ಜೀವನದ ಯಾತ್ರೆ ನನ್ನ ಸುಖ ಹಾಗೂ ದುಃಖದಲ್ಲಿ ನನ್ನೊಂದಿಗೆ ಭಾಗಿಯಾಗುವರು, ನನಗೆ ಯಾವಾಗಲೂ ಒಳ್ಳೆಯದೇ ಬಯಸುವರು ನನಗೆ ದ್ರೋಹ ಮಾಡಲಾರರು ಎಂಬುದು ನನ್ನ ದೃಢ ನಂಬಿಕೆಯಾಗಿತ್ತು.
ಯಾವ ಸಂಬಂಧವೂ ದೂರವಾಗುವುದಿಲ್ಲವೆಂದುಕೊAಡಿದ್ದೆ. ಆದರೆ ದಿನ ಕಳೆದಂತೆ ಎಲ್ಲವೂ ನನ್ನಿಂದ ದೂರವಾದವು. ಹಾಗಾದರೆ “ನಾನು ಇಷ್ಟು ದಿನ ಅಂದುಕೊಂಡದ್ದೆಲ್ಲಾ ಸುಳ್ಳಾ..? ಅಥವಾ ನಾನು ಅವರನ್ನು ಅತಿಯಾಗಿ ನಂಬಿಕೊಂಡಿದ್ದೆನಾ..? ಎಂಬ ದ್ವಂಧ್ವ ನನ್ನ ಮನದಲ್ಲಿ ಮೂಡಲಾರಂಭಿಸಿತ್ತು.
ಅನುಭವಸ್ಥರೊಬ್ಬರು ನನ್ನೊಂದಿಗೆ ಆಡಿದ ಮಾತೊಂದು ಇದೀಗ ನೆನಪಾಗುತ್ತಿದೆ. “ನೀನೇ ನಿನ್ನ ಆಸರೆ, ಕೊನೆಗೊಂದು ದಿನ ಯಾರೂ ಇಲ್ಲವೆಂದರೂ ಕೂಡ ನಿನೇ ನಿನ್ನ ಕಣ್ಣು ಒರೆಸುವವಳು”ಎಂಬ ಆ ಮಾತು ಇದೀಗ ನಿಜವಾಗಲಾರಂಭಿಸಿದೆ. ನಾನು ಒಬ್ಬಂಟಿಯಾದೆ ಎಂಬ ಕೊರಗು ನನಗುಂಟಾಗುತ್ತಿದೆ. ಆದರೇ, ಕೊರಗಿನಲ್ಲಿ ಕುಗ್ಗಲಾರೆ ಎನ್ನುವ ದೈರ್ಯ ನನ್ನಲ್ಲಿದೆ. ಆದರೂ ಒಮ್ಮೊಮ್ಮೆ ಎಲ್ಲರ ಜೊತೆ ಬೆರೆಯಬೇಕೆನ್ನುವಾಗ ನಾನೊಂಟಿ ಎನ್ನುವ ಕೂಗು ನನ್ನ ಮನಸ್ಸಿನಲ್ಲಿ ಪದೆ ಪದೆ ನನ್ನ ಕಿವಿಗಳಿಗೆ ಬಡಿಯುತ್ತದೆ.
ಮನಸ್ಸು ತುಂಬಾ ನೊಂದು ಹೋಗಿದೆ. ಹೆಚ್ಚಾಗಿ ಅವರೊಂದಿಗೆ ಅವಲಂಬಿತವಾದ ನಾನು ಅವರಿಲ್ಲದೇ ನನ್ನಿಂದ ಏನೂ ಆಗಲಾರದು ಎಂಬ ಸ್ಥಿತಿಗೆ ಬಂದು ಬಿಟ್ಟಿದ್ದೆ. ಹೀಗೆ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ನನ್ನ ಮನಸ್ಸಿಗೆ ಇನ್ನೊಂದು ಕೂಗು ಕೇಳಿಸಿತು. ಅದೇನೆಂದರೆ “ನೀನು ಒಬ್ಬಂಟಿಯಾಗಿ ಏನನ್ನಾದರೂ ಸಾಧಿಸಬಹುದು. ಅಸಾಧ್ಯವೆಂಬುದು ಯಾವುದೂ ಇಲ್ಲ, ಎಲ್ಲಾವೂ ಸಾಧ್ಯ.ಯಾವುದೂ ಅಸಾಧ್ಯವಲ್ಲ. ಏಕಾಗ್ರತೆಯಿಂದ ಕೂಡಿದ ಮನಸ್ಸು ಎಲ್ಲಿದೆಯೋ ಅಲ್ಲಿದೆ ಮಾಗ೯. ನಾನು ಒಬ್ಬಂಟಿ ಎಂದು ಮನಸ್ಸಿನಲ್ಲಿ ಕೊರಗುವ ಬದಲು ಏನನ್ನಾದರೂ ಸಾಧಿಸಿ ಯಶಸ್ಸು ಪಡೆಯಬೇಕು. ಆಗ ನೀನು ಜನರಲ್ಲಿ ಅಲ್ಲ, ಜನರು ನಿನ್ನೊಡನೆ ಇರಲು ಶುರು ಮಾಡುತ್ತಾರೆ”.
ಅಂದಿನಿಂದ ಎಲ್ಲವೂ ನನ್ನದು ಎನ್ನುವ ಸ್ವಾಥ೯ ಬಿಟ್ಟು, ಎಲ್ಲರ ಜೊತೆಗೂ ಬೆರೆಯಲು ಆರಮಭಿಸಿದೆ. ಇಲ್ಲಿ ನನಗೆ ತಿಳಿದಿದ್ದೇನೆಂದರೆ ನಮ್ಮ ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಯಾರ ಮೇಲೂ ಅವಲಂಬಿತರಾಗದೆ, ಒಂಟಿಯಾಗಿ ಮುನ್ನಡೆಯಬೇಕು. ಹೀಗೆ ಎಲ್ಲಾ ಘಟನೆಯೂ ಒಂದು ಪಾಠವನ್ನು ಕಲಿಸುತ್ತದೆ. ಬಾಳು ಮೂರೆ ದಿನ ಬಾಳ ಜೋಪಾನಾ, ನಾವೇ ಓಡ್ಸ್ಬೇಕು ನಮ್ಮ ಗಾಡಿನಾ..
–ರವೀನ ವೇನಿಷಾ ರೊಡ್ರಿಗಸ್
ಆಳ್ವಾಸ್ ಕಾಲೇಜು ಮೂಡುಬಿದರೆ.