Advertisement
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಪಚುನಾವಣೆ ನಡೆಯಲಿರುವ ಕೆ.ಆರ್.ಪುರ, ಶಿವಾಜಿನಗರ, ಯಶವಂತಪುರ ಹಾಗೂ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನೀತಿಸಂಹಿತೆ ಅನ್ವಯಿಸಲಿದೆ ಎಂದರು.
Related Articles
Advertisement
ಚುನಾವಣಾ ಪ್ರಕ್ರಿಯೆಗೆ ಚುನಾವಣಾ ವೀಕ್ಷಕರು, ಮಾದರಿ ನೀತಿ ಸಂಹಿತೆ ಪಾಲನಾ ತಂಡ, ಚುನಾವಣಾ ವೆಚ್ಚದ ಮೇಲೆ ನಿಗಾವಹಿಸುವುದಕ್ಕೆ ಅಕೌಂಟಿಂಗ್ ತಂಡ ಸೇರಿದಂತೆ ಒಟ್ಟು 60 ತಂಡ ರಚಿಸಲಾಗಿದೆ. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಚಟುವಟಿಕೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಮತದಾನದ ಗುರುತಿನ ಚೀಟಿಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 50862 ಅರ್ಜಿಗಳು ಬಂದಿದ್ದು, ಇವುಗಳಲ್ಲಿ 29,765ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. 959 ಅರ್ಜಿಗಳು ವಜಾಗೊಂಡಿವೆ. ಇನ್ನೂ 9,511 ಅರ್ಜಿಗಳು ವಿವಿಧ ಹಂತದಲ್ಲಿವೆ ಎಂದರು.
ಚುನಾವಣೆ ಪ್ರಕ್ರಿಯೆನ.18 ನಾಮಪತ್ರ ಸಲ್ಲಿಕೆಗೆ ಕೊನೆದಿನ
ನ.19 ನಾಮಪತ್ರ ಪರಿಶೀಲನೆ
ನ.21 ನಾಮಪತ್ರ ವಾಪಾಸ್‌ಗೆ ಕೊನೆಯ ದಿನ
ಡಿ.5 ಮತದಾನ
ಡಿ.9 ಮತ ಎಣಿಕೆ
ಡಿ.11 ಚುನಾವಣೆ ಪ್ರಕ್ರಿಯೆ ಪೂರ್ಣ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ವಿವರ
ಕ್ಷೇತ್ರ ಪುರುಷ ಮತದಾರರು ಮಹಿಳಾ ಮತದಾರರು ಇತರೆ ಒಟ್ಟು
ಕೆ.ಆರ್.ಪುರ 2,51,885 2,29,087 160
ಯಶವಂತಪುರ 2,46,295 2,29,424 40
ಮಹಾಲಕ್ಷ್ಮೀ ಲೇಔಟ್ 1,46,415 1,37,428 42
ಶಿವಾಜಿನಗರ 96,928 94,689
ಒಟ್ಟು 7,41,523 6,90,628 243 ಯಾವ ಕ್ಷೇತ್ರದಲ್ಲಿ ಎಲ್ಲಿ ನಾಮಪತ್ರ ಸಲ್ಲಿಕೆ?
ವಿಧಾನಸಭಾ ಕ್ಷೇತ್ರ-ನಾಮಪತ್ರಸಲ್ಲಿಕೆ ಕಚೇರಿ- ಚುನಾವಣಾಧಿಕಾರಿ
-ಕೆ.ಆರ್.ಪುರ- ಹಳೇ ಮದ್ರಾಸ್ ರಸ್ತೆಯ ಕೆ.ಆರ್.ಪುರ ವಿಭಾಗದ ಕಂದಾಯ ಅಧಿಕಾರಿ ಕಚೇರಿ-ಆರ್.ರಾಮಚಂದ್ರನ್, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಉಗ್ರಾಣ ನಿಗಮ. -ಯಶವಂತಪುರ- ಕೆಂಗೇರಿ ಉಪನಗರದ ಕರ್ನಾಟಕ ಬ್ಯಾಂಕ್ ಕಟ್ಟಡದಲ್ಲಿರುವ ಚುನಾವಣಾಧಿಕಾರಿ ಕಚೇರಿ-ಎ.ನವೀನ್‌ಜೋಸೆಫ್, ಉಪಕಾರ್ಯದರ್ಶಿ ಬಿಡಿಎ. -ಮಹಾಲಕ್ಷ್ಮಿಲೇಔಟ್- ಕಂದಾಯ ಅಧಿಕಾರಿಗಳ ಕಚೇರಿ ರಾಜಾಜಿನಗರ ಆರ್‌ಟಿಓ ಕಟ್ಟಡ-ಡಾ.ಆಶಾ, ಮುಖ್ಯ ಆಡಳಿತಾಧಿಕಾರಿ, ಎನ್‌ಆರ್‌ಎಚ್‌ಎಂ -ಶಿವಾಜಿನಗರ- ಕ್ವೀನ್ಸ್ ರಸ್ತೆಯ ಕಂದಾಯ ಕಚೇರಿ-ಡಾ.ಡಿ.ಬಿ.ನಟೇಶ್ ಉಪಪ್ರಧಾನ ವ್ಯವಸ್ಥಾಪಕ, ಕರ್ನಾಟಕ ಗೃಹ ಮಂಡಳಿ.