Advertisement

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

08:18 PM Oct 06, 2024 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ರವಿವಾರ ಸಂಜೆ ಗುಡುಗು- ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಕೇಪುನಲ್ಲಿ ಮನೆಗೆ ಸಿಡಿಲು ಬಡಿದು ಹಾನಿಯಾಗಿರುವ ಜತೆಗೆ ನರಿಕೊಂಬುನಲ್ಲಿ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ.

Advertisement

ಕೇಪು ಗ್ರಾಮದ ಕೋಡಂದೂರುನಲ್ಲಿ ಜಯರಾಮ ನಾಯ್ಕ ಅವರ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್‌ ಪರಿಕರಗಳಿಗೆ ಹಾನಿಯಾಗಿದೆ. ಅಳಿಕೆ ಗ್ರಾಮದ ಅರುಂಬು ನಾರಾಯಣ ಮೂಲ್ಯ ಅವರ ಮನೆಗೆ ಸಿಡಿಲು ಬಡಿದು ಗೋಡೆಗೆ ಹಾನಿಯಾಗಿದೆ.

ನರಿಕೊಂಬು ಗ್ರಾಮದ ಮಾರುತಿನಗರದಲ್ಲಿ ಆಶಾ ಉಮೇಶ್‌ ನಾಯ್ಕ ಅವರ ಮನೆ ಮೇಲೆ ತೆಂಗಿನಮರ ಬಿದ್ದು ಹೆಚ್ಚಿನ ಹಾನಿಯಾಗಿದೆ. ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದ್ದು, ಗೋಡೆಗೂ ಹಾನಿಯಾಗಿದೆ. ಮೂರು ಪ್ರಕರಣಗಳಲ್ಲೂ ಯಾವುದೇ ಜೀವಹಾನಿ ಉಂಟಾಗಿಲ್ಲ ಎಂದು ತಾಲೂಕು ಆಡಳಿತ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next