Advertisement
ಬೆಂಗಳೂರು 13.9 ಡಿಗ್ರಿ ಸೆಲ್ಸಿಯಸ್
ಕಳೆದ 10 ವರ್ಷಗಳಲ್ಲೇ ನವೆಂಬರ್ ತಿಂಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನವಿದು. ಅಂದ ಹಾಗೆ ಇದು ಸೋಮವಾರದ ತಾಪಮಾನ. ಮಂಗಳವಾರವೂ ಇದೇ ರೀತಿಯ ವಾತಾವರಣವಿತ್ತು. ಎರಡೂ ದಿನಗಳೂ ಮಂಜು ಕವಿದ ವಾತಾವರಣದಂತಿತ್ತು. 2012ರ ನವೆಂಬರ್ 21ರಂದು 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಹಾಗೆಯೇ, ಬೆಂಗಳೂರಿನಲ್ಲಿ 1967ರ ನವೆಂಬರ್ 15ರಂದು ಶೇ.9.6ರಷ್ಟು ತಾಪಮಾನ ದಾಖಲಾಗಿತ್ತು. ಇದೇ ಇದುವರೆಗಿನ ದಾಖಲೆ. ಇನ್ನು ಇದೇ 26, 27 ಮತ್ತು 28ರಂದು ಮತ್ತೆ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಚಳಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
8.9 ಡಿಗ್ರಿ ಸೆಲ್ಸಿಯಸ್
ದೆಹಲಿಯಲ್ಲಿಯೂ ಸೋಮವಾರ ಮತ್ತು ಮಂಗಳವಾರದ ತಾಪಮಾನ ಮಬ್ಬುಕವಿದ ಹಾಗೆಯೇ ಇತ್ತು. ಅಲ್ಲದೆ, ಮಾಲಿನ್ಯ ಮಟ್ಟವೂ ಡೇಂಜರ್ ಎಂಬುವಷ್ಟರ ಮಟ್ಟಿಗೆ ಇದೆ. ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 9.0ಡಿಗ್ರಿ ಸೆಲ್ಸಿಯಸ್ ಇತ್ತು. ಈ ವಾರವಿಡೀ ಇದೇ ರೀತಿಯ ತಾಪಮಾನವಿರುವ ಸಾಧ್ಯತೆ ಇದೆ.
Related Articles
17 ಡಿಗ್ರಿ ಸೆಲ್ಸಿಯಸ್
ಮುಂಬೈನಲ್ಲಿ ಕಳೆದ 5 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಕನಿಷ್ಠ ತಾಪಮಾನ ಕಾಣಿಸಿಕೊಂಡಿದೆ. ಸೋಮವಾರ ಇಲ್ಲಿ 17 ಡಿಗ್ರಿ ಸೆಲ್ಸಿಯಸ್ ಚಳಿ ಇತ್ತು. 2017ರಿಂದ ಈಚೆಗೆ ಇದೇ ಅತ್ಯಂತ ಕಡಿಮೆ ತಾಪಮಾನ. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಮುಂಬೈ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಮಂಗಳವಾರ ಮುಂಬೈನಲ್ಲಿ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬುಧವಾರವೂ ಹೆಚ್ಚು ಚಳಿ ಇರಲಿದೆ.
Advertisement
ಚೆನ್ನೈ 23 ಡಿಗ್ರಿ ಸೆಲ್ಸಿಯಸ್
ಕರಾವಳಿ ನಗರವಾಗಿರುವ ತಮಿಳುನಾಡು ರಾಜಧಾನಿ ಚೆನ್ನೈಗೂ ಚಳಿ ಕಾಟ ತಪ್ಪಿಲ್ಲ. ಇಲ್ಲಿ ಒಂದು ರೀತಿಯ ಮಂಜು ಮಸುಕಿದ ವಾತಾವರಣ ಕಂಡು ಬಂದಿದ್ದು, ಹಿಮ ಸುರಿದಂಥ ಅನುಭವವಾಗಿದೆ. ಮಂಗಳವಾರವೂ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಣಿಸಿಕೊಂಡಿದೆ. ಇಲ್ಲಿ ಒಂದು ರೀತಿ ಮಳೆ ಬರುವ ಹಾಗೂ ಇದ್ದು, ಚಳಿಯ ಕಾರಣದಿಂದಾಗಿ ಸಂಚಾರಕ್ಕೂ ಕಷ್ಟವೆನಿಸುವ ವಾತಾವರಣ ಕಂಡು ಬಂದಿದೆ. ಮಡಿಕೇರಿ
16 ಡಿಗ್ರಿ ಸೆಲ್ಸಿಯಸ್
ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿವೆತ್ತಿರುವ ಮಡಿಕೇರಿಯಲ್ಲಿಯೂ ಅತ್ಯಂತ ಚಳಿ ಕಾಣಿಸಿಕೊಂಡಿದೆ. ಇಲ್ಲಿ ಮಂಗಳವಾರ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಣಿಸಿಕೊಂಡಿದೆ. ಕರ್ನಾಟಕದ ಪ್ರಮುಖ ನಗರಗಳ ತಾಪಮಾನ(ಕನಿಷ್ಠ)
ಕಲಬುರಗಿ – 21 ಡಿಗ್ರಿ ಸೆಲ್ಸಿಯಸ್
ಮಂಗಳೂರು – 24 ಡಿಗ್ರಿ ಸೆಲ್ಸಿಯಸ್
ಮೈಸೂರು – 19 ಡಿಗ್ರಿ ಸೆಲ್ಸಿಯಸ್
ಬೆಳಗಾವಿ – 19 ಡಿಗ್ರಿ ಸೆಲ್ಸಿಯಸ್
ಚಿತ್ರದುರ್ಗ – 19 ಡಿಗ್ರಿ ಸೆಲ್ಸಿಯಸ್
ಗದಗ – 21 ಡಿಗ್ರಿ ಸೆಲ್ಸಿಯಸ್
ಕಾರವಾರ – 25 ಡಿಗ್ರಿ ಸೆಲ್ಸಿಯಸ್
ಹುಬ್ಬಳ್ಳಿ – 21 ಡಿಗ್ರಿ ಸೆಲ್ಸಿಯಸ್
ಮಡಿಕೇರಿ – 16 ಡಿಗ್ರಿ ಸೆಲ್ಸಿಯಸ್
ದಾವಣಗೆರೆ – 21 ಡಿಗ್ರಿ ಸೆಲ್ಸಿಯಸ್
ಶಿವಮೊಗ್ಗ – 20 ಡಿಗ್ರಿ ಸೆಲ್ಸಿಯಸ್
ಕೋಲಾರ – 19 ಡಿಗ್ರಿ ಸೆಲ್ಸಿಯಸ್