Advertisement
ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ಅತಿವೃಷ್ಟಿ ಮಳೆಗೆಕಾಫಿ, ಮೆಣಸು, ಭತ್ತದ ಬೆಳೆಗೆ ವ್ಯಾಪಕ ಹಾನಿಯುಂಟಾಗಿತ್ತು.ಸಾಮಾನ್ಯವಾಗಿ ಈ ವೇಳೆಗೆ ತಾಲೂಕಿನ ಮಲೆನಾಡು ಭಾಗ ದಲ್ಲಿಮಳೆ ಪ್ರಮಾಣ ತೀರಾ ಇಳಿಮುಖವಾಗಿರುತ್ತದೆ. ಆದರೆ, ಈ ಬಾರಿ ಅಕ್ಟೋಬರ್ ಪ್ರಾರಂಭವಾಗಿ 16 ದಿನ ಕಳೆದರೂ ಮಳೆಬಿಡುವು ನೀಡುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಕೃಷಿಕರು ತತ್ತರಿಸಿಹೋಗಿದ್ದಾರೆ.
Related Articles
Advertisement
ರೋಗಕ್ಕೆ ತುತ್ತಾಗುವ ಸಾಧ್ಯತೆ: ಧಾರಣೆ ಕುಸಿತ, ಇಳುವರಿ ಕುಂಟಿತ, ರೋಗ, ಸಾಲಬಾಧೆಯಿಂದ ಕಂಗೆಟ್ಟಿರುವ ಬೆಳೆಗಾರರಿಗೆ, ಇದೀಗ ಮತ್ತೂಮ್ಮೆ ಸುರಿಯುತ್ತಿರುವ ಮಳೆ ಗಾಯದಮೇಲೆ ಬರೆ ಎಳೆದಿದೆ. ಒಂದೆಡೆಕಾಫಿ ನೆಲಕಚ್ಚಿದ್ದು, ಮತ್ತೂಂ ದೆಡೆಕಾಳು ಮೆಣಸಿನ ಬಳ್ಳಿಕೊಳೆತು ಹೋಗುತ್ತಿದೆ. ಇನ್ನು ಉಳಿದಿರುವ ಗಿಡ ಗಳು ಬಿಸಿಲು ಬಂದ ನಂತರ ಹಳದಿ ರೋಗಕ್ಕೆ ತುತ್ತಾಗುವಸಾಧ್ಯತೆಯಿದೆ. ಮಳೆಯಿಂದಾಗಿ ಹಲವು ಕಾಫಿ ತೋಟಗಳಲ್ಲಿ ಬದುಗಳು ಒಡೆದು ಹೋಗಿದ್ದು, ಪುನರ್ ನಿರ್ಮಾಣ ಮಾಡ ಬೇಕಾಗಿದೆ. ತಾಲೂಕಿನಲ್ಲಿ ಬೆಳೆಯಲಾಗಿದ್ದ ಅಡಕೆ ಬೆಳೆ ಬಹುತೇಕವಾಗಿ ನಾಶವಾಗಿದೆ. ಕಾಫಿ ಬೆಳೆಗಾರರಿಗೆ ಕೂಲಿ ಕಾರ್ಮಿಕರಿಗೆಕೊಡಲು ಹಣವಿಲ್ಲದಂತಾಗಿದೆ.
ಒಟ್ಟಾರೆಯಾಗಿ ತಾಲೂಕಿನಲ್ಲಿ ಬೆಳೆಗಾರರ ಪರಿಸ್ಥಿತಿ ಚಿಂತಾಜನಕ ವಾಗಿದ್ದು, ಇದು ರೀತಿ ಮಳೆ ಮುಂದುವರಿದಲ್ಲಿ ಅರೇಬಿಕಾ ಬೆಳೆಗಾರರಿಗೆ ತೀವ್ರಪೆಟ್ಟುಬೀಳುವ ಸಾಧ್ಯತೆಯಿದೆ.2 ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದು, 15 ದಿನಗಳ ನಂತರ ತಾಲೂಕಿನ ಜನ ಬಿಸಲುಕಾಣುವಂತಾಗಿದೆ.
ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ, ಮೆಣಸು, ಅಡಕೆ ಶೇ.50ಕ್ಕೂ ಹೆಚ್ಚು ನಾಶವಾಗಿದೆ.ಕಾಫಿ, ಮೆಣಸು ದರಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಕುಸಿದಿದೆ. ಈಹಿನ್ನೆಲೆಯಲ್ಲಿ ಸರ್ಕಾರಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. –ಮೋಹನ್‌ಕುಮಾರ್, ಅಧ್ಯಕ್ಷ, ಕರ್ನಾಟಕ ಬೆಳೆಗಾರರ ಒಕ್ಕೂಟ
ವಾರದಿಂದ ವಾಡಿಕೆಗೂ ಹೆಚ್ಚು ಮಳೆಯಾಗಿದೆ.ಕಾಫಿ,ಮೆಣಸು ಉದುರಿ ಹೋಗುತ್ತಿದೆ. ಸರ್ಕಾರಕೂಡಲೇ ರೈತರ ನೆರವಿಗೆ ಧಾವಿಸಬೇಕು. – ಚಿದನ್, ಕಾಫಿ ಬೆಳೆಗಾರ, ಹೊಂಗಡಹಳ್ಳ
ಸುಧೀರ್ ಎಸ್.ಎಲ್.