ಡೌನ್ ಜಾರಿಯಲ್ಲಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲೂ ಜನಜೀವನ ಮನೆಗಳಿಗೇ
ಸೀಮಿತವಾಗಿಬಿಟ್ಟಿದೆ. ಆದರೆ ಹೀಗೆ ಏಕಾಏಕಿ ಎಲ್ಲರೂ ಮನೆಯಲ್ಲೇ ಕೂರುವಂತಾಗಿರುವುದರಿಂದ ಬಗೆಬಗೆಯ ಸೈಡ್ ಎಫೆಕ್ಟ್ಸ್ ಕೂಡ ಕಾಣಿಸಲಾರಂಭಿಸಿವೆ. ಇದರಲ್ಲಿ ಪ್ರಮುಖವಾದದ್ದೆಂದರೆ, ಕೆಲವು ದಿನಗಳಿಂದ ಜಗತ್ತಿನಾದ್ಯಂತ ಜನರಲ್ಲಿ ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಪ್ರಮಾಣ ಹೆಚ್ಚುತ್ತಿರುವುದು.
Advertisement
ಇಂಡಿಯನ್ ಸೈಕಿಯಾಟ್ರಿ ಸೊಸೈಟಿಯ ಒಂದು ಸಮೀಕ್ಷೆಯ ಪ್ರಕಾರ, ಮಾನಸಿಕ ಒತ್ತಡದಿಂದ ಬಳಲುತ್ತಿರುವವರ ಹಾಗೂ ತತ್ಪರಿಣಾಮವಾಗಿ ಮನೋವೈದ್ಯರ ಬಳಿ ತೆರಳುತ್ತಿರುವವರ ಸಂಖ್ಯೆ ಶೇ. 20ರಷ್ಟು ಅಧಿಕವಾಗಿದೆಯಂತೆ. ಇದು ಒಂದು ವಾರದಲ್ಲಿ ದಾಖಲಾದ ಅಂಕಿಅಂಶಗಳು ಎನ್ನುವುದು ಗಮನಿಸಬೇಕಾದ ಸಂಗತಿ!ಈ ಅಧ್ಯಯನ ವರದಿಯನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಸತತ 24 ಗಂಟೆ ಮನೆಯಲ್ಲೇ ಇರುವುದರಿಂದಾಗಿ ನಮ್ಮ ಸ್ವಭಾವದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುವುದು ಹಾಗೂ ಈ ಹೊಸ ಜೀವನ ಶೈಲಿಗೆ ಒಗ್ಗಿಕೊಳ್ಳುವವರೆಗೂ ಕಿರಿ ಕಿರಿಯಾಗುವುದು, ಬೇಸರವಾಗುವುದು, ಆತಂಕವಾಗುವುದು ಸಹಜವೇ.
Related Articles
Advertisement
ಸತ್ಯವೇನೆಂದರೆ, ಏಕಾಂತವೆನ್ನುವುದು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು, ನಾವು ನಡೆದು ಬಂದ ಹಾದಿಯನ್ನು ವಿಶ್ಲೇಷಿಸಲು, ತಪ್ಪುಗಳನ್ನು ತಿದ್ದಿಕೊಳ್ಳಲು, ಭವಿಷ್ಯಕ್ಕೆ ನೀಲ ನಕ್ಷೆ ರಚಿಸಲು, ಸೂಕ್ತ ತಯಾರಿ ಮಾಡಿಕೊಳ್ಳಲು ಎದುರಾದ ಸದವಕಾಶವೂ ಹೌದು. ಮನುಷ್ಯ ಸಂಘಜೀವಿ, ಅವನಿಗೆ ಇನ್ನೊಬ್ಬ ಮನುಷ್ಯನ ಒಡನಾಟ ಬಹುಮುಖ್ಯ. ಆದರೆ ಈಗ ಕೊರೊನಾ ಹರಡುವ ಪರಿ ಹೇಗಿದೆಯೆಂದರೆ, ಒಬ್ಬರನ್ನು ಕಂಡರೆ ಇನ್ನೊಬ್ಬರು ಹೆದರುವಂತಾಗಿದೆ.
ಹೀಗೆರುವುದು, ಈ ಕ್ಷಣದ ಅಗತ್ಯ ಎನ್ನುವ ಸತ್ಯವನ್ನು ಒಪ್ಪಿಕೊಳ್ಳೋಣ. ಲಾಕ್ ಡೌನ್ ಬಗ್ಗೆ ಕೊರಗದೆ, ಇದು ನಮ್ಮ ಆತ್ಮಾವಲೋಕನಕ್ಕೆ ಸಿಕ್ಕಿದ ಅವಕಾಶವೆಂದು ಭಾವಿಸೋಣ. ಮಾನಸಿಕ ಒತ್ತಡದಿಂದ – ಖಿನ್ನತೆಯಿಂದ ದೂರವಾಗುವುದಕ್ಕೆ ಮನೆಯವರೊಂದಿಗೆ ಮಾತನಾಡುವುದು ಉತ್ತಮ ಮಾರ್ಗ ಎನ್ನುವುದೂ ನೆನಪಿರಲಿ.
ಪರಿಸ್ಥಿತಿಯನ್ನು ಹತೋಟಿಗೆ ತರಲು ಸರಕಾರ, ಆರೋಗ್ಯ ಇಲಾಖೆಗಳು, ವೈದ್ಯಕೀಯ ಸಿಬ್ಬಂದಿ ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ನಾವು ಮನೆಯಲ್ಲಿದ್ದು ನಮ್ಮ ದೈಹಿ ಕ-ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಈ ಹೋರಾಟಕ್ಕೆ ನಮ್ಮದೇ ಆದ ರೀತಿಯಲ್ಲಿ ಕೊಡುಗೆ ಕೊಡೋಣ.