Advertisement

ನೆರೆ ಸಂತ್ರಸ್ತರಿಗೆ ನೆರವಾಗಲು ಪರಿಹಾರ ಧನ ಸಂಗ್ರಹ

10:28 AM Aug 10, 2019 | Suhan S |

ಗಜೇಂದ್ರಗಡ: ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಪಟ್ಟಣದ ಚಿನ್ನದ ಕಳಶ ದರ್ಶನ್‌ ತೂಗುದೀಪ ಅಭಿಮಾನಿ ಸಂಘ ಸದಸ್ಯರು ಶುಕ್ರವಾರ ಬಿಡುಗಡೆಯಾದ ಕುರುಕ್ಷೇತ್ರ ಚಿತ್ರ ಪ್ರದರ್ಶನದ ವೇಳೆ ಪರಿಹಾರ ನಿಧಿ ಸಂಗ್ರಹಿಸಿದರು.

Advertisement

ಸಂಘದ ಅಧ್ಯಕ್ಷ ಸೋಹಿಲ್ ಮುಧೋಳ, ಉಪಾಧ್ಯಕ್ಷ ಜಿಲಾನಿ ಖಾಜಿ, ಭರತ್‌ ಅಬ್ಬಿಗೇರಿ, ಬಸವರಾಜ ಪಟ್ಟೇದ, ಕುಶಾಲ ಗಿಣಗಿ, ಬಸವರಾಜ ಹಡಪದ, ಹೈದರ ಚಾಮ್ಲಾಪೂರ, ಶಿವು ಬಳಿಗೇರ, ರಾಕೇಶ ಹರಕಸಾಲಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಮುಸ್ಲಿಂ ಸಮಾಜದಿಂದ ಪ್ರಾರ್ಥನೆ: ಉತ್ತರ ಕರ್ನಾಟಕ ಸೇರಿ ರಾಜ್ಯಾದ್ಯಾಂತ ವರುಣನ ಅವಕೃಪೆಯಿಂದ ಉದ್ಭವಾಗಿರುವ ಪ್ರವಾಹದಿಂದಾಗಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ಮುಸಲ್ಮಾನ ಬಾಂಧವರು ಶುಕ್ರವಾರ ಮಧ್ಯಾಹ್ನದ ನಮಾಜ್‌ ಬಳಿಕ ವಿಶೇಷವಾಗಿ ಪ್ರಾರ್ಥಿಸಿದರು. ಮೃತಕ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ಅಲ್ಲಾಹನು ದಯಪಾಲಿಸಲಿ, ಜೊತೆಗೆ ಜಲ ಪ್ರವಾಹ ತಗ್ಗಲಿ, ಸಂತ್ರಸ್ತರಿಗೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚುವ ಶಕ್ತಿ ನೀಡಲಿ ಎಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next