Advertisement

ಹವಾಮಾನ ವೈಪರೀತ್ಯದಿಂದ ಕಾಫಿ ಮಣ್ಣು ಪಾಲು

05:29 PM Sep 14, 2021 | Team Udayavani |

ಸಕಲೇಶಪುರ: ಹವಾಮಾನ ವೈಪರೀತ್ಯ ಪರಿಣಾಮ ಅರೇಬಿಕಾ ಕಾಫಿ ಅವಧಿ ಪೂರ್ವವಾಗಿ ಹಣ್ಣಾಗಿದೆ. ಇನ್ನು ಸುರಿಯುತ್ತಿರುವ ಮಳೆಯಿಂದ ಶೇ.50ಕ್ಕೂ ಹೆಚ್ಚು ಅರೇಬಿಕಾ ಕಾಫಿಯ ಜತೆ ರೋಬಾಸ್ಟ ಕಾಫಿಯೂ ಉದುರುತ್ತಿದ್ದು ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.

Advertisement

ಸೆಪ್ಟೆಂಬರ್‌, ಅಕ್ಟೋಬರ್‌ ನಲ್ಲಿ ಅರೇಬಿಕಾಕಾಫಿ ಗಿಡಗಳಲ್ಲಿ ಹಣ್ಣಾಗುವುದು ವಾಡಿಕೆಯಾಗಿದ್ದು ನವೆಂಬರ್‌ ನಲ್ಲಿ ಅರೇಬಿಕಾಕಾಫಿ ಕೊಯ್ಲು ಮಾಡುವುದು ಮಲೆನಾಡಿನಲ್ಲಿ ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಡಿಸೆಂಬರ್‌ ಹಾಗೂ ಜನವರಿಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಅರೇಬಿಕಾಕಾಫಿ ಕಳೆದ ಜುಲೈ ಅಂತ್ಯ ಹಾಗೂ ಆಗಸ್ಟ್‌ನಲ್ಲಿ ಹಣ್ಣಾಗಿದ್ದು ಇದೀಗ ಸೆಪ್ಟೆಂಬರ್‌ನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣವಾಗಿ ಕೊಳೆಯುತ್ತಿದೆ. ಹಾಗೆಯೇ ಇದೀಗ ಸುರಿಯುತ್ತಿರುವ ಮಳೆಗೂ ತಾಲೂಕಿನ ಎಲ್ಲಾ ಭಾಗಗಳಲ್ಲಿ ರೋಬಾಸ್ಟಕಾಫಿ
ಉದುರುವಿಕೆ ಹಾಗೂ ಕೊಳೆ ರೋಗಕ್ಕೆ ತುತ್ತಾಗುತ್ತಿದೆ.

ಅಡಕೆಕೂಡಾ ಶೀತಕ್ಕೆ ಉದುರುತ್ತಿದೆ. ಅತಿಯಾದ ಶೀತ ಕಾಫಿ, ಅಡಕೆ ಬೆಳೆ ಉದುರುವಿಕೆಗೆ ಕಾರಣವಾಗಿದೆ. ಈಗಾಗಲೆ ಕೂಲಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕೂಲಿ ಕಾರ್ಮಿಕರ ವೆಚ್ಚ,ಕಾಡಾನೆ ಹಾವಳಿ, ಹೆಚ್ಚುತ್ತಿರುವ ನಿರ್ವಹಣೆ ವೆಚ್ಚಗಳಿಂದ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದು ಇದೀಗ ಹವಾಮಾನ ವೈಪರೀತ್ಯದಿಂದ ಸುರಿಯುತ್ತಿರುವ ಮಳೆಗೆಕಾಫಿ ಬೆಳೆಗಾರರು ಸಂಪೂರ್ಣವಾಗಿ ತತ್ತರಿಸಿದ್ದಾರೆ.

ಇದನ್ನೂ ಓದಿ: ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

ಮಲೆನಾಡಿನ ಆರ್ಥಿಕತೆಗೂ ತೀವ್ರ ಪೆಟ್ಟು ಬೀಳುತ್ತಿದೆ:
ಕೇಂದ್ರ-ರಾಜ್ಯ ಸರ್ಕಾರಗಳು ಪರಿಹಾರ ನೀಡುವುದಿರಲಿ ಕಾಫಿ ಬೆಳೆಗೆಕನಿಷ್ಠ ಬೆಂಬಲ ಬೆಲೆ ಘೋಷಿಸಲೂ ಮುಂದಾಗದ ಕಾರಣ ಬೆಳೆಗಾರರ ಬದುಕು ಸಂಪೂರ್ಣವಾಗಿ ಅತಂತ್ರವಾಗಿದೆ. ಮಲೆನಾಡಿನ ಆರ್ಥಿಕತೆಯೂ ಕಾಫಿ ಉತ್ಪಾದನೆ ಮೇಲೆ ನಿಂತಿದ್ದುಕಾಫಿ ಉತ್ಪಾ ದನೆಗೆ ತೊಂದರೆಯಾದಲ್ಲಿ ಮಲೆನಾಡಿನ ಆರ್ಥಿಕತೆಗೂ ತೀವ್ರ ಪೆಟ್ಟು ಬೀಳುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ತಕ್ಷಣ ಬೆಳೆಗಾರರ ನೆರವಿಗೆ ಧಾವಿಸಬೇಕಾಗಿದೆ.

Advertisement

ಹವಾಮಾನ ವೈಪರೀತ್ಯದಿಂದಕಾಫಿ ಬೆಳೆಗಾರರಿಗೆ ಬಹಳ ತೊಂದರೆಯಾಗುತ್ತಿದೆ.ಕಳೆದ ಜುಲೈ ಅಂತ್ಯದಲ್ಲೇ ಸ್ವಲ್ಪ ಪ್ರಮಾಣದಲ್ಲಿ ಅರೇಬಿಕಾ ಕಾಫಿ ಅಕಾಲಿಕವಾಗಿ ಹಣ್ಣಾಗಿದ್ದು ಇದೀಗ ಮಳೆಯಿಂದಾಗಿ ಕೊಳೆಯುತ್ತಿದೆ. ಜತೆಗೆ ರೋಬಾಸ್ಟ ಕಾಫಿಯೂ ಉದುರುತ್ತಿದೆ. ಸರ್ಕಾರಕೂಡಲೇ ಬೆಳೆಗಾರರ ನೆರವಿಗೆ ಧಾವಿಸಬೇಕಾಗಿದೆ.
– ರಾಜೀವ್‌ ಭಟ್‌, ಕಾಫಿ ಬೆಳೆಗಾರರು,
ಹಳ್ಳಿ ಬೈಲು ಗ್ರಾಮ

ಸರ್ಕಾರ ಈಗಾಗಲೇ ಸಕಲೇಶಪುರ ಅತಿವೃಷ್ಟಿ ಪ್ರದೇಶ ಅಂತ ಘೋಷಣೆ ಮಾಡಿದ್ದರೂ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆಯಾವುದೇ ಸ್ಥಳ ಪರಿಶೀಲನೆ ಮಾಡದೆ ರೈತರಿಗೆ ನಷ್ಟವಾಗಿಲ್ಲ ಎಂಬ ಸುಳ್ಳು ವರದಿ ನೀಡಿದ್ದಾರೆ.
– ಲೋಹಿತ್‌ಕೌಡಹಳ್ಳಿ,
ಟಿಎಪಿಸಿಎಂಎಸ್‌ ಅಧ್ಯಕ್ಷರು

– ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next