ಉಡುಪಿ: ಇಲ್ಲಿನ ಇಂದಿರಾ ನಗರದ ನಿವಾಸಿ ರಕ್ಷಾ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಸಿಒಡಿ ತನಿಖೆಗೆ ನೀಡಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಇಂದು ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ರಕ್ಷಾ ಸಾವಿನಲ್ಲಿ ಸಾಕಷ್ಟು ಗೊಂದಲವಿದೆ. ವೈದ್ಯಕೀಯ ಚಿಕಿತ್ಸೆಯ ನಿರ್ಲಕ್ಷ್ಯದ ಆರೋಪ ಕೂಡ ಬಂದಿದೆ. ರಕ್ಷಾ ಸಾವಿನ ಬಗ್ಗೆ ಸಾಕಷ್ಟು ಗೊಂದಲವಿದೆ. ಬೆಳಿಗ್ಗೆ ಐದು ಗಂಟೆಗೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಿಷನ್ ಆಸ್ಪತ್ರೆಯ ಚಿಕಿತ್ಸೆ ಬಗ್ಗೆ ಅನುಮಾನ ಇದೆ. ಈ ಕುರಿತು ಡಿಜಿಪಿ ಮಟ್ಟದ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ. ರಕ್ಷಾ ಪ್ರಕರಣವನ್ನು ಸಿಒಡಿ ತನಿಖೆಗೆ ನೀಡಲು ಗೃಹ ಸಚಿವರು ಆದೇಶ ನೀಡಿದ್ದಾರೆ ಎಂದರು.
ರಕ್ಷಾ ಸಾವಿಗೆ ನ್ಯಾಯ ಕೊಡುವ ಕೆಲಸ ಆಗಬೇಕು. ಆಸ್ಪತ್ರೆಯ ಮೇಲೆ ಕ್ರಮಕೈಗೊಳ್ಳಲು ಮೆಡಿಕಲ್ ಬೋರ್ಡ್ ರಚನೆ ಮಾಡಲಾಗಿದೆ. ಏಳು ಜನ ತಜ್ಞ ವೈದ್ಯರ ತಂ ರಚನೆ ಮಾಡಲಾಗಿದೆ. ಮಿಷನ್ ಆಸ್ಪತ್ರೆಯ ಚಿಕಿತ್ಸೆ ಹಾಗೂ ರಕ್ಷಾ ಆರೋಗ್ಯದ ಬಗ್ಗೆ ತನಿಖೆ ನಡೆಸಲಿದೆ. ಐದು ದಿನಗಳೊಳಗೆ ತನಿಖೆ ನಡೆಸಿ ವರದಿ ನೀಡಬೇಕು ಎಂದು ಹೇಳಲಾಗಿದೆ ಎಂದು ಶಾಸಕರು ಹೇಳಿದರು.
ಇದನ್ನೂ ಓದಿ: ಟ್ವಿಸ್ಟ್; ದಿಶಾ ಸಾಲ್ಯಾನ್ ಸಾವಿನ ನಂತರವೂ 9 ದಿನಗಳ ಕಾಲ ಮೊಬೈಲ್ ಬಳಕೆಯಾಗಿತ್ತು!
ಶವ ಅದಲು ಬದಲು ಆಗಿರುವ ಪ್ರಕರಣಕ್ಕೆ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಕೋವಿಡ್ ಶವವನ್ನು ಬೆಳಿಗ್ಗೆ 9ರಿಂದ 6 ಗಂಟೆಯೊಳಗೆ ಹಸ್ತಾಂತರ ಮಾಡಲು ಸೂಚಿಸಿದ್ದಾರೆ. ಶವವನ್ನು ಪಡೆದುಕೊಳ್ಳಲು ಆರೋಗ್ಯ ಅಧಿಕಾರಿ ಬರಬೇಕು. ಕೋವಿಡ್ ಶವವನ್ನು ಮನೆಯವರ ಸಮ್ಮುಖದಲ್ಲಿ ಹಸ್ತಾಂತರ ಮಾಡಬೇಕು. ಮನೆಯ ದೃಢೀಕರಣ ಜತೆಗೆ ಆಯಾ ತಾಲ್ಲೂಕಿನ ಆರೋಗ್ಯ ಅಧಿಕಾರಿಯಿಂದ ಶವ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.