Advertisement
ಎಳೆಯರ ಮನಸ್ಸೆಂಬುದು ಬಹಳ ನಿಷ್ಕಲ್ಮಶ ಮತ್ತು ನಿಷ್ಕಪಟ. ಅವರಲ್ಲಿರುವ ದಯಾಪರತೆ, ಸ್ನೇಹಶೀಲತೆ, ಪರೋಪಕಾರ ಗುಣಗಳನ್ನು ಗುರುತಿಸದೇ ಅವರ ಸುತ್ತ ಶಿಸ್ತು ಎನ್ನುವ ಬೇಲಿಯನ್ನು ನಿರ್ಮಿಸುವುದು, ಎಳೆಯ ಮನಗಳ ನಡುವೆ ಶ್ರೇಷ್ಠತೆ ಮತ್ತು ಕನಿಷ್ಠತೆ ಎನ್ನುವ ವಿಷ ಬೀಜ ಬಿತ್ತುವುದು, ತರಗತಿ ಕೊಠಡಿಯೊಳಗೆ ಎಳೆಯ ಮನಸ್ಸುಗಳ ನಡುವೆ ಅನಾರೋಗ್ಯಕರ ಸ್ಪರ್ಧೆಯಿಂದ ಉಂಟಾಗುವ ಅನಾಹುತ, ಭಾಷೆ-ಜನಾಂಗಗಳ ನಡುವೆ ಅಡ್ಡ ಗೋಡೆ ನಿರ್ಮಿಸುವುದು ಇವೆಲ್ಲವೂ ನಮ್ಮನ್ನು ಮತ್ತೂಮ್ಮೆ ಎಚ್ಚರಿಸುವಂತಿದೆ. ಕೇವಲ ಏಳು ದಿನಗಳಲ್ಲಿ ಶ್ರೀಪಾದ ಭಟ್ಟರ ಮಾಂತ್ರಿಕ ನಿರ್ದೇಶನದಲ್ಲಿ ಪಳಗಿದ ಇಪ್ಪತ್ತೈದಕ್ಕೂ ಅಧಿಕ ಎಳೆಯರು ರಂಗದ ಮೇಲೆ ಬಹಳ ಲವಲವಿಕೆಯೊಂದಿಗೆ ಪಾತ್ರಗಳನ್ನು ನಿರ್ವಹಿಸುತ್ತಾ ಜತೆಗೆ ಸಂಗೀತವನ್ನು ಭಾವಾಭಿವ್ಯಕ್ತಿಯೊಂದಿಗೆ ಹಾಡುತ್ತಾ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು. ವಿಶೇಷವೆಂದರೆ ಯಾವುದೇ ಪ್ರಸಾಧನಗಳಿಲ್ಲದೇ ಸಹಜ ಶಾಲಾ ಸಮವಸ್ತ್ರದಲ್ಲೆ ನಟಿಸಿ, ಕಥೆಯಿಂದ ಕಥೆಗೆ ಬೇಕಾಗುವ ಹಿನ್ನೆಲೆಯ ರಂಗ ಪರಿಕರಗಳನ್ನು ತಾವೇ ಕ್ಷಣದೊಳಗೆ ಬದಲಾಯಿಸುತ್ತಾ ಮುಂದೆ ಸಾಗುತ್ತಿದ್ದುದು ಪ್ರಶಂಸಾರ್ಹವಾಗಿತ್ತು.
Advertisement
ಎಳೆಯರ ಮನಸ್ಸಿನ ಪ್ರತಿಬಿಂಬ ಕೊಲಾಜ್ ನಾಟಕ
07:25 AM Feb 18, 2017 | |
Advertisement
Udayavani is now on Telegram. Click here to join our channel and stay updated with the latest news.