ಷಣ ಬೋಧಕರಿಗೆ, ಸಹ ಅಥವಾ ಸಹಾಯಕ ಪ್ರಾಧ್ಯಾಪಕರಿಗೆ ಒಪ್ಪಿಸುವ ಮೂಲಕ ಗ್ರಂಥಪಾಲಕರ ಕೊರತೆಯನ್ನು ಸರಿದೂಗಿಸಲು ಕಾಲೇಜು ಶಿಕ್ಷಣ ಇಲಾಖೆ ಹೊಸ ತಂತ್ರ ರೂಪಿಸಿದೆ.
ರಾಜ್ಯದಲ್ಲಿ ವಿವಿಧ ರೀತಿಯ 430 ಸರಕಾರಿ ಪದವಿ ಕಾಲೇಜುಗಳಿದ್ದು, ಅಲ್ಲಿ ನ.17ರಿಂದ ಅಧಿಕೃತವಾಗಿ ತರಗತಿಗಳು ಆರಂಭವಾಗಲಿವೆ. ಜತೆಗೆ ಆನ್‌ಲೈನ್, ಆಫ್ಲೈನ್ ತರಗತಿಗಳು ನಿರಂತರವಾಗಿ ನಡೆಯಲಿವೆೆ.
ಕಾಲೇಜಿನಲ್ಲಿ ಗ್ರಂಥಪಾಲಕರ ಕೊರತೆಯಿದ್ದು, ಇರುವ ಎಲ್ಲ ಉಪನ್ಯಾಸಕರು ಪೂರ್ಣ ಪ್ರಮಾಣದ ಕಾರ್ಯಾಭಾರ ಹೊಂದಿದ್ದಲ್ಲಿ, ಸೇವಾ ಜೇಷ್ಠತೆ ಆಧಾರದಲ್ಲಿ ಕಿರಿಯ ಖಾಯಂ ಬೋಧಕರಿಗೆ ಕಡ್ಡಾಯವಾಗಿ ಪ್ರಭಾರವನ್ನು ವಹಿಸುವಂತೆ ಎಲ್ಲ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾದ ಪ್ರೊ| ಎಸ್.ಮಲ್ಲೇಶ್ವರಪ್ಪ ಅವರು ತಿಳಿಸಿದ್ದಾರೆ.
ಇಲಾಖೆ ಎಚ್ಚರಿಕೆ
ಗ್ರಂಥಾಲಯವನ್ನು ವಿದ್ಯಾರ್ಥಿ ಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ವಾಗುವಂತೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ನಿರ್ದಿಷ್ಟ ಬೋಧಕರು ಗ್ರಂಥಾಲಯ ನಿರ್ವ ಹಣೆಯ ಪ್ರಭಾರ ವಹಿಸಿಕೊಳ್ಳಲು ನಿರಾಕರಿಸಿದರೆ ಅಂತಹ ಬೋಧಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.