Advertisement
ಜಗತ್ತಿನಾದ್ಯಂತ ಕರಾವಳಿ ಪ್ರದೇಶ ಗಳು ಅಪಾರ ಸಂಖ್ಯೆಯಲ್ಲಿ ಪ್ರವಾಸಿ ಗರನ್ನು ಸೆಳೆಯುವುದು ಸಹಜ ಪ್ರಕ್ರಿಯೆ. ಸಾಗರ ಮತ್ತು ಸಮುದ್ರ ಕಿನಾರೆಗಳು ಅಪಾರ ಆಕರ್ಷಣೆಗೆ ಪಾತ್ರವಾಗಿ ರುವುದೇ ಇದಕ್ಕೆ ಕಾರಣ. ಸಾಗರ ಸಂಬಂಧಿತ ಸರ್ಫಿಂಗ್ ಇತ್ಯಾದಿ ಕ್ರೀಡೆಗ ಳಿಂದಲೂ ಈ ಆಕರ್ಷಣೆ ವೃದ್ಧಿಸುತ್ತದೆ. ಜಗತ್ತಿನ ಕೆಲವು ದೇಶಗಳು ಸಾಗರಿಕ ಪ್ರವಾಸೋದ್ಯಮವನ್ನೇ ಆದಾಯದ ಪ್ರಮುಖ ಮೂಲವನ್ನಾಗಿರಿಸಿಕೊಳ್ಳುವ ಪರಂಪರೆ ಇದೆ. ಇಂತಹ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಕರ್ನಾಟಕ ಕರಾವಳಿ ಯು ವೈಶಿಷ್ಟÂಪೂರ್ಣ ಭೌಗೋಳಿಕ ಹಿನ್ನೆಲೆಯಿಂದ ಜಗತ್ತಿನ ಆದ್ಯತೆಯ ಪ್ರವಾಸೋದ್ಯಮ ಕೇಂದ್ರ ಆಗುವ ಎಲ್ಲ ಸಾಧ್ಯತೆಗಳನ್ನು ಒಳಗೊಂಡಿದೆ.
Related Articles
Advertisement
ಪ್ರವಾಸೋದ್ಯಮ ತಜ್ಞರ ಪ್ರಕಾರ ಸದ್ಯಕ್ಕೆ ಫ್ರಾನ್ಸ್ ಕಳೆದ ವರ್ಷ 4.84 ಕೋಟಿ ಪ್ರವಾಸಿಗರ ಮೂಲಕ ಅಗ್ರ ಸ್ಥಾನದಲ್ಲಿದೆ. ಸುಮಾರು 75 ಲಕ್ಷ ವಿದೇಶಿ ಪ್ರವಾಸಿಗರೊಂದಿಗೆ ಭಾರತ 22ನೆಯ ಸ್ಥಾನದಲ್ಲಿದೆ. ಭಾರತದ ಒಟ್ಟು ಆಂತರಿಕ ಉತ್ಪನ್ನದ ಶೇ. 4.5ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಭಾರತದ ಪ್ರವಾಸೋದ್ಯಮದ ಅಗ್ರ ರಾಜ್ಯಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ಕರ್ನಾಟಕ ಶಿಲ್ಪಕಲಾ ವೈಭವದಿಂದಲೂ ಗಮನ ಸೆಳೆಯುತ್ತದೆ. ಕರಾವಳಿಯಂತೂ ಸಾಂಸ್ಕೃತಿಕ ಪ್ರವಾಸೋ ದ್ಯಮದ ಮೂಲಕ ಮತ್ತಷ್ಟು ಅವಕಾಶಗಳನ್ನು ಹೊಂದಿದೆ. ಇಲ್ಲಿನ ಯಕ್ಷಗಾನ, ಕಂಬಳ ಮುಂತಾದ ಪರಂ ಪರೆಯು ಈಗ ಸಮಗ್ರ ವಿವರಗಳನ್ನು ಬಹು ಮಾಧ್ಯಮಗಳಲ್ಲಿ ಒದಗಿಸುವುದರಿಂದ ಪ್ರದೇಶ, ದಿನಾಂಕ, ಸಮಯ ಎಲ್ಲ ವಿವರಗಳು ಪ್ರವಾಸಿಗರಿಗೆ ಬೆರಳ ತುದಿಯಲ್ಲೇ ಲಭ್ಯ.
ಜಗತ್ತಿನ ಅನೇಕ ದೇಶಗಳು ಉದಾ: ಮಲೇ ಶಿಯಾ, ಸಿಂಗಾಪುರ, ಥೈಲ್ಯಾಂಡ್ ಇತ್ಯಾದಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿವೆ. ಕರ್ನಾಟಕ ಕರಾವಳಿ ಸಹಿತ ಅಕ್ಕಪಕ್ಕದ ಪರಿಸರಗಳನ್ನು ಉಲ್ಲೇಖೀಸುವುದಾದರೆ ಪ್ರವಾಸೋದ್ಯಮವು ಅಪಾರ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಕೂಡ ರೂಪಿಸುತ್ತದೆ. ಸಾಮಾನ್ಯ ವಾಹನಗಳ ಜತೆಯಲ್ಲಿ ಸಂಪರ್ಕ ಸಾಧಿಸಬಲ್ಲ ಬಹುತೇಕ ವಾಹನಗಳು ಕೂಡ ಈ ವ್ಯವಸ್ಥೆಯ ಒಂದು ಭಾಗ ಆಗಿರುತ್ತದೆ. ಅಂತೆಯೇ ಈ ಪ್ರದೇಶ ತನ್ನದೇ ಆದ ಖಾದ್ಯ ವೈವಿಧ್ಯಗಳಿಂದ ಪ್ರಸಿದ್ಧವಾಗಿರುವುದ ರಿಂದ ಆಹಾರೋದ್ಯಮದ ಬೆಳವಣಿಗೆ ಯು ತನ್ಮೂಲಕ ಸಾಧ್ಯವಾಗುತ್ತದೆ.
ಇವೆಲ್ಲ ಸಾಧ್ಯತೆಗಳನ್ನು ಗಮನದಲ್ಲಿರಿ ಸಿಕೊಂಡಾಗ, ಪ್ರವಾಸಿಗರಿಗೆ ಒದಗ ಬೇಕಾದ ಮೂಲ ಸೌಕರ್ಯಗಳ ಕುರಿತು ಚಿಂತನೆ ಅನಿವಾರ್ಯ. ಸಂಬಂಧಿಸಿದ ಸರಕಾರಿ ಇಲಾಖೆಗಳಿವೆ. ಖಾಸಗಿಯಾಗಿ ಪ್ರವಾಸ ಪ್ಯಾಕೇಜ್ ಒದಗಿಸುವವರಿ ದ್ದಾರೆ. ಸಮೂಹ ಪ್ರವಾಸ ವ್ಯವಸ್ಥೆಯಲ್ಲಿ ಬರುವ ಮಂದಿಯೂ ಇದ್ದಾರೆ. ಆದರೆ ಅವರು ಈ ಪ್ರದೇಶದಲ್ಲಿ ಅವರ ಆಯ್ಕೆಯ ದಿನಗಳಲ್ಲಿ ಗರಿಷ್ಠ ಸಾಧ್ಯ ಪ್ರದೇಶಗಳನ್ನು, ಪ್ರದರ್ಶನಗಳನ್ನು, ಆಹಾರ ವೈವಿಧ್ಯಗಳನ್ನು ಹೊಂದುವಂತಾಗಲು ನೀಲನಕಾಶೆಯೊಂದು ಅತ್ಯಗತ್ಯ. ಈ ನಕಾಶೆಯ ಮೂಲಕ ಅವರು ಇಲ್ಲಿನ ಎಲ್ಲ ಪ್ರವಾಸೋದ್ಯಮ ಸಾಧ್ಯತೆಗಳನ್ನು ಬಳಸಿಕೊಳ್ಳಬಹುದಾಗುತ್ತದೆ.
ಇತ್ತೀಚೆಗಿನ ವರ್ಷಗಳಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ನವರಾತ್ರಿ ಮುಂತಾದ ಸಂದ ರ್ಭದ ಹಬ್ಬದ ಟೂರ್ ಪ್ಯಾಕೇಜ್ ಅನುಕರಣೀ ಯವಾಗಿದೆ. ನಿರ್ದಿಷ್ಟ ಹೈಟೆಕ್ ಬಸ್‌ಗಳಲ್ಲಿ ಪ್ರವಾಸಿಗರಿಗೆ ಸಾಮೂಹಿಕ ಅಥವಾ ವೈಯಕ್ತಿಕ ಮುಂಗಡ ಕಾದಿರಿಸುವಿಕೆಯ ಸೌಲಭ್ಯವು ಇಲ್ಲಿದೆ. ಧಾರ್ಮಿಕ ಕೇಂದ್ರಗಳ ಮತ್ತು ನಡುವಣ ಪ್ರವಾಸಿ ಕೇಂದ್ರಗಳ ಪ್ರವಾಸ ಈ ಪ್ಯಾಕೇಜ್‌ನಲ್ಲಿ ಒಂದೇ ದಿನ ಲಭ್ಯವಿದ್ದು, ಪ್ರವಾಸಿಗರಿಗೆ ಬಹು ಧಾರ್ಮಿಕ ಕೇಂದ್ರಗಳ ಸಂದರ್ಶನ ಸುಲಭ ಸಾಧ್ಯವಾಗುತ್ತದೆ. ಉದಾ: ಮಂಗಳೂರಿನಿಂದ ಕೊಲ್ಲೂರು, ಮಂಗ ಳೂರಿನಿಂದ ಮಡಿಕೇರಿ, ವಿವಿಧ ದೇವೀ ಕ್ಷೇತ್ರಗಳ ಸಂದರ್ಶನ. ಅದ್ಭುತವಾದ ಪ್ರತಿಕ್ರಿಯೆಯನ್ನು ಇಲಾಖೆ ಪಡೆಯುತ್ತಿರುತ್ತದೆ. ಇತ್ತೀಚೆಗಿನ ದಿನಗ ಳಲ್ಲಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಜಗತ್ತಿನ ಬಹು ವೈವಿಧ್ಯಗಳ ತಾಣವಾಗಿ ರೂಪು ಗೊಂಡಿದೆ. ಅಪಾರವಾದ ಸಾಧ್ಯತೆಗಳನ್ನು ಪ್ರವಾಸಿ ಗರಿಗಾಗಿ ಇಲ್ಲಿ ಅನುಷ್ಠಾನಗೊಳಿಸಲಾಗಿದೆ. ರಸ್ತೆ ಸಂಪರ್ಕದ ಪರಿಪೂರ್ಣತೆಯಿಂದ ಮತ್ತಷ್ಟು ಪ್ರವಾಸಿಗರನ್ನು ಇಲ್ಲಿಗೆ ಸೆಳೆಯಲು ಸಾಧ್ಯ. ಈ ಮೂಲಕ ವಿದೇಶೀ ವಿನಿಮಯ ಸಹಿತ ಸ್ಥಳೀಯ ಮತ್ತು ದೇಶದ ಆರ್ಥಿಕ ಬಲವರ್ಧನೆಯು ಸಾಧ್ಯವಾಗಬಹುದು.
ಅಂದಹಾಗೆಮಂಗಳೂರು ಸಹಿತ ಈ ಪರಿಸರವು ಪ್ರವಾಸಿಗರಿಗೆ 4 ವಿಧದ ಸಂಪರ್ಕ ಒದಗಿಸುತ್ತಿದ್ದು, ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇಂತಹ ಕೇಂದ್ರಗಳಿವೆ. ಸೌಲಭ್ಯ- ಭೂಸಾರಿಗೆ, ಜಲಸಾರಿಗೆ, ವಾಯು ಸಾರಿಗೆ, ರೈಲ್ವೇ ಸಾರಿಗೆ. ಮನೋಹರ ಪ್ರಸಾದ್