Advertisement

ಕೊಬ್ಬರಿ ಎಣ್ಣೆಯ ಮಸಾಜ್‌…

04:41 AM Jun 16, 2020 | Lakshmi GovindaRaj |

ಮಳೆಗಾಲ ಶುರುವಾಯಿತು. ಬೆನ್ನಿಗೆ ಚಳಿಯೂ ಇದೆ. ಈ ಸಂದರ್ಭದಲ್ಲಿ ಶೂ ಹಾಕಿಕೊಂಡು ಓಡಾಡುವ ಮಂದಿಯ ಕಾಲು ಏನಾಗಿರಬೇಡ ಯೋಚಿಸಿ. ಜಾಸ್ತಿ ಹೊತ್ತು ಮಾಸ್ಕ್‌ ಹಾಕಿಕೊಂಡರೆ ಹೇಗೆ ಉಸಿರುಗಟ್ಟಿದಂತೆ ಆಗುತ್ತದೆಯೋ  ಹಾಗೇ, ಕಾಲಿಗೂ ಆಗುತ್ತದೆ. ವಾತಾವರಣದಲ್ಲಿ ತೇವ ಕಡಿಮೆಯಾದಂತೆಲ್ಲಾ ಚರ್ಮ ಒಣಗುತ್ತದೆ. ಆಗಲೇ ಪಾದಗಳು ಸೀಳು ಬಿಡುವುದು.

Advertisement

ಈ ಸಮಯದಲ್ಲಿ ಕೆಲವರು ಸಾಕ್ಸ್‌ ಧರಿಸಿ ಕಾಲು ಬಿಸಿಯಾಗಿರು ವಂತೆ ನೋಡಿಕೊಳ್ಳುತ್ತಾರೆ. ಇಡೀ  ದಿನ ಸಾಕ್ಸ್‌ ಹಾಕಿದರೆ, ಕಾಲು ವಾಸನೆ ಬಂದು ಬಿಡುತ್ತದೆ. ಇದಕ್ಕೆಲ್ಲಾ ರಾಮಬಾಣ ಯಾವುದು ಗೊತ್ತೇ? ಕೊಬ್ಬರಿ ಎಣ್ಣೆ. ರಾತ್ರಿ ಮಲಗುವ ಮುನ್ನ ಕಾಲಿಗೆ ಎಣ್ಣೆ ಹಚ್ಚಿ. ಅದರಿಂದ ಕಾಲಿಗೆ ಮಸಾಜ್‌ ಮಾಡಿಕೊಳ್ಳಿ. ಹೀಗೆ ಮಾಡುವು ದರಿಂದ ಕಾಲು ಬೆಚ್ಚಗಾಗುತ್ತದೆ. ಕಾಲಿನ ಚರ್ಮದ ಮಾಯಿಶ್ಚರ್‌ ಹಾಗೇ ಉಳಿಯುತ್ತದೆ.

ಡೆಡ್‌ ಸ್ಕಿನ್‌ ಸಹ ಜಾಸ್ತಿಯಾಗುವುದಿಲ್ಲ. ಹಸಿ ಈರುಳ್ಳಿ ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಬೇಯಿಸಿದ ಅಥವಾ ಹುರಿದ ಈರುಳ್ಳಿಗಿಂತ, ಹಸಿ ಈರುಳ್ಳಿಯಲ್ಲಿ ಆರ್ಗಾನಿಕ್‌ ಸಲ್ಫರ್‌ನ ಪ್ರಮಾಣ ಜಾಸ್ತಿ ಇರುತ್ತದೆ. ಈರುಳ್ಳಿ, ದೇಹದ ಆರೋಗ್ಯವನ್ನಷ್ಟೇ ಅಲ್ಲ, ತ್ವಚೆ ಹಾಗೂ ಕೂದಲ ಸೌಂದರ್ಯವನ್ನೂ ಕಾಪಾಡುತ್ತದೆ. ಈರುಳ್ಳಿಯಲ್ಲಿರುವ ಸತ್ವಾಂಶಗಳು,  ರಕ್ತನಾಳದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next