ಮಾಗಡಿ: ಪುರಸಭೆಯಲ್ಲಿ ಆದಾಯವನ್ನು ಹೆಚ್ಚಿಸಲು ತೆರಿಗೆಯನ್ನು ಕಡ್ಡಾಯವಾಗಿ ವಸೂಲಿ ಮಾಡಿದಾಗ ಮಾತ್ರ ಪುರಸಭೆ ಉತ್ತಮವಾಗಿ ಕಾರ್ಯ ನಿರ್ವ ಹಿಸಲು ಸಾಧ್ಯ ಆಗುತ್ತದೆ ಎಂದು ಅಧ್ಯಕ್ಷರಿಗೆ ಮತ್ತು ಮುಖ್ಯಾಧಿಕಾರಿಗಳಿಗೆ ಪುರಸಭೆ ಸದಸ್ಯರು ಒತ್ತಾಯಿಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆದ 2023- 24ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪುರಸಭೆ ಸದಸ್ಯರು, ಪ್ರತಿ ಬಜೆಟ್ ನಲ್ಲೂ ಇಷ್ಟು ಆದಾಯ ಬರುತ್ತದೆ. ಇಷ್ಟನ್ನು ಖರ್ಚು ಮಾಡಬಹುದು ಎಂದು ಅಂದಾಜು ಮಾಡುತ್ತಿದ್ದೇವೆ ಹೊರತು, ಶೇ. ನೂರರಷ್ಟು ತೆರಿಗೆ ವಸೂಲಿ ಮಾಡುತ್ತಿಲ್ಲ ಎಂದು ದೂರಿದರು.
ಪಟ್ಟಣದ ಸಾರ್ವಜನಿಕರು ಮನೆ ಕಂದಾಯ ಹಣ ಕಟ್ಟಲು ಬಂದರೂ, ಅವರಿಗೆ ಸರಿಯಾಗಿ ಮಾಹಿತಿ ಮತ್ತು ಬಾಕಿ ಹೆಚ್ಚಳದಿಂದ ತೆರಿಗೆ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು 3 ವಾರ್ಡ್ ಗಳಿಗೆ ಒಂದರಂತೆ ಕಡ್ಡಾಯವಾಗಿ ವಾರ್ಡ್‌ಗಳಲ್ಲಿ ಕರ ವಸೂಲಿ ಶಿಬಿರ ಮಾಡುವ ಮೂಲಕ ಪುರಸಭೆಯ ಆದಾಯ ಹೆಚ್ಚಿಸಿಬೇಕು. ಈಗಾಗಲೇ ಸಾಕಷ್ಟು ಬಾಕಿ ಗಳಿದ್ದು, ಅಧಿಕಾರಿಗಳು ಒಂದು ತಿಂಗಳ ಕಾಲ ಶಿಬಿರ ಮಾಡಿ ತೆರಿಗೆ ಸಂಗ್ರಹಿಸಿದರೆ, ನಮ್ಮ ಆದಾಯ ಹೆಚ್ಚಾಗಿ ಪುರಸಭೆ ಸಿಬ್ಬಂದಿಗೆ ಬೇರೆ ವ್ಯವಹಾರಗಳಿಗೆ ಅನುದಾನ ವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬಹುದು. ಸಿಬ್ಬಂದಿಗಳಿಗೆ ಸಂಬಳ ಕೊಡದ ಪರಿಸ್ಥಿತಿಯಲ್ಲಿ ಪುರ ಸಭೆ ಇದ್ದು, ಈ ಬಗ್ಗೆ ಮುಖ್ಯಾಧಿಕಾರಿಗಳು ಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಪುರಸಭೆ ಸದಸ್ಯ ಅಶ್ವತ್ಥ್, ನಾಮಿನಿ ಸದಸ್ಯ ರಾಘವೇಂದ್ರ, ಉಪಾಧ್ಯಕ್ಷ ರಹಮತ್ ಮುಖ್ಯಾಧಿಕಾರಿಗಳಿಗೆ ಒತ್ತಾಯಿಸಿದರು.
ತೆರಿಗೆ ವಸೂಲಿಗೆ ಪ್ರಾಮುಖ್ಯತೆ: ಪುರಸಭೆ ಮುಖ್ಯಾ ಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ, ಸದಸ್ಯರು ನೀಡಿ ಸಲ ಹೆಯನ್ನು ಒಂದು ವಾರ್ಡ್‌ನಲ್ಲಿ ಇದರ ಪ್ರಯೋಜಕ ವನ್ನು ಮಾಡುತ್ತೇವೆ. ತೆರಿಗೆ ಕಟ್ಟುವ ಸಾರ್ವಜನಿಕರಿಗೆ ಸ್ಥಳದಲ್ಲೇ ಬ್ಯಾಂಕ್ ರಶೀದಿ ಸಿಗುವ ಕೆಲಸ ಮಾಡುತ್ತೇವೆ. ಕರಾವಸೂಲಿ ಹೆಚ್ಚಾದಾಗ ಮಾತ್ರ ಪುರಸಭೆ ನಿರ್ವಹಣೆ ಕೂಡ ಸುಲಭವಾಗಿ ಮಾಡಬಹುದು. ಇದು ಉತ್ತಮ ಸಲಹೆಯಾಗಿದೆ. ತೆರಿಗೆ ವಸೂಲಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇನೆ ಎಂದು ಭರವಸೆ ನೀಡಿದರು.
ರಂಗಮಂದಿರ ಕಟ್ಟಡ ಪುನಶ್ಚೇತನಗೊಳಿಸಿ: ದಲಿತ ಕವಿ ಸಿದ್ದಲಿಂಗಯ್ಯ ಅವರು ಮಾಗಡಿ ಪಟ್ಟಣದ ಹೊಸ ಪೇಟೆಯಲ್ಲಿ ನೆಲೆಸಿದ್ದು, ಅವರ ನೆನಪಿಗಾಗಿ ಪುರಸಭೆ ಯಿಂದ ಮುಂದಿನ ಪೀಳಿಗೆಗೆ ತಿಳಿಯುವ ರೀತಿ ಕವಿಮನೆ ಮಾಡಬೇಕೆಂದು ಒತ್ತಡ ಕೇಳಿ ಬಂದಿತು. ಪಟ್ಟಣದ ಬಯಲು ರಂಗಮಂದಿರ ಶಿಥಿಲಾವಸ್ಥೆ ಯಲ್ಲಿದ್ದು, ಕೂಡಲೇ ಬಯಲು ರಂಗಮಂದಿರ ಕಟ್ಟಡ ಪುನಶ್ಚೇತನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರು. ನಾಮಿನಿ ಸದಸ್ಯ ಮಂಜುನಾಥ ಮಾತನಾಡಿ, ಹೊಂಬಾಳಮ್ಮನ ಪೇಟೆಯಲ್ಲಿ ಪುರಾತನ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ ಅಭಿವೃದ್ಧಿಯಾಗಿದ್ದು, ರಸ್ತೆ ಮತ್ತು ಚರಂಡಿ ವ್ಯವಸ್ಥೆಯನ್ನು ಪುರಸಭೆಯಿಂದ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜನರ ಅಭಿಪ್ರಾಯ ಸಂಗ್ರಹಣೆ: ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಶುಲ್ಕವನ್ನು ಮನೆಗಳಿಗೆ ವಿಧಿಸುತ್ತಿಲ್ಲ. ಇದನ್ನು ವಿಧಿಸುವ ಮೂಲಕ ಪುರಸಭೆಗೆ ಆದಾಯ ತರುವ ಕೆಲಸವನ್ನು ಅಧಿಕಾರಿಗಳು ಮಾಡ ಬೇಕೆಂದು ಪುರಸಭೆ ಸದಸ್ಯ ಅಶ್ವತ್ಥ್ ಮನವಿ ಮಾಡಿದರು. ಸಾರ್ವಜನಿಕರಿಂದ ಬಂದಂತಹ ಅಭಿಪ್ರಾಯ ಸಂಗ್ರಹಿಸಿ 2023-24ನೇ ಬಜೆಟ್ ಮಂಡನೆ ಮಾಡು ವುದಾಗಿ ಪುರಸಭಾ ಅಧ್ಯಕ್ಷೆ ವಿಜಯಾ ತಿಳಿಸಿದರು. ಪುರಸಭೆ ನಾಮಿನಿ ಸದಸ್ಯ ಸಿದ್ದಪ್ಪ, ದೀಪಾ, ನಾಗೇಂದ್ರ ಹಾಗೂ ಪುರಸಭಾ ಅಧಿಕಾರಿಗಳು ಇದ್ದರು.
ಕ್ರೀಡೆಗೆ ಪ್ರೋತ್ಸಾಹ: ಮುಖ್ಯಾಧಿಕಾರಿ ಕೃಷ್ಣಪ್ರಸಾದ್ :
ಮಾಗಡಿ ತಾಲೂಕು ಕಬಡ್ಡಿಗೆ ಹೆಚ್ಚು ಪ್ರಸಿದ್ಧಿ ಹೊಂದಿದ್ದು, ಪುರಸಭೆಯಿಂದ ಕಬಡ್ಡಿ ಆಡುವಂತಹ ಆಟಗಾರರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಕಬಡ್ಡಿ ಪಂದ್ಯಾವಳಿಗಳು ಆಯೋಜನೆ ಆದಾಗ ಆಯೋಜಕರಿಗೆ ಸಹಾಯಧನ ನೀಡಬೇಕೆಂದು ಪತ್ರಕರ್ತರು ಮತ್ತು ಸಾರ್ವಜನಿಕರು ಮನವಿ ಮಾಡಿದ್ದರು. ಇದಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಸಹಾಯ ಮಾಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಭರವಸೆ ನೀಡಿದರು.