Advertisement

ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರೂ. ನಿಗದಿಪಡಿಸಿ

05:23 PM Nov 06, 2022 | Team Udayavani |

ತಿಪಟೂರು: ರೈತರ ಹೆಸರೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವ ಸರ್ಕಾರಗಳಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಅಗತ್ಯವಸ್ತುಗಳ ಬೆಲೆ ಏರಿಕೆಯ ನಡುವೆ ಇಲ್ಲಿನ ರೈತರ ಜೀವನಾಧಾರ ವಾಣಿಜ್ಯ ಬೆಳೆಯಾದ ಕೊಬ್ಬರಿ ಬೆಲೆ ಏಕಾಏಕಿ ಕಡಿಮೆಯಾಗುವ ಮೂಲಕ ತೆಂಗು ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಬಗ್ಗೆ ಮಾತನಾಡುವ ಹಕ್ಕನ್ನು ಈ ಸರ್ಕಾರ ಕಳೆದುಕೊಂಡಿದೆ ಎಂದು ಕಾಂಗ್ರೆಸ್‌ ಮುಖಂಡ ಕೆ.ಟಿ. ಶಾಂತಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಳೆದ ವರ್ಷ 19 ಸಾವಿರ ರೂ. ಗಡಿಯಲ್ಲಿದ್ದ ಕೊಬ್ಬರಿ ಬೆಲೆ ಇದೀಗ 13 ಸಾವಿರಕ್ಕೆ ಕುಸಿದಿರುವುದು ತೆಂಗು ಬೆಳೆಗಾರರಲ್ಲಿ ಆಘಾತವುಂಟು ಮಾಡಿದೆ. ಸದ್ಯ ಸರ್ಕಾರದ ಬೆಂಬಲ ಬೆಲೆ ಕ್ವಿಂಟಲ್‌ಗೆ 10 ಸಾವಿರವಿದ್ದು, ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 20 ಸಾವಿರಕ್ಕೆ ನಿಗದಿ ಪಡಿಸುವಂತೆ ಒತ್ತಾಯಿಸಿ ಕೆ.ಟಿ.ಶಾಂತ ಕುಮಾರ್‌ ನೇತೃತ್ವದಲ್ಲಿ ಶನಿವಾರ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಿಂದ ತಾಲೂಕು ಆಡಳಿತಸೌಧ ದವರೆಗೆ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ಮೆರವಣಿಗೆ ಮೂಲಕ ಆಯೋಜಿಸಿದ್ದ ತೆಂಗು ಬೆಳೆಗಾರರ ಬೃಹತ್‌ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಮತ್ತಷ್ಟು ಕುಸಿಯುವ ಆತಂಕ: 1 ಕ್ವಿಂಟಾಲ್‌ ಕೊಬ್ಬರಿ ಬೆಳೆಯಲು 17 ಸಾವಿರಕ್ಕೂ ಹೆಚ್ಚು ಖರ್ಚು ಬರುತ್ತಿದ್ದು, ಬೆಳೆಗಾರರಿಗೆ ಕನಿಷ್ಠವೆಂದರೂ 20 ಸಾವಿರ ಬೆಲೆ ಸಿಕ್ಕರೆ ಮಾತ್ರ ವೈಜಾnನಿಕ ಬೆಲೆ ಸಿಕ್ಕಿದಂತಾಗುತ್ತದೆ. ಆದರೆ, ಸದ್ಯದ ಮಾರುಕಟ್ಟೆ ಹರಾಜು ಧಾರಣೆ ಬಹಳ ಕಡಿಮೆಯಾ ಗುತ್ತಿದ್ದು, ಮುಂದೆ ಮತ್ತಷ್ಟು ದರ ಕುಸಿಯುವ ಸಾಧ್ಯತೆಗಳೇ ಹೆಚ್ಚು ಇದ್ದಂತೆ ಕಾಣುತ್ತಿದೆ ಎಂದರು.

ತೆಂಗು ಬೆಳೆಗಾರರನ್ನು ಕಂಗಾಲು: ಈಗಾಗಲೇ ತೆಂಗು ಬೆಳೆಗಾರರು ಪ್ರಕೃತಿ ವಿಕೋಪ, ಕಪ್ಪುತಲೆ ಹುಳುರೋಗ, ರಸ ಸೋರಿಕೆ, ಗರಿ, ನುಸಿ ರೋಗಗಳು ಬಿಟ್ಟೂಬಿಡದೆ ಕಾಡುತ್ತಿದ್ದು ಇಳುವರಿ ಕುಂಠಿತವಾಗಿದೆ. ತಿಪಟೂರು ಕೊಬ್ಬರಿ ಗುಣಮಟ್ಟದಲ್ಲಿ ಅತ್ಯುತ್ತಮ ದರ್ಜೆಯಾಗಿರುವ ಕಾರಣ ಕಳೆದ ವರ್ಷ 19 ಸಾವಿರ ಗಡಿಯಲ್ಲಿದ್ದ ಕೊಬ್ಬರಿ ಇದೀಗ 13 ಸಾವಿರಕ್ಕೆ ಕುಸಿದಿರುವುದು ತೆಂಗು ಬೆಳೆಗಾರರನ್ನು ಕಂಗಾಲಾಗಿಸಿದೆ ಎಂದರು.

ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸಬೇಕಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಒಂದು ಕ್ವಿಂಟಲ್‌ ಕೊಬ್ಬರಿಗೆ ವೈಜಾnನಿಕ ಬೆಲೆಯಡಿ 20 ಸಾವಿರಕ್ಕೆ ಕನಿಷ್ಠ ಬೆಂಬಲ ಬೆಲೆ ಏರಿಸಬೇಕೆಂದು ಕೆ.ಟಿ.ಶಾಂತಕುಮಾರ್‌ ಆಗ್ರಹಿಸಿದರು. ಪ್ರತಿಭಟನೆ ನಂತರ ಎಪಿಎಂಸಿ ಕಾರ್ಯದರ್ಶಿಗಳಿಗೆ ಹಾಗೂ ತಹಶೀಲ್ದಾರ್‌ ಚಂದ್ರಶೇಖರ್‌ಗೆ ಟ್ರ್ಯಾಕ್ಟರ್‌ ಮೆರವಣಿಗೆ ಮೂಲಕವೇ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪ್ರಕಾಶ್‌, ಮುಖಂಡರಾದ ಗೊರಗೊಂಡನಹಳ್ಳಿ ಸುದರ್ಶನ್‌, ಮೋಹನ್‌ಬಾಬು, ಹೇಮಂತ್‌, ರೈತ ಮುಖಂಡರಾದ ಲಕ್ಷ್ಮೀಪುರದ ಬಸವರಾಜು, ಆಲ್ದಹಳ್ಳಿ ಚನ್ನೇಗೌಡ, ಬಜಗೂರು ವಸಂತ್‌, ಗಿರೀಶ್‌, ಈಶ್ವರ್‌, ಪ್ರಭು ವಾಸುದೇವರಹಳ್ಳಿ, ಚಂದ್ರಶೇಖರ್‌, ರೇಣುಕಯ್ಯ ಸೇರಿದಂತೆ ನೂರಾರು ಸಂಖ್ಯೆಯಲ್ಲಿ 35ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ವಿವಿಧ ಹಳ್ಳಿಗಳಿಂದ ರೈತರು ಭಾಗವಹಿಸಿದ್ದರು.

Advertisement

ಸಚಿವರಿಗೆ ರೈತರ ಕಷ್ಟ ತಿಳಿಯುತ್ತಿಲ್ಲ: ಇಲ್ಲಿನ ಸಚಿವರಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೊರರಾಜ್ಯಗಳಲ್ಲಿ ಕೊಬ್ಬರಿಗೆ ಉತ್ತಮ ಬೆಲೆಯಿದ್ದರೂ, ರೈತರಿಂದ ಖರೀದಿಸುವ ಬೆಲೆ ತುಂಬಾ ಕಡಿಮೆ ಇದೆ. ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿ ಕೊಬ್ಬರಿ ಬೆಲೆ ಸ್ಥಿರವಾಗಿರುವಂತೆ ಗಮನಹರಿಸ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಕೆ.ಟಿ. ಶಾಂತಕುಮಾರ್‌ ಎಚ್ಚರಿಕೆ ನೀಡಿದರು.

ಸಚಿವರಿಗೆ ರೈತರ ಕಷ್ಟ ತಿಳಿಯುತ್ತಿಲ್ಲ : ಇಲ್ಲಿನ ಸಚಿವರಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೊರರಾಜ್ಯಗಳಲ್ಲಿ ಕೊಬ್ಬರಿಗೆ ಉತ್ತಮ ಬೆಲೆಯಿದ್ದರೂ, ರೈತರಿಂದ ಖರೀದಿಸುವ ಬೆಲೆ ತುಂಬಾ ಕಡಿಮೆ ಇದೆ. ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿ ಕೊಬ್ಬರಿ ಬೆಲೆ ಸ್ಥಿರವಾಗಿರುವಂತೆ ಗಮನಹರಿಸ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಕೆ.ಟಿ. ಶಾಂತಕುಮಾರ್‌ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next