Advertisement

ಬಾಲ್ಯವಿವಾಹ ತಡೆಗೆ ಸಹಕರಿಸಿ

11:28 AM Sep 18, 2018 | |

ಹುಣಸೂರು: ಹೆಣ್ಣು ಮಕ್ಕಳ ಭವಿಷ್ಯಕ್ಕೆ ಎರವಾಗಲಿರುವ ಬಾಲ್ಯ ವಿವಾಹ ಕಾನೂನು ವಿರೋಧಿಯಾಗಿದ್ದು, ಸರ್ವರೂ ವಿರೋಧಿಸಬೇಕು ಹಾಗೂ ತಡೆಗಟ್ಟಬೇಕೆಂದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ತಾಲೊಕು ಯೋಜನಾಧಿಕಾರಿ ಯಶೋದಾ ಶೆಟ್ಟಿ ಮನವಿ ಮಾಡಿದರು.

Advertisement

ತಾಲೂಕಿನ ಯಶೋದರಪುರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಸೃಜನಶೀಲ ಯೋಜನೆಯಡಿ ಬಾಲ್ಯ ವಿವಾಹ ತಡೆಗಟ್ಟುವ ಕುರಿತ ಮಹಿಳಾ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ, ಆಟವಾಡುವ ಸಮಯದಲ್ಲಿ ವಿವಾಹ ಮಾಡಿದಲ್ಲಿ ಮದುವೆ, ಗಂಡ, ಮಕ್ಕಳೇನೆಂದು ಅರಿವಿಲ್ಲದೇ, ಗರ್ಭಕೋಶದ ತೊಂದರೆ, ರಕ್ತ ಹೀನತೆಯಿಂದ ಬಳಲುತ್ತಾರೆ.

ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಇಡೀ ಜೀವನ ಹಾಳು ಮಾಡಿಕೊಂಡು ಕುಟುಂಬಗಳು ಬೀದಿಗೆ ಬೀಳಲಿವೆ. ನಿಮ್ಮ ಊರುಗಳಲ್ಲಿ ಯಾರೇ ಬಾಲ್ಯ ವಿವಾಹ ನಡೆಸುತ್ತಿದ್ದಲ್ಲಿ ಅವರಿಗೆ ತಿಳಿ ಹೇಳಿ ಮದುವೆ ನಿಲ್ಲಿಸಬೇಕೆಂದು ಮನವಿ ಮಾಡಿದರು. ಶಿಕ್ಷಣ ಇಲಾಖೆಯ ಸೋಮಶೇಖರ್‌, ಹಾಡು ಮೂಲಕ ಬಾಲ್ಯ ವಿವಾಹದಿಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಸಿದರಲ್ಲದೆ,

ಬಾಲ್ಯ ವಿವಾಹ ಮಾಡಿದ ಎರಡು ಕುಟುಂಬಗಳಷ್ಟೆ ಅಲ್ಲಾ, ಮದುವೆಯಲ್ಲಿ ಪಾಲ್ಗೊಳ್ಳುವ, ಊಟ ಮಾಡುವವರ ಮೇಲೆಯೂ ಪ್ರಕರಣ ದಾಖಲಾಗಲಿದೆ. ಒಂದು ವೇಳೆ ಬಾಲ್ಯ ವಿವಾಹ ನಡೆಯುವುದು ತಿಳಿದಲ್ಲಿ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದಲ್ಲಿ ಮದುವೆ ನಿಲ್ಲಿಸಲು ಸಹಕಾರಿಯಾಗಲಿದೆ ಎಂದರು. 

ಇದೇ ವೆೇಳೆ ಬಾಲ್ಯ ವಿವಾಹದಿಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಸುವ ಬೀದಿ ನಾಟಕ ಪ್ರದರ್ಶಿಸಿದರು. ಗ್ರಾಮದ ಮುಖಂಡ ಪುಳ್ಳಯ್ಯ, ಜ್ಞಾನವಿಕಾಸ ತಾಲೂಕು ಸಮನ್ವಯಾಧಿಕಾರಿ ಗೀತಾ, ಮೇಲ್ವಿಚಾರಕರಾದ ರಾಧಾಕೃಷ್ಣಭಟ್‌, ಅಶ್ವಿ‌ನಿ ಮಾತನಾಡಿದರು. ಸೇವಾ ಪ್ರತಿನಿಧಿ ಮಂಜುಳಾ, ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮೀ ಮತ್ತಿತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next