Advertisement

ಕಾಫಿ ತೋಟದಲ್ಲಿ ಈಗ ಹೂ ನಗೆ

04:22 PM Mar 02, 2021 | Team Udayavani |

ಸಕಲೇಶಪುರ: ತಾಲೂಕಿನ ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡದಲ್ಲಿ ಸಮೃದ್ಧವಾಗಿ ಹೂವು ಬಿಟ್ಟಿದ್ದು, ತೋಟವು ಘಮ ಘಮಿಸುತ್ತಿದೆ. ಹಸಿರು ಎಲೆಯ ಮೇಲೆ ಮೊಸರು ಚೆಲ್ಲಿದಂತೆ ಹೂ ಅರಳಿ ನಿಂತಿದ್ದು,ನೋಡುಗರ ಕಣ್ಮನ ಸೆಳೆಯುತ್ತಿದೆ. ಹಿಂದಿಗಿಂತಬಹುಬೇಗನೆ ಹೂ ಅರಳಿರುವುದು ಈಗಾಗಲೇಕೊಯ್ಲು ಮಾಡಿದ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದರೆ, ಇನ್ನೂ ಕೊಯ್ಲು ಬಾಕಿ ಇರುವವರಿಗೆ ತೊಂದರೆ ಆಗಿದೆ.

Advertisement

ಸಾಮಾನ್ಯವಾಗಿ ಡಿಸೆಂಬರ್‌ ಕೊನೆವಾರದಿಂದ ಫೆಬ್ರುವರಿ ಅಂತ್ಯದವರೆಗೂ ಕಾಫಿ ಫ‌ಸಲನ್ನು ಕೊಯ್ಲು ಮಾಡುವುದು ವಾಡಿಕೆ. ಆದರೆ, ಈ ಬಾರಿ ಜನವರಿ ಮೊದಲ ವಾರಾಂತ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿಗೆ ವ್ಯಾಪಕ ಹಾನಿಯುಂಟಾಗಿತ್ತು. ಸುಮಾರು ಒಂದು ವಾರ ಮೋಡ ಮುಸುಕಿದ ವಾತಾವರಣ ಇತ್ತು. ಈ ಕಾರಣದಿಂದ ಕಾಫಿ ಕೊಯ್ಲು ಮಾಡಿದವರು ಒಣಗಿಸಲು ಪರದಾಡಿದರೆ, ಕಾಫಿ ಕೊಯ್ಲು ಮಾಡದವರು ಬೆಲೆ ನಷ್ಟದ ಆತಂಕ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಎಲ್ಲಾ ಆತಂಕದಿಂದ ಚೇತರಿಸಿಕೊಂಡ ಬೆಳೆಗಾರರು, ಕಾಫಿ ಕೊಯ್ಲು ನಡೆಸಿದ್ದರು.ಆದರೆ, ಕಳೆದ ವಾರ ಅಕಾಲಿಕ ಮಳೆಯಿಂದಇದೀಗ ಕಾಫಿ ಗಿಡಗಳಲ್ಲಿ ಹೂವು ಬಿಟ್ಟಿದ್ದು, ತೋಟಗಳಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಖರ್ಚು ಉಳಿತಾಯ: ಕಾಫಿ ಕೊಯ್ಲು ನಡೆಸಿದವರಿಗೆ ಕಳೆದ ವಾರ ಸುರಿದ ಅಕಾಲಿಕ ಮಳೆ ಸಂತೋಷ ತಂದಿದೆ. ಒಂದು ಇಂಚಿಗೂ ಹೆಚ್ಚು ಮಳೆ ತಾಲೂಕಿನ ಹಲವೆಡೆ ಸುರಿದಿತ್ತು. ಇದರಿಂದಾಗಿ ಬೆಳೆಗಾರರು ಕಾಫಿ ಗಿಡಗಳಿಗೆ ಕೃತಕವಾಗಿ ನೀರು ಸಿಂಪಡಿಸುವುದು ತಪ್ಪಿದೆ. ಹನಿ ನೀರಾವರಿ ಅಥವಾ ಸ್ಪಿಂಕ್ಲರ್‌ ಮೂಲಕ,ಇಲ್ಲದೆ, ಕೃತಕವಾಗಿ ಆಯಿಲ್‌ ಎಂಜಿನ್‌ ಇಟ್ಟು, ಕೋಟ್ಯಂತರ ರೂ. ಡೀಸೆಲ್‌ ಖರ್ಚು ಮಾಡಿ ಗಿಡಗಳಿಗೆ ನೀರು ಉಣಿಸಬೇಕಿತ್ತು. ಇದೀಗ ಆ ಖರ್ಚು ಸಮಯ ಉಳಿಕೆ ಆಗಿದೆ. ಜೊತೆಗೆ ಕಾರ್ಮಿಕರಿಗೆ ಕೊಡಬೇಕಾಗಿದ್ದ ಕೂಲಿ ಸಹಉಳಿದಿದೆ.

ಕಾಯಿ ಕಟ್ಟಲು ಸಹಕಾರಿ: ಒಂದು ವೇಳೆ ಮಳೆ ಒಂದು ಇಂಚಿಗೂ ಕಡಿಮೆ ಆಗಿದ್ದರೆ, ಕೃತಕವಾಗಿ ನೀರು ಸಿಂಪಡಿಸಬೇಕಾಗಿತ್ತು. ಆದರೆ, ಮಳೆಪೂರ್ಣ ಪ್ರಮಾಣದಲ್ಲಿ ಬಿದ್ದಿರುವುದರಿಂದ ಇನ್ನು 20 ದಿನಗಳ ಕಾಲ ಕೃತಕವಾಗಿ ನೀರುಸಿಂಪಡಿಸುವ ಅಗತ್ಯವಿಲ್ಲ. ಮಳೆಯಿಂದಾಗಿಹೂವು ಬಂದಿದ್ದು, ಮುಂದಿನ ಹಂಗಾಮಿಗೆಕಾಯಿ ಕಟ್ಟಲು ಸಹಾಯಕಾರಿಯಾಗಿದೆ.ಇದೇ ವೇಳೆ ಕೂಲಿ ಕಾರ್ಮಿಕರ ಕೊರತೆಯಿಂದ ಶೇ.25ಕ್ಕೂ ಹೆಚ್ಚು ಕಾಫಿ ಕೊಯ್ಲು ಮಾಡುವುದು ಹಲವು ತೋಟಗಳಲ್ಲಿಬಾಕಿ ಇದ್ದು, ಇಂತಹ ತೋಟಗಳಲ್ಲಿ ಒಂದೆಡೆ ಹೂವು ಬಿಟ್ಟಿರುವುದು, ಮತ್ತೂಂದೆಡೆ ಹಣ್ಣುಗಿಡಗಳಲ್ಲಿ ಇರುವುದು ಬೆಳೆಗಾರರ ತಲೆ ಬಿಸಿಮಾಡಿದೆ. ಫೆಬ್ರವರಿ ಮೂರನೇ ವಾರಾಂತ್ಯದಲ್ಲಿಸುರಿದ ಮಳೆ ಮಾರ್ಚ್‌ ಮೊದಲ ವಾರದಲ್ಲಿ ಸುರಿದಿದ್ದಲ್ಲಿ ಎಲ್ಲರಿಗೂ ಅನುಕೂಲವಾಗುತ್ತಿತ್ತು.ಒಟ್ಟಾರೆಯಾಗಿ ಅಕಾಲಿಕ ಮಳೆ ಕೆಲವರಿಗೆಸಂತೋಷ ತಂದರೆ, ಮತ್ತೆ ಕೆಲವರಿಗೆ ದುಃಖ ಉಂಟು ಮಾಡಿದೆ.

Advertisement

ಕಳೆದ ವಾರ ಬಿದ್ದ ಅಕಾಲಿಕಮಳೆಯಿಂದಾಗಿ ಗಿಡಗಳಲ್ಲಿ ಹೂವು ಮೂಡಿದೆ. ಈಗಾಗಲೆ ಕಾಫಿ ಕೊಯ್ಲು ಮಾಡಿರುವುದರಿಂದ ಗಿಡಗಳಲ್ಲಿ ಹೂವು ಕಟ್ಟಿರುವುದು ಸಂತೋಷ ತಂದಿದೆ. ಭೋಜೇಗೌಡ, ಕಾಫಿ ಬೆಳೆಗಾರ, ಕುಡುಗರಹಳ್ಳಿ.

ಕೆಲವೊಂದು ತೋಟಗಳಲ್ಲಿ ಕಾಫಿ ಕೊಯ್ಲು ಮಾಡಲು ಗುತ್ತಿಗೆ ಪಡೆದಿದ್ದೆ. ಸುರಿದ ಅಕಾಲಿಕಮಳೆಯಿಂದಾಗಿ ಕೊಯ್ಲು ಸಂಪೂರ್ಣವಾಗಿ ಮುಗಿಸಲು ಆಗಲಿಲ್ಲ. ಇದೀಗ ಗಿಡಗಳಲ್ಲಿ ಹೂವು ಮೂಡಿದೆ. ಹೀಗಾಗಿ ಹಣ್ಣುಕೊಯ್ಲು ಮಾಡಲು ತೀವ್ರ ತೊಂದರೆ ಆಗಿದೆ. ಎಸ್‌.ಎಸ್‌.ಅಸ್ಲಾಂ, ಕಾಫಿ ಹಾಗೂ ಮೆಣಸು ವರ್ತಕ.

 

ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next