Advertisement
ತಮಿಳುನಾಡು, ಕೇರಳದ ಬಳಿಕ ಹೆಚ್ಚು ತೆಂಗು ಬೆಳೆಯುವ ರಾಜ್ಯ ಕರ್ನಾಟಕ. ಕರಾವಳಿ ಯಲ್ಲಂತೂ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಗಾರರಿದ್ದಾರೆ. ಕಿದು ಕೇಂದ್ರದಲ್ಲಿ ವಿಶ್ವದ 140 ತಳಿಗಳನ್ನು ಸಂರಕ್ಷಿಸಿರುವುದರ ಜತೆಗೆ ಉತ್ತಮ ತಳಿಗಳ ಅಭಿವೃದ್ಧಿ, ಸಸಿ, ಬೀಜ ವಿತರಣೆ ನಡೆಸಲಾಗುತ್ತಿದೆ.
Related Articles
Advertisement
ಭೂಗುತ್ತಿಗೆ ನವೀಕರಿಸುವುದು, ಎಫ್ಪಿಎ ಮೊತ್ತ ವಿನಾಯಿತಿ ಅಥವಾ ಸರಕಾರದಿಂದಲೇ ಭರಿಸುವುದು. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದಂತೆ ಅರಣ್ಯ ಬೆಳೆಸುವುದರಿಂದ ಪರಿಸರಕ್ಕೆ ಆಗುವ ಲಾಭಕ್ಕೆ ಸರಿಸಮನಾಗಿ ಲೀಸ್‌ಗೆ ಪಡೆದುಕೊಂಡ ಸಂಸ್ಥೆ ಸಮನಾಂತರ ಉದ್ದೇಶಕ್ಕೆ ಆ ಭೂಮಿಯನ್ನು ಬಳಸುತ್ತಿದ್ದರೆ ಅಂತಹ ಭೂಮಿಯನ್ನು ಒಪ್ಪಂದದಲ್ಲಿ ನವೀಕರಿಸಲು ಅವಕಾಶವಿದೆ ಎಂಬ ಅಂಶದ ಜತೆಗೆ ರಿಯಾಯಿತಿಗೆ ಸುಪ್ರೀಂ ಕೊರ್ಟ್ ನೇಮಿಸಿದ ಎನ್‌ಪವರ್‌ವೆುಂಟ್ ಸಮಿತಿಗೆ ಮನದಟ್ಟು ಮಾಡಬೇಕಿದೆ. ಕೇಂದ್ರವು ಸಂಶೋಧನೆ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ. ಪರಿಸರಕ್ಕೆ ಪೂರಕವಾಗಿದೆ. ಕೇಂದ್ರವು ತೆಂಗು, ಅಡಿಕೆ ಮತ್ತು ಕೋಕೊ ಗುಣಮಟ್ಟದ ಅಗತ್ಯಗಳನ್ನು ಪೂರೈಸುತ್ತದೆ. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ರೈತರು ಪ್ರತಿವರ್ಷ ನೆಡುತೋಪುಗಳಿಗೆ ಬೀಜಗಳನ್ನು ಖರೀದಿಸುತ್ತಾರೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ರೈತರು ಕೇಂದ್ರದ ಪ್ರಧಾನ ಗ್ರಾಹಕರಾಗಿದ್ದಾರೆ.
ಪ್ರಯೋಜನಗಳೇನು? :
ರಾಜ್ಯದ ವಿವಿಧ ರೈತ ಗುಂಪುಗಳಿಗೆ ತರಬೇತಿ ನೀಡಲು ಸಂಸ್ಥೆ ಸಹಾಯಕವಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ರೈತ ಗುಂಪು ಕೇಂದ್ರಕ್ಕೆ ಭೇಟಿ ನೀಡುತ್ತಿದೆ. ವಿವಿಧ ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಶೈಕ್ಷಣಿಕ ಅಗತ್ಯಗಳಿಗೆ ಕೇಂದ್ರವನ್ನು ಅವಲಂಬಿಸಿ¨ªಾರೆ. ದ.ಕ. ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆ ಗಳ ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಅಗತ್ಯಗಳಿಗಾಗಿ ಕೇಂದ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಬಿಎಸ್ಸಿ (ಅಗ್ರಿಕಲ್ಚರ್), ಎಂಎಸ್ಸಿ (ಅಗ್ರಿಕಲ್ಚರ್) ಮತ್ತು ಕೃಷಿ ಕ್ಷೇತ್ರದ ಸಂಶೋಧನಾ ವಿದ್ಯಾರ್ಥಿಗಳು ಕೃಷಿ ಅಧ್ಯಯನಕ್ಕೆ ಭೇಟಿ ನೀಡುತ್ತಿದ್ದಾರೆ.
ಹೊಸದಿಲ್ಲಿಯ ಐಸಿಎಆರ್‌ನ ಇತ್ತೀಚಿನ ವರದಿಗಳ ಪ್ರಕಾರ, ದೇಶದ 120 ಐಸಿಎಆರ್ ಸಂಶೋಧನಾ ಸಂಸ್ಥೆಗಳಲ್ಲಿ ಸಿಪಿಸಿಆರ್‌ಐ 3ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಸಂಸ್ಥೆಗಳ ಪ್ರಾದೇಶಿಕ / ಉಪ ಕೇಂದ್ರಗಳಲ್ಲಿ ಆದಾಯ ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಸ್ಥಳಿಯರಿಗೆ ಉದ್ಯೋಗ ಒದಗಿಸುತ್ತಿದೆ.
ತೆಂಗಿನ ಮರಗಳು:
ರಾಜ್ಯದಲ್ಲಿ : 6.60 ಕೋಟಿಗೂ ಅಧಿಕ
ದ.ಕ. ಜಿಲ್ಲೆ: 40 ಲಕ್ಷ
ಉಡುಪಿ ಜಿಲ್ಲೆ : 35.50 ಲಕ್ಷ
ತೆಂಗು ಬೆಳೆಗಾರರು:
ದ.ಕ. ಜಿಲ್ಲೆ : ಸುಮಾರು 7 ಲಕ್ಷ
ಉಡುಪಿ ಜಿಲ್ಲೆ : ಸುಮಾರು 6 ಲಕ್ಷ
ತೆಂಗು ಬೆಳೆಯುವ ಪ್ರದೇಶ:
ರಾಜ್ಯದಲ್ಲಿ : 4,40,514 ಹೆಕ್ಟೇರ್
ವಾರ್ಷಿಕ ತೆಂಗು ಬೆಳೆ
ರಾಜ್ಯದಲ್ಲಿ : 217.6 ಕೋಟಿ
ಸಿಪಿಸಿಆರ್‌ಐ ಕಿದು ಕೇಂದ್ರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವೆ. ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಿ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವೆ.– ಶೋಭಾ ಕರಂದ್ಲಾಜೆ, ಕೇಂದ್ರ ಕೃಷಿ ಸಚಿವರು
-ಬಾಲಕೃಷ್ಣ ಭೀಮಗುಳಿ