Advertisement

ಕಾಲೇಜ್‌ ಮುಗಿಸಿ ಬಂದವರ ಕಾಪಾಡೋ…

05:55 AM Jul 21, 2017 | |

ಗಂಧದ ಜೊತೆಗೆ ಗುದ್ದಾಡಿ ಬಂದ ಕುಮಾರನ ಕಥೆ
ನಮ್ಮ ನಿರ್ದೇಶಕ ಸಂತು ನಾನು ರಜೆ ಕೊಡಲಿಲ್ಲ ಅಂತ ಹೇಳಿದ್ರು. ಎಡಿಟಿಂಗ್‌ ಮಾಡೋದಕ್ಕೆ ರಜೆ ಕೊಡೋ ಬದಲು, ಸ್ಪಾ ಟ್‌ ಎಡಿಟಿಂಗ್‌ ಮಾಡೋಕೆ ಅವಕಾಶ ಕೊಟ್ನಾ ಇಲ್ವಾ ಕೇಳಿ …’ ಎಂದು ಪ್ರಶ್ನಿಸಿದರು ನಿರ್ಮಾಪಕ ಪ ದ ¾ನಾಭ್‌.
ಅವರ ಮಾತಿನಲ್ಲಿ ಸಿಟ್ಟೇನೂ ಇರಲಿಲ್ಲ. ಬದಲಿಗೆ, ಸಂತು ಹೇಳಿದ ಮಾತಿಗೆ ಸಮಜಾಯಿಷಿ ಇತ್ತು. ಅದಕ್ಕೂ ಮುನ್ನ ನಿರ್ದೇಶಕ ಸಂತು ಮಾತನಾಡಿದ್ದ ರು. ಒಂದು ದಿನ ರಜೆ ಪಡೆಯದೆಸತತವಾಗಿ 54 ದಿನಗಳ ಕಾಲ ಚಚ್ಚಿ ಬಿಸಾಕಿದ್ದಾಗಿ ಹೇಳಿದ್ದರು. ಸ್ಕೂಲ್‌ನಲ್ಲಿ ರಜೆ ಕೇಳುವಂತೆ ನಿರ್ಮಾಪಕರ ಬಳಿ ರಜೆ ಕೇಳಬೇಕಿತ್ತು ಎಂದು ಹೇಳಿದ್ದರು. ಅದಕ್ಕೆ ತಮ್ಮ ಮಾತಿನಲ್ಲಿ ಉತ್ತರ ಕೊಟ್ಟ ಪದ್ಮನಾಭ್‌, ಚಿತ್ರ ಮುಗಿದಿದ್ದಕ್ಕೆ ಖುಷಿಪಟ್ಟರು.

Advertisement

ಅಂದು, “ಕಾಲೇಜ್‌ ಕುಮಾರ್‌’ ಚಿತ್ರದ ಕೊನೆಯ ದಿನದ ಚಿತ್ರೀಕರಣ. ಗವಿಗಂಗಾಧರ ಸ್ವಾಮಿ ದೇವಸ್ಥಾನ ಬಳಿ ರಸ್ತೆಗಳಲ್ಲಿ ಚಿತ್ರೀಕರಣ ನಡೆಯುತಿತ್ತು. ಚಿತ್ರ ಶುರುವಾದ ದಿನ ಚಿತ್ರದ ಬಗ್ಗೆ ಮಾಧ್ಯಮದವರ ಜೊತೆಗೆ ಮಾತನಾಡಿದ್ದರು ಚಿತ್ರತಂಡದವರು.

ಕೊನೆಯ ದಿನವೂ ಕರೆದು, ಚಿತ್ರ ನಡೆದು ಬಂದ ಹಾದಿಯನ್ನು ತಿಳಿಸಿಬಿಡೋಣ ಎಂದು ಶೂಟಿಂಗ್‌ ಸ್ಪಾಟ್‌ನಲ್ಲೇ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಅಂದು ಮಿಸ್‌ ಆದವರೆಂದರೆ ನಾಯಕಿ ಸಂಯುಕ್ತಾ ಹೆಗ್ಡೆ ಒಬ್ಬರೇ.

ಮಿಕ್ಕಂತೆ ನಾಯಕ ವಿಕ್ಕಿ, ರವಿಶಂಕರ್‌, ಶ್ರುತಿ, ಸಂತು, ಪದ್ಮನಾಭ್‌, ಛಾಯಾಗ್ರಾಹಕ ಅಳಗನ್‌ ಮುಂತಾದವರಿದ್ದರು.
ಮೊದಲಿಗೆ ಮಾತನಾಡಿದ್ದು ಸಂತು. ಎಲ್ಲರ ಸಹಕಾರದಿಂದ 54 ದಿನಗಳ ಸತತ ಚಿತ್ರೀಕರಣ ಮಾಡಿದ್ದಾಗಿ ಅವರು ಹೇಳಿದರು. “ಬಹುತೇಕ ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದೆ ªàವೆ. ಇದೊಂದು ದೊಡ್ಡ ಕಥೆ. ಸುಮಾರು 50, 60 ವರ್ಷಗಳ ಟ್ರಾವಲ್‌ ಇರುವಂತಹ ದೊಡ್ಡ ಕಥೆ ಇದು. ವಿಕ್ಕಿ, ಸಂಯುಕ್ತ, ರವಿಶಂಕರ್‌ ಮತ್ತು ಶ್ರುತಿ ಮೇಡಮ್‌ ಅಲ್ಲದೆ ಪ್ರಕಾಶ್‌ ಬೆಳವಾಡಿ, ಸಾಧು ಕೋಕಿಲ, ಅಚ್ಯುತ್‌ ಕುಮಾರ್‌ ಮುಂತಾದವರು ನಟಿಸಿದ್ದಾರೆ’ ಎಂ¨. ಇನ್ನು
ನಿರ್ಮಾಪಕ ಪದ್ಮನಾಭ್‌, ಬಜೆಟ್‌ ಸ್ವಲ್ಪ ಹೆಚ್ಚಾಗಿದ್ದರೂ ಚಿತ್ರ ಚೆನ್ನಾಗಿ ಮೂಡಿ ಬಂದಿರುವುದಾಗಿ ಹೇಳಿದರು. ಅಷ್ಟೇ ಅಲ್ಲ, ಚಿತ್ರ ಚೆನ್ನಾಗಿ ಮೂಡಿ ಬಂದಿರುವುದಕ್ಕೆ ಕಾರಣರಾದ ಇಡೀ ತಂಡಕ್ಕೆ ಅವರು ಥ್ಯಾಂಕ್ಸ್‌ ಹೇಳಿದರು.

“ಕೆಂಡ ಸಂಪಿಗೆ’ ಚಿತ್ರದ ಸಂದರ್ಭದಲ್ಲಿ ನಾುಕ ವಿಕ್ಕಿ ಹೆಚ್ಚು ಮಾತನಾಡುತ್ತಿರಲಿಲ್ಲ. ಈಗ ಕಾಲೇಜ್‌ ಮೆಟ್ಟಿಲು ಹತ್ತಿರುವುದರಿಂದ, ಮಾತು ಕಲಿತಿರುವಂತಿದೆ. “ಶ್ರುತಿ ಮೇಡಮ್‌ ಅಂದರೆ ಭಯ ಆಗತ್ತೆ. ಅವರ ಜೊತೆಗೆ ನಟಿಸುವುದಲ್ಲ, ಅವರ ಪಕ್ಕ ಹೋದರೂ ನಟನೆ ಬರುತ್ತೆ. ಅದೇನೋ ಹೇಳ್ತಾರಲ್ಲ, ಗುದ್ದಾಡಿದರೆ ಗಂಧದ ಜೊತೆಗೆ
ಗುದ್ದಾಡಬೇಕು ಅಂತ. ಶ್ರುತಿ ಅವರ ಜೊತೆಗೆ ನಟನೆ ಮಾಡಿ, ಫ‌ುಲ್‌ ಗಂಧದ ವಾಸನೆ ಬರುತ್ತಿದೆ. ಚಿತ್ರ ಮುಗಿದಿದ್ದೇನೋ ಖುಷಿ, ಜೊತೆಗೆ ಬೇಸರವೂ ಇದೆ’ ಎಂದರು.

Advertisement

ಇನ್ನು ಶ್ರುತಿ, ರವಿಶಂಕರ್‌ರಲ್ಲಿ ಒಬ್ಬ ಅದ್ಭುತ ನಿರ್ದೇಶಕನನ್ನು ಕಂಡರಂತೆ. “ಪ್ರತಿ ಪ್ರಜ್ಞಾವಂತ ನಟನೊಳಗೆ ಒಬ್ಬ ನಿರ್ದೇಶಕ ಇರುವಂತೆ ರವಿಶಂಕರ್‌ ಅವರಲ್ಲೂ ಇದ್ದಾರೆ. ನಾನು ಅವರ ಅಭಿಮಾನಿ’ ಎಂದರೆ, “ನಾನು “ಶ್ರುತಿ’ ಚಿತ್ರದಿಂದಲೂ ಶ್ರುತಿ ಅವರ ಅಭಿಮಾನಿ’ ಎಂದು ಹೇಳಿಕೊಂಡರು. ಇಬ್ಬ ರೂ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಖುಷಿಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next