Advertisement

ರಾಷ್ಟ್ರ ರಾಜಧಾನಿಯಲ್ಲಿ 58 ವರ್ಷಗಳಲ್ಲೇ ಅತಿ ಹೆಚ್ಚು ಚಳಿ!

12:10 AM Nov 01, 2020 | sudhir |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ 58 ವರ್ಷಗಳಲ್ಲೇ “ಅತಿಹೆಚ್ಚು ಚಳಿಯ ಅಕ್ಟೋಬರ್‌’ಗೆ ಸಾಕ್ಷಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Advertisement

1962ರ ಅಕ್ಟೋಬರ್‌ನಲ್ಲಿ ಕನಿಷ್ಠ ಸರಾಸರಿ 16.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. 58 ವರ್ಷಗಳ ಬಳಿಕ ಈ ವರ್ಷದ ಅಕ್ಟೋಬರ್‌ನಲ್ಲಿ ಕನಿಷ್ಠ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್‌ ತಾಪಮಾನಕ್ಕೆ ದಿಲ್ಲಿ ಮೈಯೊಡ್ಡಿದೆ.

ಇಷ್ಟು ವರ್ಷ ಸರಾಸರಿ ತಾಪಮಾನ 19.1 ಡಿ.ಸೆ. ಉಷ್ಣಾಂಶ ವರದಿಯಾಗುತ್ತಿತ್ತು. ಗುರುವಾರ ದಾಖಲೆಯೆಂಬಂತೆ 12.5 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು 26 ವರ್ಷಗಳಲ್ಲೇ ಅತಿ ಕಡಿಮೆ. 1994ರಲ್ಲಿ ದಾಖಲಾಗಿದ್ದ 12.3 ಡಿಗ್ರಿ ಸೆಲ್ಸಿಯಸ್‌ ದೆಹಲಿಯ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಕನಿಷ್ಠ.

Advertisement

Udayavani is now on Telegram. Click here to join our channel and stay updated with the latest news.

Next