Advertisement

ಕೇರಳ ಸಚಿವರಿಗೆ ನೀತಿ ಸಂಹಿತೆ: ಚಿನ್ನ ಪ್ರಕರಣ ಹಿನ್ನೆಲೆಯಲ್ಲಿ ಸಿಪಿಎಂ ತೀರ್ಮಾನ

11:30 AM Jul 21, 2020 | mahesh |

ತಿರುವನಂತಪುರ: ಕೇರಳದಲ್ಲಿ ಇತ್ತೀಚೆಗೆ ಚಿನ್ನದ ಕಳ್ಳಸಾಗಣೆ ಪ್ರಕರಣ ಬಯಲಾದಾಗಿನಿಂದ ಇಲ್ಲಿಯವರೆಗೆ ಅಲ್ಲಿ ಆಡಳಿತಾರೂಢ ಎಲ್‌ಡಿಎಫ್ ಒಕ್ಕೂಟದಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಸ್ವಪಕ್ಷವಾದ ಸಿಪಿಎಂನಲ್ಲಿ ಅನೇಕ ರೀತಿಯ ಅಸಮಾಧಾನಗಳು ಹೊಗೆಯಾಡಲು ಶುರುವಾಗಿದೆ.

Advertisement

ಅದರ ಪರಿಣಾಮವಾಗಿ, ಕೇರಳ ಸಚಿವ ಸಂಪುಟದ ಎಲ್ಲ ಸಚಿವರಿಗೆ ಸಂಹಿತೆ ಯನ್ನು ಜಾರಿಗೊಳಿಸಲು ಆಡಳಿ ತಾ ರೂಢ ಸಿಪಿಎಂ ಪಕ್ಷ ನಿರ್ಧರಿಸಿದೆ. ಸರಕಾರದ ಮೇಲೆ ಪಕ್ಷದ ಹಿಡಿತ ಸಡಿಲವಾಗುತ್ತಿರುವುದನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ, ಸಂಪುಟದ ಪ್ರಮುಖ ಸಚಿವರನ್ನೊಳಗೊಂಡ ಸಭೆಯನ್ನು ಜೂ. 23ರಂದು ನಡೆಸಲಾಗುತ್ತದೆ ಎಂದು ಸಿಪಿಎಂ ಕೇರಳ ಕಾರ್ಯದರ್ಶಿ ಕೊಡಿ ಯೇರಿ ಬಾಲಕೃಷ್ಣನ್‌ ಹೇಳಿದ್ದಾರೆ.

ಸರಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ಸರಕಾರದ ಮೇಲೆ ಪಕ್ಷದ ಹಿಡಿತವಿತ್ತು. ಆನಂತರ, ಹಿಡಿತ ಕಡಿಮೆಯಾಗಿ ಸಂಪುಟದಲ್ಲಿ ಪಕ್ಷದ ನಾಯಕರ ನಡುವೆ ಭಿನ್ನಮತಗಳು ಭುಗಿಲೆದ್ದು, ಪರಸ್ಪರ ದೂರುಗಳು ಕೇಳಿಬರಲಾರಂಭಿಸಿದವು. ಈ ಹಿನ್ನೆಲೆಯಲ್ಲಿ ಸಚಿವರ ನಡವಳಿಕೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿ ಗೊಳಿಸಲಾಗುತ್ತದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಈ ಅಂಶ ಹೆಚ್ಚಿನ ಮಹತ್ವ ಪಡೆದಿದೆ.

ಹವಾಲಾ ನಂಟಿರಬಹುದು: ಸ್ವಪ್ನಾ ಸುರೇಶ್‌ ಹಾಗೂ ಇನ್ನಿತರರು ಪ್ರಮುಖ ಆರೋಪಿಗಳಾಗಿರುವ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಕಳೆದೊಂದು ವರ್ಷದಿಂದ ಏನಿಲ್ಲವೆಂದರೂ ಕನಿಷ್ಠ 20 ಹವಾಲಾ ಗುಂಪುಗಳು ಕೈ ಜೋಡಿಸಿರ ಬಹುದು ಎಂದು ಕಸ್ಟಮ್ಸ್‌ ಇಲಾಖೆಯ ಅಧಿಕಾರಿ ಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿ ಸಿದಂತೆ ಈವರೆಗೆ 13 ಮಂದಿ ಯನ್ನು ಬಂಧಿ ಸಲಾಗಿದೆ. ಆದರೆ, ಅವ ರಲ್ಲಿ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿರುವ ಯುಎಇ ದೂತಾವಾಸ ಕಚೇರಿಯ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಎಸ್‌. ಸರಿತ್‌ ಕುಮಾರ್‌ಗೆ ಹವಾಲಾ ಗುಂಪುಗಳ ಜತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ನಂಟು ಇರಬಹುದಾದ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next