Advertisement

ಕಾಫಿ ಆ್ಯಂಡ್‌ ಪೇಸ್ಟ್‌

09:13 AM Apr 25, 2019 | Hari Prasad |

ಕಾಫಿ, ಆರೋಗ್ಯಕ್ಕೆ ಒಳ್ಳೆಯದಲ್ಲ. ದಿನಾ ಕಾಫಿ ಕುಡಿದರೆ ಚರ್ಮ ಕಪ್ಪಾಗಿ ಬಿಡುತ್ತದೆ ಅಂತ ಹೇಳುವುದನ್ನು ಕೇಳಿರುತ್ತೀರಿ. ಚರ್ಮತಜ್ಞರು ಕೂಡಾ, ಜಾಸ್ತಿ ಕಾಫಿ-ಟೀ ಕುಡಿಯಬೇಡಿ ಅಂತಲೇ ಹೇಳುತ್ತಾರೆ. ಆದರೂ, ಬೆಳಗ್ಗೆ ಪೇಪರ್‌ ಜೊತೆಗೆ ಸಾಥ್‌ ನೀಡಲು ಕಾಫಿಗಿಂತ ಬೇರೆ ಗೆಳೆಯ ಬೇಕೆ? ಕಾಫಿ, ಕೇವಲ ಪೇಯವಾಗಷ್ಟೇ ಉಳಿದಿಲ್ಲ. ಸೌಂದರ್ಯವರ್ಧಕವಾಗಿಯೂ ಅದು ಕೆಲಸ ಮಾಡುತ್ತದೆ ಅಂತ ನಿಮಗ್ಗೊತ್ತಾ?

Advertisement

ಕೂದಲ ಬುಡಕ್ಕೆ ಮಸಾಜ್‌
ಮುಖದ ಕಾಂತಿ ಹೆಚ್ಚಿಸಲು ಹೇಗೆ ಫೇಶಿಯಲ್‌ ಮಾಡಿಸುತ್ತೀರೋ, ಹಾಗೆಯೇ ಕೂದಲಿನ ಬುಡಕ್ಕೂ ಮಸಾಜ್‌ನ ಅಗತ್ಯ ಇರುತ್ತದೆ. ಕುದಿಸಿದ ಕಾಫಿಯನ್ನು ತಣ್ಣಗಾದ ಮೇಲೆ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್‌ ಮಾಡಿ, ಹತ್ತು ನಿಮಿಷದ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ, ಕೂದಲ ಬುಡದಲ್ಲಿನ ಒಣ ಚರ್ಮ ಉದುರಿ ಹೋಗಿ ಚರ್ಮ ಸ್ವಚ್ಛವಾಗುತ್ತದೆ. ಕೂದಲು ಸೊಂಪಾಗಿ, ಸಧೃಡವಾಗಿ ಬೆಳೆಯಲು ಸಹಕಾರಿಯಾಗುತ್ತದೆ.

ಊದಿದ ಕಣ್ಣಿಗೆ ಹಚ್ಚಿ ಜಾಸ್ತಿ ಹೊತ್ತು ಕಂಪ್ಯೂಟರ್‌ ಎದುರು ಕುಳಿತಿದ್ದರೆ, ರಾತ್ರಿ ಸರಿಯಾಗಿ ನಿದ್ದೆ ಬಾರದಿದ್ದರೆ, ಕಣ್ಣು ಊದಿಕೊಳ್ಳುತ್ತದೆ. ಆಗ, ಕಾಫಿಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ, ಕಣ್ಣಿನ ಸುತ್ತ ಮಸಾಜ್‌ ಮಾಡಿ. ಊದಿಕೊಂಡಿರುವ ರಕ್ತನಾಳಗಳು ಸಡಿಲಗೊಂಡು, ಕಣ್ಣು ಮೊದಲಿನಂತಾಗುತ್ತದೆ.

ಕಾಫಿ ಪುಡಿ ಫೇಸ್‌ ಪ್ಯಾಕ್‌
ಫೇಶಿಯಲ್‌ ಮಾಡಿಸಲು ಪಾರ್ಲರ್‌ಗೇ ಹೋಗಬೇಕಿಲ್ಲ. ಕಾಫಿಪುಡಿಯನ್ನು ಆಲಿವ್‌ ಎಣ್ಣೆಯ ಜೊತೆಗೆ ಬೆರೆಸಿ, ಮುಖಕ್ಕೆ ಮಸಾಜ್‌ ಮಾಡಿಕೊಳ್ಳಿ. ತರಿತರಿಯಾದ ಕಾಫಿ ಪುಡಿ, ಒಣ ಚರ್ಮವನ್ನು ಹೋಗಲಾಡಿಸಿದರೆ, ಆಲಿವ್‌ ಎಣ್ಣೆಯು ಚರ್ಮಕ್ಕೆ ಮೃದುತ್ವ ನೀಡುತ್ತದೆ.

ಕೂದಲ ಬಣ್ಣವಾಗಿ ಬಳಸಿ
ಗಡಿಬಿಡಿಯಲ್ಲಿ ಕೂದಲಿಗೆ ಬಣ್ಣ ಹಚ್ಚಲು ಸಾಧ್ಯವಾಗದಿದ್ದರೆ, ಕಾಫಿಪುಡಿಯನ್ನು ತಾತ್ಕಾಲಿಕ ಕೂದಲ ಬಣ್ಣವಾಗಿ ಬಳಸಬಹುದು. ಒಂದು ಚಮಚ ಕುದಿಸಿದ ಪುಡಿಯನ್ನು, ಕಂಡಿಷನರ್‌ ಜೊತೆಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ, ಹತ್ತು ನಿಮಿಷದ ನಂತರ ತೊಳೆದರೆ, ಕೂದಲು ಕಪ್ಪಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next