Advertisement

ಕಾಲೇಜು ಸ್ಥಳಾಂತರ: ವಿದ್ಯಾರ್ಥಿಗಳ ಪ್ರತಿಭಟನೆ

09:01 AM Jun 12, 2019 | Team Udayavani |

ಧಾರವಾಡ: ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಕಾಲೇಜು ಸ್ಥಳಾಂತರ ಮಾಡಿರುವ ಕ್ರಮ ಖಂಡಿಸಿ ನಗರದ ಡಿಡಿಪಿಯು ಕಚೇರಿ ಎದುರು ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಸರ್ವೋದಯ ಶಿಕ್ಷಣ ಟ್ರಸ್ಟ್‌ ಅಡಿಯಲ್ಲಿ ಸಾಧನಕೇರಿಯಲ್ಲಿ ನಡೆದಿರುವ ಆಲೂರು ವೆಂಕಟರಾವ್‌ ಸ್ಮಾರಕ ಪಿಯು ಕಾಲೇಜನ್ನು ಮುಗದ ಗ್ರಾಮಕ್ಕೆ ಸ್ಥಳಾಂತರ ಮಾಡಿರುವುದು ಖಂಡನೀಯ. ಮುಗದ ಗ್ರಾಮದ ಹನುಮಂತಪ್ಪ ಮಾವಳೇರ ಪ್ರೌಢಶಾಲೆ ಆವರಣಕ್ಕೆ ಸ್ಥಳಾಂತರ ಮಾಡುವಂತೆ ಸರ್ಕಾರ ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದೆ. ಆದರೆ ಮುಗದ ಗ್ರಾಮಕ್ಕೆ ತೆರಳಲು ಸರಿಯಾದ ಬಸ್‌ ವ್ಯವಸ್ಥೆ ಇಲ್ಲ. ಮುಖ್ಯ ರಸ್ತೆಯಿಂದ 3 ಕಿಮೀ ನಡೆದು ತೆರಳುವ ಪರಿಸ್ಥಿತಿ ಎದುರಾಗಿದ್ದು, ಹೀಗಾಗಿ ಈಗ ಸಾಧನಕೇರಿಯಲ್ಲಿ ಇರುವ ಸ್ಥಳದಲ್ಲೇ ಕಾಲೇಜು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಶಾಲೆ ಪ್ರಾಚಾರ್ಯರು ಪಿಯು ದ್ವಿತೀಯ ವರ್ಷದ ಪ್ರವೇಶ ಪಡೆಯುವ ಪೂರ್ವದಲ್ಲೇ ನೀಡಬೇಕಾದ ನೋಟಿಸ್‌ ಕೆಲ ದಿನಗಳ ಹಿಂದಷ್ಟೇ ನೀಡಿದ್ದಾರೆ. ಸದ್ಯ ಪ್ರವೇಶಾತಿ ಪ್ರಕ್ರಿಯೆ ಮುಗಿದ ಕಾರಣ ವಿದ್ಯಾರ್ಥಿಗಳು ಬೇರೆ ಕಾಲೇಜುಗಳಲ್ಲೂ ಪ್ರವೇಶ ಪಡೆಯದೆ ಪರದಾಡುವಂತಾಗಿದೆ. ನಗರದಿಂದ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುವ ಕಾರಣಕ್ಕೆ ಕೂಡಲೇ ಸಾಧನಕೇರಿಯಲ್ಲೇ ಕಾಲೇಜು ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಡಿಡಿಪಿಯು ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next