Advertisement

ಕೊರೊನಾ 3ನೇ ಅಲೆ ಕೊನೆಗಾಣಿಸಲು ಸಹಕರಿಸಿ

09:22 PM Jan 14, 2022 | Team Udayavani |

ಮುಳಬಾಗಿಲು: ಕೊರೊನಾ ಮೂರನೆ ಅಲೆ ಕೊನೆಗಾಣಿಸಲು ಪ್ರತಿಯೊಬ್ಬರ ಸಹಕಾರ ತುಂಬಾ ಮುಖ್ಯ. ಆದ್ದರಿಂದ ಸರ್ಕಾರದ ನಿಯಮ ತಪ್ಪದೇ ಪಾಲನೆ ಮಾಡಬೇಕೆಂದು ಶಾಸಕ ಎಚ್‌.ನಾಗೇಶ್‌ ಹೇಳಿ ದರು.

Advertisement

ತಾಲೂಕಿನ ಜೆ.ಅಗ್ರಹಾರ ಬಳಿ ಇರುವ ವಾರಿಧಿ ಪಬ್ಲಿಕ್‌ ಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಯುವಸೌರಭ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ದೇಶವು ಕೊರೊನಾ ಎರಡು ಅಲೆಗಳಿಂದ ತುಂಬಾ ನಷ್ಟ ಅನುಭವಿಸಿತು. ಆದ್ದರಿಂದ ಈ ಬಾರಿ ಬರಲಿರುವ ಮೂರನೇ ಅಲೆಯನ್ನು ಮೊದಲಿನಲ್ಲಿಯೇ ತಡೆಗಟ್ಟಲು ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕೆಂದು ಸಲಹೆ ನೀಡಿದರು. ಸಂಪೂರ್ಣ ಸಹಕಾರ: ತಾಪಂ ಮಾಜಿ ಅಧ್ಯಕ್ಷ ಎ.ವಿ.ಶ್ರೀನಿವಾಸ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಯುವಕರು ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ.

ಆದರೆ, ನಮ್ಮ ನಾಡು, ನುಡಿ ಹಾಗೂ ನಮ್ಮಲ್ಲಿನ ಕಲೆ ಮುಂದಿನ ತಲೆಮಾರಿನವರಿಗೆ ಪರಿಚಯ ಮಾಡಿಕೊಡುವ ಪ್ರಯತ್ನ ವನ್ನು ಮಾಡುವ ಇಂತಹ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು. ಮುಂದಿನ ತಲೆಮಾರಿಗೆ ಪರಿಚಯಿಸಿ: ಮಲ್ಲನಾಯಕನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎಸ್‌.ರಮೇಶ್‌ ಮಾತನಾಡಿ, ನಮ್ಮ ಪೂರ್ವಿಕರು ಬಿಟ್ಟು ಹೋದ ಹಲವು ಕಲೆಗಳನ್ನು ಇವತ್ತಿನ ಯುವ ಸಮುದಾಯದವರು ಬಳಕೆ ಮಾಡದ ಕಾರಣದಿಂದ ಸ್ಥಳೀಯ ಕಲೆಗಳು ಅಳಿವಿನಂಚಿಗೆ ಸರಿಯುತ್ತಿವೆ. ಆದ್ದರಿಂದ ನಮ್ಮ ಕಲೆಗಳನ್ನು ಉಳಿಸಿಕೊಂಡು ಮುಂದಿನ ತಲೆಮಾರಿನ ಜನರಿಗೆ ಪರಿಚಯ ಮಾಡುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಿದೆ ಎಂದರು. ವಾರಿಧಿ ಶಾಲೆ ಅಧ್ಯಕ್ಷ ಮಂಜುನಾಥ್‌ ರೆಡ್ಡಿ, ಶಾಲೆ ಪ್ರಾರಂಭವಾಗಿ ಮೂರು ವರ್ಷ ಕಳೆದಿದೆ.

ಆದರೆ, ಕೊರೊನಾದಿಂದ ಶಾಲೆಗಳು ಮಾತ್ರ ನಡೆಯುತ್ತಿಲ್ಲ, ಮಕ್ಕಳ ವಿದ್ಯಾಭ್ಯಾಸವನ್ನು ದೃಷ್ಟಿಕೋನದಲ್ಲಿ ಇರಿಸಿಕೊಂಡು ಮನೆಯಲ್ಲಿ ಪಾಠಪ್ರವಚನ ಮಾಡಲಾಗಿದೆ. ಅಲ್ಲದೆ, ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು. ನಾಸಿಕ್‌ ಡೋಲು, ವೀರಗಾಸೆ, ಕಂಸಾಳೆ, ಗಾರುಡಿಗೊಂಬೆ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಗೀತೆಗಳು, ಗಮಕ ಕಥಾ ಕೀರ್ಥನಾ, ನಾಟಕ ಸೇರಿ ವಿವಿಧ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಎನ್‌.ನರೇಂದ್ರ ಬಾಬು, ವಾರಿಧಿ ಶಾಲೆ ಸಂಸ್ಥಾಪಕ ಅಧ್ಯಕ್ಷ ಸುಬ್ಟಾರೆಡ್ಡಿ, ದರಕಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಎಪಿಎಂಸಿ ಅಧ್ಯಕ್ಷ ಜಯರಾಮರೆಡ್ಡಿ, ಮಾಜಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್‌, ಯುವ ಮುಖಂಡ ಗೊಲ್ಲಹಳ್ಳಿ ಜಗದೀಶ್‌, ನಗರಸಭೆ ನಾಮ ನಿರ್ದೇಶಕ ರಾಜೇಶ್‌, ಪದ್ಮನಾಭ ಸ್ವಾಮಿ, ಅಂತಾರಾಷ್ಟ್ರೀಯ ಕ್ರೀಡಾಪಟು ರಾಮಮೂರ್ತಿ ನಾಯ್ಡು, ಪರಶುರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಕೀಲುಹೊಳಲಿ ಸತೀಶ್‌, ಗ್ರಾಮೀಣ ಮಹಿಳಾ ಒಕ್ಕೂಟ ಮುಖ್ಯಸ್ಥೆ ಜಯಮ್ಮ, ವಾರಿಧಿ ಶಾಲೆ ಸಂಯೋಜಕ ದೊಮ್ಮಸಂದ್ರ ನರಸಿಂಹ ಇತರರಿದ್ದರು

Advertisement

 

Advertisement

Udayavani is now on Telegram. Click here to join our channel and stay updated with the latest news.

Next