Advertisement

ಕೊಬ್ಬರಿ ಕ್ವಿಂಟಾಲ್‌ಗೆ ತಿಂಗಳಲ್ಲಿ 5 ಸಾವಿರ ಏರಿಕ

02:54 PM Sep 03, 2017 | |

ಚನ್ನರಾಯಪಟ್ಟಣ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಒಂದೇ ತಿಂಗ
ಳಲ್ಲಿ ಕ್ವಿಂಟಾಲ್‌ಗೆ 5 ಸಾವಿರ ರೂ ಹೆಚ್ಚಾಗಿರು ವುದರಿಂದ ಅನ್ನದಾತರ ಮುಖದಲ್ಲಿ ಸಂತಸ ಮೂಡಿದೆ. ಕಳೆದ ತಿಂಗಳ ಆ.9 ರಂದು ಒಂದು ಕ್ವಿಂಟಾಲ್‌ಗೆ 8,100 ರೂ ಇದ್ದ ಕೊಬ್ಬರಿ ಬೆಲೆ ಆಗಸ್ಟ್‌ ಅಂತ್ಯದ ವೇಳೆಗೆ 13 ಸಾವಿರಕ್ಕೆ ಏರಿಕೆಯಾಗಿದೆ.

Advertisement

ಷೇರು ಮಾರುಕಟ್ಟೆಯಂತೆ ಕೊಬ್ಬರಿ ಬೆಲೆ ಏರಿಳಿತ ಕಾಣುತ್ತಿರುವುದರಿಂದ ರೈತ ಗೊಂದಲಕ್ಕೆ
ಒಳಗಾಗಿರುವುದರ ಜೊತೆಗೆ ವ್ಯಾಪಾರಿಗಳೂ ಗೊಂದಲದಲ್ಲಿ ದ್ದಾರೆ. ಆಗಸ್ಟ್‌ ಆರಂಭದಲ್ಲಿ ಕೊಬ್ಬರಿ ಮಾರಾಟ ಮಾಡಿದ ರೈತ ತಾನು ಅನುಭವಿಸಿದ ನಷ್ಟ ನೆನೆದು ಕೊರಗುತ್ತಿದ್ದರೆ. ಇನ್ನು ಕೆಲವು ರೈತರು ಮುಂದೆ ಕೊಬ್ಬರಿ ಬೆಲೆ ಹೆಚ್ಚಾಗುತ್ತದೋ ಇಲ್ಲ ದಿಢೀರನೆ ಕುಸಿದರೆ ಏನು ಮಾಡುವುದೆಂಬ ಚಿಂತೆಯಲ್ಲಿದ್ದಾರೆ.

ರೈತ ಕೊಬ್ಬರಿ ದರ ಸರಾಸರಿ ನಿಗದಿಯಾಗ ಬೇಕು, ಇಲ್ಲದಿದ್ದರೆ ಕಷ್ಟವಾಗುತ್ತದೆ. ವಾರದಲ್ಲಿ 2 ಹರಾಜಿದ್ದು 3 ದಿನದಲ್ಲಿಯೇ 1 ರಿಂದ 2 ಸಾವಿರ ವ್ಯತ್ಯಾಸವಾದರೆ ಹೇಗೆ. ಆ.16 ರಂದು 10,600 ದರವಿದ್ದದ್ದು ನಂತರ ಏರುತ್ತಲೇ ಇದೆ. ಆದರೆ ಯಾವಾಗ ಪುನಃ ಬೀಳುತ್ತದೆ ಎಂಬ ಆತಂಕದಲ್ಲಿದ್ದಾನೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿಯೇ 15 ಕೊಬ್ಬರಿ ಮಂಡಿ ವರ್ತಕರಿದ್ದಾರೆ, ಅಷ್ಟೇ ಅಲ್ಲದೆ ಶ್ರವಣಬೆಳಗೊಳ, ಮಟ್ಟನವಿಲೆ, ಹಿರೀ ಸಾವೆ, ನುಗ್ಗೇಹಳ್ಳಿ, ಕಲ್ಕೆರೆ, ದಿಡಗ ಹಾಗೂ ಕೆಂಬಾಳಿ ನಲ್ಲಿಯೇ ಕೊಬ್ಬರಿಯನ್ನು ಖರೀದಿಸು ತ್ತಾರೆ. ಕೆಲವರು ತಿಪಟೂರು ಮಾರುಕಟ್ಟೆಗೂ ತೆಗೆದುಕೊಂಡು ಮಾರಾಟ ಮಾಡುತ್ತಾರೆ.

ಸತತ ಬರಗಾಲ: ಪಟ್ಟಣದ ಮಾರುಕಟ್ಟೆ ಯಲ್ಲಿಯೇ 15 ಮಂದಿ ವರ್ತಕರಿಂದ ಸರಿ ಸುಮಾರು 3 ರಿಂದ 4000 ಚೀಲ (45 ಕಿಲೋ ಚೀಲ) ಖರೀದಿ ಮಾಡುತ್ತಾರೆ. ಈ ಬಾರಿ ಸತತ ಬರಗಾಲ, ಕೀಟ ಹಾಗೂ ರೋಗ ಬಾಧೆಯಿಂದ ಇಳುವರಿ ಕುಂಠಿತವಾಗಿದ್ದರೆ. ಕೆಲವು ಭಾಗದಲ್ಲಿ ರೈತರ ಜಮೀನಿನಿಂದಲೇ 18 ರಿಂದ 20 ರೂ. ಗಳಿಗೆ ಎಳೆನೀರನ್ನು ಖರೀದಿಸಿದ್ದಾರೆ.

Advertisement

ಕಾಯಿ ಒಂದಕ್ಕೆ 15ರಿಂದ 20 ರೂ ಇದ್ದರೆ ಪೌಡರ್‌ ಬೆಲೆ 1 ಟನ್‌ಗೆ 32 ರಿಂದ 35 ಸಾವಿರ ರೂ ಇದೆ, ಕೊಬ್ಬರಿ ಎಣ್ಣೆ ಲೀಟರ್‌ಗೆ 180 ರೂ ಇದೆ. ಕೊಬ್ಬರಿ ಕೌಟ ಕಿಲೋಗೆ 40 ರೂ ಇದ್ದರೆ 1 ಕಿಲೋ ಕೊಬ್ಬರಿ ಚೂರಿನ ಬೆಲೆ 75 ರೂ ಇದೆ. ಕೊಬ್ಬರಿ ಬೆಲೆ ಏರಿಳಿತ ಕಾಣುತ್ತಿರುವುದರ ಜೊತೆಗೆ
ತಾಲೂಕಿನ ಕೆಲವು ಭಾಗಗಳಲ್ಲಿ ಕಪ್ಪು ತಲೆ ಹುಳುವಿನ ಬಾಧೆಯಿಂದ ತೆಂಗಿನ ಗರಿಯನ್ನು ತಿನ್ನುತ್ತಿದ್ದು ತೆಂಗಿನ ಬೆಳೆ ನಾಶವಾಗಿದೆ. ಅಷ್ಟೇ ಅಲ್ಲದೆ ಅಂತರ್ಜಲ ಮಟ್ಟ ಕುಸಿದಿದ್ದು ತೆಂಗಿನ ಬೆಳೆಗೆ ನೀರಿಲ್ಲದಂತಾಗಿದೆ.

ಹೆಚ್ಚಿದ ಬೇಡಿಕೆ: ದಿಢೀರ್‌ ಕೊಬ್ಬರಿ ದರ ಏರಿಕೆಗೆ ಕೊಬ್ಬರಿ ವರ್ತಕರು ಹೇಳುವ ಮಾಹಿತಿ ಶೇ. 90ಕ್ಕಿಂತಲೂ ಹೆಚ್ಚಿನ ಭಾಗ ಕೊಬ್ಬರಿ ಮಾರಾಟವಾಗುವುದು ಉತ್ತರ ಭಾರತದ ರಾಜ್ಯಗಳಾದ, ದೆಹಲಿ, ಗುಜರಾಜ್‌, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ರಾಜ್ಯಗಳಲ್ಲಿ. ಆದರೆ ಕಳೆದ 8 ತಿಂಗಳಿಂದಲೂ ಉತ್ತರ ಭಾರತದ ಕಡೆ ಕೊಬ್ಬರಿ ಮಾರಾಟವಾಗಲಿಲ್ಲ, ಪಕ್ಕದ ರಾಜ್ಯದ ಕೇರಳ ಹಾಗೂ ತಮಿಳುನಾಡಿನಲ್ಲಿ ಕೊಬ್ಬರಿ ಎಣ್ಣೆ ತೆಗೆಯಲು ಕೊಬ್ಬರಿ ಖರೀದಿಸಿದರು. ಈಗ
ಉತ್ತರ ಭಾರತದ ರಾಜ್ಯಗಳಿಗೆ ಬೇಡಿಕೆ ಬಂದಿದೆ.

ಕೊಬ್ಬರಿ ಮಾರಾಟದ ಮೇಲೆ ಜಿಎಸ್‌ಟಿ: ಜಿಎಸ್‌ಟಿ ನಿಗದಿಯಾದ ಮೇಲೆ ಕೊಬ್ಬರಿ ಮಾರಾಟದಿಂದ ಹೆಚ್ಚು ಆದಾಯ ಬರುತ್ತಿದೆ, ಮಾರಾಟದ ಲೆಕ್ಕದಲ್ಲಿ ತಪ್ಪು ಮಾಹಿತಿ ನೀಡುವುದು ತಪ್ಪಿದೆ ಆದರೆ ಮೊದಲು ಕೊಬ್ಬರಿ ಮಾರಾಟಕ್ಕೆ ನಿಗದಿಯಾಗಿದ್ದು ಶೆ.2 ರ ವ್ಯಾಟ್‌ ಜಿಎಸ್‌ಟಿ ಯಲ್ಲಿ ಶೇ.5 ರಷ್ಟು ಕಟ್ಟಬೇಕು. ಮಾರುಕಟ್ಟೆ ಸುಂಕ ಮೊದಲಿನಂತೆ ಶೆ.1.5 ರಷ್ಟಿದೆ

ದಯಾನಂದ್‌ ಶೆಟ್ಟಿಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next