Advertisement

ತೆಂಗಿನ ಎಣ್ಣೆ ಯಾವತ್ತೂ ವಿಷವಲ್ಲ: ಡಾ|ವ್ಯಾಸರಾವ್‌ ನಿಂಜೂರು

04:47 PM Sep 28, 2018 | |

ಮುಂಬಯಿ: ಜ್ಞಾನಿಗಳ ಮಾತೇ ಸರ್ವಶ್ರೇಷ್ಠವಲ್ಲ. ಅವರಿಗಿಂತ ನಮ್ಮ ಮನೆಯ ಅಜ್ಜಿಯಂದಿರೇ ಶ್ರೇಷ್ಠ. ಜಾಗತೀಕರಣದ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಮುಂದುವರಿದ ರಾಷ್ಟ್ರಗಳು ತಮ್ಮ ಉತ್ಪನ್ನಗಳನ್ನು ಮಾರಾಟಮಾಡುವ ಹುನ್ನಾರದಿಂದ ಇತರ ಉತ್ಪನ್ನಗಾರರು ನಮ್ಮ ತೆಂಗಿನಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಭಾರತದಲ್ಲಿ ಸೋಯಾಬೀನ್‌ ಎಣ್ಣೆಯನ್ನು ಮಾರಾಟ ಮಾಡುವುದಕ್ಕಾಗಿ ತೆಂಗಿನ ಎಣ್ಣೆಯಲ್ಲಿ ಇರುವ ಸಂತೃಪ್ತ ಕೊಬ್ಬಿನಾಮ್ಲಗಳನ್ನು ಹೃದಯದ ಸ್ವಾಸ್ಥ್ಯಕ್ಕೆ ಮಹಾಮಾರಿ ಎಂದು ಜರೆಯಲಾಯಿತು. ಆದರೆ ನಿಜವಾಗಿ ನೋಡಿದರೆ ತೆಂಗಿನ ಎಣ್ಣೆ ವಿಷವಲ್ಲ. ಹಾಗೆನ್ನುವುದು ಧಿಮಾಕಿನ ಮಾತು. ನಮ್ಮ ದೇಹಕ್ಕೆ ತೆಂಗಿನ ಎಣ್ಣೆಯಿಂದ ಯಾವ ತೊಂದರೆಯೂ ಇಲ್ಲ. ತೆಂಗಿನೆಣ್ಣೆಯಿಂದ ಅನೇಕ ಪ್ರಯೋಜನಗಳಿವೆ. ದೇಹದಲ್ಲಿ ಎಣ್ಣೆ ಪಸೆ ಇದ್ದರೆ ಯಾವ ಕ್ರಿಮಿ ಕೀಟಾಣುಗಳ ಸೋಂಕೂ ಆಗುವುದಿಲ್ಲ. 

Advertisement

ಪೂರ್ವ ರಾಷ್ಟ್ರಗಳು ತಾಳೆ ಎಣ್ಣೆಗೆ ಪ್ರೋತ್ಸಾಹ  ನೀಡಿದರು. ತೆಂಗಿನೆಣ್ಣೆಯಲ್ಲಿ ಸಂತೃಪ್ತ ಕೊಬ್ಬಿನಾಮ್ಲ ಹೆಚ್ಚಿದೆ. ಆಗ್ಯಾìನಿಕ್‌ ಆ್ಯಸಿಡ್‌ ಕೂಡಾ ಇರುವುದರಿಂದ ಅದು ಒಳ್ಳೆಯದಲ್ಲ ಎಂದು ಭಾವಿಸಲಾಗುತ್ತಿತ್ತು.  ನಾವು ಕರಾವಳಿಯವರು, ಕೇರಳದವರು ಅನಾದಿ ಕಾಲದಿಂದಲೂ ತೆಂಗಿನ ಎಣ್ಣೆಯನ್ನು ಉಪಯೋಗಿಸುತ್ತಿದ್ದು ಆರೋಗ್ಯ ವಂತರಾಗಿದ್ದರು ಎಂದು ಖ್ಯಾತ 

ವಿಜ್ಞಾನಿ, ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ| ವ್ಯಾಸರಾವ್‌ ನಿಂಜೂರು ಅವರು ಅಭಿಪ್ರಾಯಿಸಿದರು.

ಅವರು ಸೆ. 25 ರಂದು ಮುಂಬಯಿ ವಿಶ್ವವಿದ್ಯಾ ಲಯ, ಕನ್ನಡ ವಿಭಾಗದಲ್ಲಿ ಪ್ರಗತಿ ಪರಿಶೀಲನೆ ಸಭೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ನಮ್ಮ ದೇಶದಲ್ಲಿ ಉಪ್ಪಿನಕಾಯಿಯನ್ನು ಮಾಡುವ ಕಲೆ ಅದಾಗಲೇ ತೀರ ಮುಂದುವರಿದ ಹಂತ ಮುಟ್ಟಿತ್ತು. ನಾವು ಶಾಸ್ತ್ರೀಯವಾಗಿ ಹೆಸರು ನೀಡಿರುವ ಬುರುಗು ಪದ್ಧತಿಯನ್ನು ಉಪ್ಪಿನಕಾಯಿಯಲ್ಲಿ ಹ್ಯಾಲೋ´ೋಬಿಕ್‌ (ಲವಣದ್ವೇ) ಬ್ಯಾಕ್ಟೀರಿಯಾ ತಡೆಗಟ್ಟಿ ನಿರ್ವಾತದಲ್ಲಿ ಕಾಪಿಡುವ ತಂತ್ರಜ್ಞಾನ ಬಳಸಲಾಗುತ್ತದೆ. ವಿಜ್ಞಾನವನ್ನು ಆನ್ವಯಿಕ ಶಾಸ್ತ್ರವಾಗಿ ಬಳಸಿ ಜನ ಜೀವನವನ್ನು ಸುಗಮಗೊಳಿಸುವ ಕಾಯಕ ನಮ್ಮ ಆಹಾರ ಪದ್ಧತಿಯಲ್ಲಿ ವಿಕಸನಗೊಂಡಷ್ಟು ಪ್ರಮಾಣದಲ್ಲಿ  ವಿಸ್ತೃತವಾಗಿ  ಬೇರೆ ಅಂಗಗಳಲ್ಲಿ ನಡೆದಿಲ್ಲ ಎನ್ನುವುದು ವಾಸ್ತವ. ಆದರೂ ಮೂಲಭೂತ ವಿಜ್ಞಾನದ ಕವಲುಗಳಾದ ಗಣಿತ, ಖಗೋಳ ಶಾಸ್ತ್ರ, ವೈದ್ಯಕೀಯ, ಲೋಹ ಶಾಸ್ತ್ರ, ಸಸ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ- ಇತ್ಯಾದಿಗಳಲ್ಲಿ ಭಾರತವು ಗೈದ ಸಾಧನೆ ತುಂಬ ಮಹತ್ವದ್ದು ಎಂದು ನುಡಿದರು.

ಸೋಮಯ್ನಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ| ಎಸ್‌. ಕೆ. ಭವಾನಿ ಅವರು ಮಾತನಾಡಿ. ಕನ್ನಡ ವಿಭಾಗ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಉನ್ನತ ಅಧ್ಯಯನದ ಜೊತೆಗೆ ಕನ್ನಡೇತರರಿಗೆ, ಕನ್ನಡ ಬಾರದವರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಕನ್ನಡ ವಿಭಾಗದ ಪ್ರಕಟಣೆಗಳು ಜನಪ್ರಿಯವಾಗಿವೆ. ಇದು ವಿಭಾಗದ ವಿದ್ಯಾರ್ಥಿಗಳ ಸಾಧನೆಗೆ ಹಿಡಿದ ಕನ್ನಡಿ. ಕನ್ನಡ ವಿಭಾಗದಲ್ಲಿ ಅಧ್ಯಾಪಕರ ಕೊರತೆ ಎದ್ದುಕಾಣುತ್ತಿದ್ದು ಅದನ್ನು ಖಾಲಿ ಇರುವ ಹುದ್ದೆಯನ್ನು ಆದಷ್ಟು ಬೇಗ ಭರ್ತಿ ಮಾಡಬೇಕು. ಕನ್ನಡ ವಿಭಾಗಕ್ಕೆ ಇನ್ನಷ್ಟು ಸ್ಥಳಾವಕಾಶವನ್ನು ಕಲ್ಪಿಸಿಕೊಡಬೇಕು ಎಂದು ನುಡಿದ ಅವರ,  ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯವನ್ನು ಒತ್ತಾಯಿಸಿ ತಮ್ಮ ಅಭಿಪ್ರಾಯಗಳನ್ನು ವಿಶ್ವವಿದ್ಯಾಲಯಕ್ಕೆ ಲಿಖೀತವಾಗಿ ಬರೆದು ಹಸ್ತಾಂತರಿಸಿದರು.

Advertisement

ಖ್ಯಾತ ವಿಜ್ಞಾನಿ, ವಿಶ್ರಾಂತ ಪ್ರಾಧ್ಯಾಪಕ ಡಾ| ವ್ಯಾಸರಾವ್‌ ನಿಂಜೂರು ಹಾಗೂ ಸೋಮಯ್ನಾ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಹಿರಿಯ ಶಿಕ್ಷಣ ತಜ್ಞರಾದ ಡಾ| ಎಸ್‌. ಕೆ. ಭವಾನಿ ಅವರು ಈ ಉಪಕ್ರಮವನ್ನು ನಡೆಸಿಕೊಟ್ಟರು.  ವಿಭಾಗದ ಸಂದರ್ಶಕ ಉಪನ್ಯಾಸಕರ ಪರವಾಗಿ ಡಾ| ವಿಶ್ವನಾಥ ಕಾರ್ನಾಡ್‌ ಅವರು ಈ ಸಂದರ್ಭದಲ್ಲಿ ಹಾಜರಿದ್ದು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ  ವಂದಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ಹಂತದಲ್ಲಿ ಸಂಶೋಧನ ವಿದ್ಯಾರ್ಥಿಗಳಾದ ವೈ. ವಿ. ಮಧುಸೂದನ್‌ ರಾವ್‌, ಕುಮುದಾ ಆಳ್ವ, ಸುರೇಖಾ ಸುಂದರೇಶ್‌, ಶಿವರಾಜ್‌ ಎಂ. ಜಿ, ಜಯ ಪೂಜಾರಿ, ಅನಿತಾ ಪೂಜಾರಿ, ತಾಕೋಡೆ, ಲಕ್ಷಿ¾à ಪೂಜಾರಿ, ಸೋಮಶೇಖರ ಮಸಳಿ, ಜಮೀಲಾ ವಿಪ್ಪರಗಿ, ಪಾರ್ವತಿ  ಪೂಜಾರಿ  ಅವರು ತಮ್ಮ ತಮ್ಮ ಶೈಕ್ಷಣಿಕ ಸಾಧನೆಗಳನ್ನು ತೆರಿದಿಟ್ಟರು.

ಮುಂಬಯಿ ವಿವಿ ಕುಲಪತಿಗಳ ನಿರ್ದೇಶದ ಮೇರೆಗೆ ಎಲ್ಲ ವಿಭಾಗಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಪ್ರಗತಿ ಪರಿಶೀಲನ ಸಮಿತಿಯನ್ನು ರಚಿಸಿ ಮೌಲ್ಯ ಮಾಪನ ಕಾರ್ಯವನ್ನು ನಡೆಸಲು ಕನ್ನಡ ವಿಭಾಗದ ಪ್ರಗತಿ ಪರಿಶೀಲನ ತಂಡದ ವಿಷಯ ತಜ್ಞರಾಗಿ ಖ್ಯಾತ ವಿಜ್ಞಾನಿ, ವಿಶ್ರಾಂತ ಪ್ರಾಧ್ಯಾಪಕ ಡಾ| ವ್ಯಾಸರಾವ್‌ ನಿಂಜೂರು ಹಾಗೂ ಸೋಮಯ್ನಾ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಹಿರಿಯ ಶಿಕ್ಷಣ ತಜ್ಞರಾದ ಡಾ| ಎಸ್‌. ಕೆ. ಭವಾನಿ ಅವರು ಆಯ್ಕೆಯಾಗಿದ್ದಾರೆ. ಕನ್ನಡ ವಿಭಾಗ ಕಳೆದ ಐದು ವರ್ಷಗಳಲ್ಲಿ ಅನೇಕ ನೆಲೆಗಳಲ್ಲಿ ಮಹತ್ವದ ಸಾಧನೆಗೈದಿದೆ. ವಿಭಾಗದ ಪ್ರಕಟಣೆಗಳ ಸಂಖ್ಯೆ ಈಗ ಎಪ್ಪತ್ತಕ್ಕೆ ಏರಿದೆ. ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಎಂ.ಫಿಲ್‌, ಪಿ.ಎಚ್‌.ಡಿ ಅಧ್ಯಯನದಲ್ಲಿ ನಿರತರಾಗಿದ್ದು ಹೆಚ್ಚಿನ ಶೋಧ ಪ್ರಬಂಧಗಳು ಕೃತಿ ರೂಪದಲ್ಲಿ ಪ್ರಕಟವಾಗಿವೆ. ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಆಶಾದಾಯಕ ಸಂಗತಿ. 
-ಡಾ| ಜಿ. ಎನ್‌. ಉಪಾಧ್ಯ, ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿವಿ

Advertisement

Udayavani is now on Telegram. Click here to join our channel and stay updated with the latest news.

Next