Advertisement

ತೆಂಗಿನ ಸಸಿಗಳು ವಿತರಣೆಗೆ ಸಿದ್ಧ

05:12 PM May 10, 2020 | Suhan S |

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಉದಯಪುರ ಬಳಿ ಇರುವ ಯಲಿಯೂರು ತೋಟಗಾರಿಕೆ ಕ್ಷೇತ್ರದಲ್ಲಿ ತೊಟಗಾರಿಕೆ ಇಲಾಖೆ ವತಿಯಿಂದ 15 ಸಾವಿರಕ್ಕೂ ಹೆಚ್ಚು ತೆಂಗಿನ ಸಸಿಗಳು ಕಡಿಮೆ ಬೆಲೆಯಲ್ಲಿ ರೈತರಿಗೆ ವಿತರಣೆ ಮಾಡಲು ಸಿದ್ಧವಾಗಿವೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ತಿಳಿಸಿದರು.

Advertisement

ಯಲಿಯೂರು ತೋಟಗಾರಿಕೆ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷದಂತೆ ಪ್ರಸಕ್ತ ಸಾಲಿ ನಲ್ಲಿಯೂ ತೆಂಗಿನ ಸಸಿಗಳನ್ನು ಸರ್ಕಾರದ ಅನುದಾನದಲ್ಲಿ ಇಲಾಖೆ ಬೆಳೆಸಿದೆ. ಇವುಗಳನ್ನು ಪಡೆಯಲು ರೈತರು ಕೃಷಿ ಭೂಮಿಯ ಪಹಣೆ ನೀಡಿ ಒಂದು ಸಸಿಗೆ 65 ರೂ.ನಂತೆ ಪಡೆಯ ಬಹುದಾಗಿದೆ. ಗುಣಮಟ್ಟದ ತೆಂಗಿನ ಸಸಿಯನ್ನು ಬೆಳೆಸಲಾಗಿದೆ ಎಂದು ಹೇಳಿದರು.

ಖಾಸಗಿ ಸಂಸ್ಥೆಯಲ್ಲಿ ಪಡೆಯಲು ಒಂದು ತೆಂಗಿನ ಸಸಿಗೆ 250 ರಿಂದ 300 ರೂ. ನೀಡಬೇಕಾಗಿದೆ. ಆದರೆ ತೋಟ ಗಾರಿಕೆ ಇಲಾಖೆಯಿಂದ ಕಡಿಮೆ ಬೆಲೆಗೆ ನೀಡುವ ಮೂಲಕ ರೈತರನ್ನು ಉತ್ತೇಜನ ಮಾಡಲಾಗುತ್ತಿದೆ. ಇದರ ಅನುಕೂಲ ವನ್ನು ರೈತರು ಪಡೆದುಕೊಳ್ಳಬೇಕಾಗಿದೆ. ಒಬ್ಬ ರೈತನಿಗೆ 20 ಸಸಿಗಳನ್ನು ಮಾತ್ರ ವಿತರಿಸಲಾಗುವುದು ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸತೀಶ್‌, ಭಾನುಪ್ರಕಾಶ್‌, ತೋಟಗಾರಿಕೆ ಕ್ಷೇತ್ರದ ಮೇಲ್ವಿಚಾರಕ ಚಂದ್ರಶೇಖರ್‌, ವಲಯ ಅರಣ್ಯಾಧಿಕಾರಿ ಎಚ್‌.ಆರ್‌.ಹೇಮಂತ್‌ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next