ಉಡುಪಿ: ನಾಗರಹಾವೊಂದು ನಗರದ ಜಂಕ್ಷನ್‌ಗೆ ಆಗಮಿಸಿ ಪರಿತಪಿಸಿದ ಘಟನೆ ಎಲ್ಲರನ್ನು ವಿಚಲಿಸಿತಗೊಳಿಸಿತ್ತು. ಗುರುವಾರ ಸಾಯಂಕಾಲ ಸದಾಕಾಲ ವಾಹನ ಓಡಾಟದಿಂದ ಕೂಡಿರುವ ಕಲ್ಸಂಕ ಜಂಕ್ಷನ್‌ನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಇದನ್ನು ನೋಡಿ ವಾಹನ ಸವಾರರು, ಸಂಚಾರ ಪೊಲೀಸರು ತಬ್ಬಿಬ್ಬಾದರು.
ಗುಂಡಿಬೈಲು ಹೋಗುವ ರಸ್ತೆಯ ಕಡೆಯಿಂದ ಕೃಷ್ಣಮಠಕ್ಕೆ ಹೋಗುವ ರಸ್ತೆಯ ಕಡೆಗೆ ಹಾವು ಹೋಗುತ್ತಿದ್ದು. ಆಚೀಚೆ ಓಡಾಡುವ ವಾಹನ, ಜನರು ರಸ್ತೆಯ ಬಿಸಿಗೆ ಹಾವು ಸಹ ಗಲಿಬಿಲಿಗೊಂಡಿದೆ. ಇದನ್ನು ಗಮನಿಸಿದ ಸಂಚಾರ ಪೊಲೀಸ್ ಸಿಬ್ಬಂದಿ ಕೆಲಕಾಲ 4 ಕಡೆಗಳಲ್ಲಿ ವಾಹನಗಳನ್ನು ತಡೆದು, ಹಾವಿಗೆ ಸರಾಗವಾಗಿ ಸಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ.
ನಾಗರಹಾವು ವೃತ್ತವನ್ನು ದಾಟಲು ಅರ್ಧಗಂಟೆ ಸಮಯ ತೆಗೆದುಕೊಂಡಿತು. ಸಣ್ಣಗಾಯ ಮತ್ತು ಬಿಸಿಲಿನಿಂದ ಬಳಲಿದ್ದ ಹಾವನ್ನು ಗುಂಡಿಬೈಲಿನ ಭಟ್ಟರೊಬ್ಬರು ಹಿಡಿದು, ಹಾರೈಕೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ ಎಂದು ಸಂಚಾರ ಠಾಣೆ ಎಸ್‌ಐ ಖಾದರ್ ತಿಳಿಸಿದರು.
ಇದನ್ನೂ ಓದಿ:ಕಸದ ಜೊತೆ ಇದ್ದ ಮಾಂಗಲ್ಯ ಸರವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕರು
ವಾಹನ ಸವಾರರೊಬ್ಬರು ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.