Advertisement
1988ರಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಓವರ್ ಹೆಡ್ ಟ್ಯಾಂಕ್ ಸುಮಾರು 50 ಸಾವಿರ ಲೀ. ನೀರು ಶೇಖರಣಾ ಸಾಮಾರ್ಥ್ಯಹೊಂದಿದ್ದು, ಗ್ರಾ.ಪಂ.ವ್ಯಾಪ್ತಿಯ ಸುಮಾರು 100 ಮನೆಗಳಿಗೆ ಕುಡಿಯುವ ನೀರು ಒದಗಿಸುತ್ತಿದೆ.
ಸುಮಾರು 30 ವರ್ಷ ಹಿಂದೆ ನಿರ್ಮಾಣಗೊಂಡಿರುವ ಈ ಓವರ್ ಹೆಡ್ ಟ್ಯಾಂಕ್‌ನ ಸ್ಲಾಬ್‌ಗಳು ಹಾಗೂ ಪಿಲ್ಲರ್ ಬಿರುಕು ಬಿಟ್ಟು ಸಿಮೆಂಟ್ ತುಂಡು ತುಂಡಾಗಿ ಬೀಳುತ್ತಿದೆ. ಪಂಚಾಯತ್ ಕಟ್ಟಡದ ಸಮೀಪವೇ ಇರುವ ಓವರ್ ಹೆಡ್ ಟ್ಯಾಂಕ್ ಕುಸಿತಗೊಂಡಲ್ಲಿ ಅಪಾರ ಪ್ರಮಾಣದ ಹಾನಿಯಾಗುವ ಜತೆಗೆ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಸಂಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ.
ಬಿರುಕು ಬಿಟ್ಟಿರುವ ಓವರ್ ಹೆಡ್ ಟ್ಯಾಂಕ್‌ನ್ನು ಕೂಡಲೇ ದುರಸ್ತಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Related Articles
ಪಂಚಾಯತ್ ಬಳಿ ಇರುವ ಓವರ್ ಹೆಡ್ ಟ್ಯಾಂಕ್ ದುರಸ್ತಿ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ತ್ವರಿತವಾಗಿ ದುರಸ್ತಿ ಪಡಿಸುವ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು.
– ಸದಾನಂದ ಪ್ರಭು, ಅಧ್ಯಕ್ಷರು, ನೀರೆ ಗ್ರಾ.ಪಂ.
Advertisement