Advertisement

ಶ್ರೀನಿಧಿ ಶೆಟ್ಟಿ ಗೆ ಡಬಲ್‌ ಖುಷಿ ಕೋಬ್ರಾ ಟೀಸರ್‌ ರಿಲೀಸ್‌

03:26 PM Jan 10, 2021 | Team Udayavani |

“ಕೆಜಿಎಫ್’ ಚಿತ್ರದ ನಾಯಕ ನಟಿ ಶ್ರೀನಿಧಿ ಶೆಟ್ಟಿ ಸದ್ಯ ಡಬಲ್‌ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಶ್ರೀನಿಧಿ ಶೆಟ್ಟಿ ಅಭಿನಯಿಸಿರುವ ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳ ಟೀಸರ್‌ ಬಿಡುಗಡೆಯಾಗಿರುವುದು. ಹೌದು, ಇತ್ತೀಚೆಗಷ್ಟೇ ಶ್ರೀನಿಧಿ ಶೆಟ್ಟಿ ಅಭಿನಯಿಸಿರುವ “ಕೆಜಿಎಫ್-2′ ಚಿತ್ರದ ಫ‌ಸ್ಟ್‌ ಟೀಸರ್‌ ಬಿಡುಗಡೆಯಾಗಿ ಭರ್ಜರಿ ಸೌಂಡ್‌ ಮಾಡುತ್ತಿದೆ.

Advertisement

ಇದರ ಬೆನ್ನಲ್ಲೇ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿರುವ ತಮಿಳು ಚಿತ್ರ “ಕೋಬ್ರಾ’ ಟೀಸರ್‌ ಕೂಡ ಬಿಡುಗಡೆಯಾಗಿದೆ. ಇನ್ನು “ಕೋಬ್ರಾ’ ಚಿತ್ರದಲ್ಲಿ ನಟ ವಿಕ್ರಂ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

“ಕೆಜಿಎಫ್’ ಚಿತ್ರದಲ್ಲಿ ಬೋಲ್ಡ್‌ ಆ್ಯಂಡ್‌ ರಗಡ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ “ಕೋಬ್ರಾ’
ಚಿತ್ರದಲ್ಲಿ ಔಟ್‌ ಆ್ಯಂಡ್‌ ಔಟ್‌ ಕ್ಲಾಸ್‌ ಲುಕ್‌ನಲ್ಲಿ ಟ್ರೆಡೀಷನಲ್‌ ಗರ್ಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:‘ದಾರಿ ತಪ್ಪಿದ್ದ’: ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟ ಸೈನಿಕನ ಬಿಡುಗಡೆಗೆ ಚೀನಾ ಮನವಿ

ಸದ್ಯ ತಮಿಳಿನಲ್ಲಿ ಬಿಡುಗಡೆಯಾಗಿರುವ “ಕೋಬ್ರಾ’ ಟೀಸರ್‌ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶ್ರೀನಿಧಿ ಶೆಟ್ಟಿ ಅಭಿನಯಿಸಿರುವ ಮೊದಲ ಈ ತಮಿಳು ಚಿತ್ರ ಇದೇ ಏಪ್ರಿಲ್‌ ವೇಲೆಗೆ ತೆರೆಗೆ ಬರುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next