Advertisement
ಕಾಕ್ಲಿಯರ್ ಇಂಪ್ಲಾಂಟ್‌ಗಳು, ನಷ್ಟವಾಗಿರುವ ಅಥವಾ ಹಾನಿಗೊಳಗಾಗಿರುವ ಹೇರ್ ಸೆಲ್‌ಗಳಿಗೆ ಬದಲಿಯಾಗಿ/ಪರ್ಯಾಯವಾಗಿ ಕೆಲಸ ಮಾಡುತ್ತವೆ, ಅಂದರೆ ಹೇರ್ ಸೆಲ್‌ಗಳು ಸ್ವೀಕರಿಸುವ ಶಬ್ದದ ಫ್ರೀಕ್ವೆನ್ಸಿ ಮತ್ತು ಆಂಪ್ಲಿಟ್ಯೂಡ್ ಅನ್ನು ಅನುಕರಿಸಿ, ಇಂಪ್ಲಾಂಟ್ ಶಬ್ದವನ್ನು ಪುನಾರಚನೆ ಮಾಡುತ್ತವೆ. ಇಂಪ್ಲಾಂಟ್‌ಗಳ ಮೂಲಕ, ಮಾತು ಮತ್ತು ಸುತ್ತಮುತ್ತಲಿನ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಮಟ್ಟಕ್ಕೆ ಶ್ರವಣ ಸಾಮರ್ಥ್ಯವನ್ನು ಸುಧಾರಿಸಬಹುದು; ಆದರೆ ಶಬ್ದದ ಗುಣಮಟ್ಟವು ಸ್ವಾಭಾವಿಕ ಕೇಳಿಸುವಿಕೆಗಿಂತ ಭಿನ್ನವಾಗಿರಬಹುದು ಮತ್ತು ಒಳಬರುವ ಶಬ್ದದ ಮೇಲಿನ ನರವ್ಯೂಹದ ಕಾರ್ಯಾಚರಣೆ ಭಿನ್ನವಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಇಂಪ್ಲಾಂಟ್ ಅನ್ನು ಕಿವಿಯ ಹಿಂಭಾಗದ ಚರ್ಮದ ಅಡಿಯಲ್ಲಿ ಅಳವಡಿಸುತ್ತಾರೆ. ಈ ಸಾಧನವು ಒಳಗೊಂಡಿರುವ ಭಾಗಗಳು ಅಂದರೆ: ಬಾಹ್ಯ ಮೈಕ್ರೋಫೋನ್, ಸ್ಪೀಚ್ ಪ್ರಾಸೆಸರ್, ಆಂತರಿಕ ಗ್ರಾಹಕ ಮತ್ತು ಎಲೆಕ್ಟ್ರೋಡ್. ಈ ಶಸ್ತ್ರಚಿಕಿತ್ಸೆ ಮತ್ತು ಸಾಧನದಿಂದ ಯಾವ ಮಟ್ಟದಲ್ಲಿ ಪ್ರಯೋಜನ ಆಗಬಹುದು ಎಂಬುದನ್ನು ಬೇರೆ ಬೇರೆ ಅಂಶಗಳು ನಿರ್ಧರಿಸುತ್ತವೆ. ಕಾಕ್ಲಿಯರ್ ಅಳವಡಿಸುವ ಕೇಂದ್ರಗಳು ವ್ಯಕ್ತಿಗತ ಆಧಾರದಲ್ಲಿ ಮತ್ತು ವ್ಯಕ್ತಿಯ ಕೇಳುವಿಕೆಯ ಹಿನ್ನೆಲೆ, ಶ್ರವಣದೋಷಕ್ಕೆ ಕಾರಣವಾಗಿರುವ ಅಂಶಗಳು, ಕೇಳುವಿಕೆಯ ಸಾಮರ್ಥ್ಯ, ಮಾತನ್ನು ಗುರುತಿಸುವ ಸಾಮರ್ಥ್ಯ, ಆರೋಗ್ಯ ಮಟ್ಟ ಮತ್ತು ವ್ಯಕ್ತಿಯ ಶ್ರವಣ ಪುನಃಶ್ಚೇತನ/ಪುನಃಶ್ಚೇತನದಲ್ಲಿ ಕುಟುಂಬದ ಬದ್ಧತೆ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಮಗುವು ಈ ಚಿಕಿತ್ಸೆಯನ್ನು ಪಡೆದ ನಂತರ ಅದರ ಪೂರ್ತಿ ಪ್ರಮಾಣದ ಪ್ರಯೋಜನ ಪಡೆಯಲು ಮಾತಿನ ತರಬೇತಿಯನ್ನೂ ಪಡೆಯಬೇಕಾಗುತ್ತದೆ.
ಅಂದರೆ ಏನದು?
ಕಾಕ್ಲಿಯರ್ ಇಂಪ್ಲಾಂಟ್ ಎನ್ನುವುದು ಒಂದು ಎಲೆಕ್ಟ್ರಾನಿಕ್ ಸಾಧನ, ಉಪಯುಕ್ತ ಶಬ್ದಗಳನ್ನು ಗ್ರಹಿಸಲು ಇದನ್ನು ಶಸ್ತ್ರಚಿಕಿತ್ಸೆಯ ಮೂಲಕ ಒಳಕಿವಿಯ ಒಳಭಾಗದಲ್ಲಿ ಇರಿಸುತ್ತಾರೆ. ಈ ಶ್ರವಣ ಸಾಧನವು ಕೇಳುವಿಕೆಯ ಶಕ್ತಿಯನ್ನು ಮತ್ತು ಇಂಪ್ಲಾಂಟ್ ಬಳಸುವವರ ಸಂವಹನಾ ಸಾಮರ್ಥ್ಯವನ್ನು ಉತ್ತಮಪಡಿಸುತ್ತದೆ. ತೀವ್ರದಿಂದ ಗಂಭೀರ ರೂಪದ ಶ್ರವಣದೋಷ ಇರುವ ರೋಗಿಗಳಿಗೆ ಇದು ಬಹಳ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಚಿಕಿತ್ಸೆ. ತಮ್ಮ ಕಾಕ್ಲಿಯಾ (ಒಳಗಿವಿಯ ಸುರುಳಿ)ದಲ್ಲಿನ ಸಂವೇದನಾ ಕೋಶಗಳು ಹಾನಿಗೀಡಾಗಿರುವ ಕಾರಣದಿಂದ ಕಿವುಡರಾಗಿರುವ ರೋಗಿಗಳಿಗೆ ಕಾಕ್ಲಿಯರ್ ಅಳವಡಿಕೆಯಿಂದ ಶ್ರವಣಶಕ್ತಿಯನ್ನು ಮರಳಿ ಪಡೆಯಲು ಸಹಾಯ ಆಗಬಹುದು. ನಮ್ಮ ಶರೀರದಲ್ಲಿನ ಹೆಚ್ಚಿನ ಜೀವಕೋಶಗಳು ಒಮ್ಮೆ ಹಾನಿಗೊಳಗಾದರೆ ಮತ್ತೆ ಚೇತರಿಸಿಕೊಳ್ಳುತ್ತವೆ, ಆದರೆ ಸಂವೇದನಾ ಕೋಶಗಳು ಒಮ್ಮೆ ಹಾನಿಗೊಳಗಾದರೆ ಅವು ಮತ್ತೆ ಪುನಃಶ್ಚೇತನಗೊಳ್ಳುವುದಿಲ್ಲ. ಸಾಧಾರಣ-ತೀವ್ರ ಕಿವುಡು ಇರುವವರಿಗೆ ಪ್ರಯೋಜನ
ಸಾಧಾರಣದಿಂದ ತೀವ್ರ ಸ್ವರೂಪದ ಕಿವುಡುತನ ಇರುವವರಿಗೆ ಶ್ರವಣ ಸಾಧನಗಳಿಂದ ಪ್ರಯೋಜನ ಆಗಬಹುದು, ಆದರೆ ಸಂಪೂರ್ಣ ಕಿವುಡುತನ ಇರುವವರಿಗೆ ಶ್ರವಣ ಸಾಧನಗಳಿಂದ ಹೆಚ್ಚು ಪ್ರಯೋಜನ ಆಗದು. ಈ ರೀತಿಯಲ್ಲಿ ವಿಶೇಷ ಶ್ರವಣ ನಷ್ಟ ಆಗಿರುವ ವ್ಯಕ್ತಿಗಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅನ್ನು ಸೂಚಿಸುತ್ತಾರೆ. ಮಗುವು ಈ ಚಿಕಿತ್ಸೆಯನ್ನು ಪಡೆದ ನಂತರ ಅದರ ಪೂರ್ತಿ ಪ್ರಮಾಣದ ಪ್ರಯೋಜನ ಪಡೆಯಲು ಮಾತಿನ ತರಬೇತಿಯನ್ನೂ ಪಡೆಯಬೇಕಾಗುತ್ತದೆ.
Related Articles
ಅಸಿಸ್ಟೆಂಟ್ ಪ್ರೊಫೆಸರ್,
ಸ್ಪೀಚ್ ಎಂಡ್ ಹಿಯರಿಂಗ್ ವಿಭಾಗ,
ಮಣಿಪಾಲ ವಿಶ್ವದ್ಯಾನಿಲಯ
ಮಣಿಪಾಲ.
Advertisement