Advertisement

ಪಠ್ಯಪುಸ್ತಕ ವಿತರಣೆ ಹೆಸರಲ್ಲಿ ಹಣ ವಸೂಲಿ ಸಲ್ಲ

09:31 AM Jun 12, 2018 | |

ಯಾದಗಿರಿ: ಆರ್‌ಟಿಇ ಅಡಿ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಆಯ್ಕೆಯಾದ ಮಕ್ಕಳಿಗೆ ಪಠ್ಯ ಪುಸ್ತಕಗಳ ಹೆಸರಿನಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದು, ಇದನ್ನು ತಡೆಯುವಂತೆ ವಿವಿಧ ಶಾಲೆಯ ಮಕ್ಕಳ ಪಾಲಕರು ಆಗ್ರಹಿಸಿದರು.

Advertisement

ಜಿಲ್ಲಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಆಗಮಿಸಿದ ಪಾಲಕರು, ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆ ಅವರು ಪಠ್ಯಪುಸ್ತಕ ವಿತರಣೆಯಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಆರ್‌ ಟಿಇ ಅಡಿ ಆಯ್ಕೆಯಾದ ಮಕ್ಕಳಿಗೆ ಪಠ್ಯ ಕೂಡ ಪೂರೈಸುತ್ತಿದ್ದರೂ ನಗರದ ಕೆಲ ಪ್ರತಿಷ್ಠಿತ ಶಾಲೆಗಳಲ್ಲಿ ಮನಸ್ಸಿಗೆ ಬಂದಂತೆ ಪಠ್ಯಪುಸ್ತಕಗಳ ಹಣವನ್ನು ವಸೂಲಿ ಮಾಡುತ್ತಿದ್ದಾರೆಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಬಹುತೇಕ ಪಾಲಕರ ಮನೆಯಲ್ಲಿ 3ರಿಂದ 4 ಮಕ್ಕಳಿದ್ದವರಿಗಂತೂ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಸಾಲ ಸೂಲ ಮಾಡಿ, ಪಠ್ಯಪುಸ್ತಕ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪಾಲಕರು ಅಧಿಕಾರಿಗಳೆದುರು ಗೋಳು ತೋಡಿಕೊಂಡಿದ್ದಾರೆ.

ಶಾಲೆಗಳಲ್ಲಿ ಆರ್‌ಟಿಇ ಅಡಿ ಆಯ್ಕೆ ಆಗಿರುವ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಕಿರುಕುಳ ನೀಡುತ್ತಿದ್ದು, ಮಕ್ಕಳು
ಅಳುತ್ತ ಮನೆಗೆ ಬಂದು ಕೂಡುತ್ತಿದ್ದಾರೆ. ನಮ್ಮ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆಂದು ಪಾಲಕರು
ಮೇಲಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳು ಈ ಕುರಿತು ಕಾಳಜಿ ವಹಿಸಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜು ಢವಳೆ, ಅಬ್ದುಲ್‌ ಕರೀಂ ದಾದೂ, ಹಣಮಂತ ಬಾವರ, ಗಣಪತ ಹರಬಾರೆ,
ಸಂತೋಷ ಮೋರೆ, ಅಬ್ದುಲ್‌ ಅಲೀಂ, ಮಲ್ಲಿಕಾರ್ಜುನ, ಕಾಂತಪ್ಪ ಪೂಜಾರಿ, ಮಲ್ಲು, ಹಣಮಂತ ಸಾಯಿಬೋಳ
ಇತರರು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next