Advertisement
ಕ್ರೂಯಿಸ್ (ಸಮುದ್ರ/ಹಿನ್ನೀರು ವಿಹಾರ ಯಾನ ಟೂರಿಸಂ, ರಿಲೀಜಿಯಸ್ (ಧಾರ್ಮಿಕ)ಟೂರಿಸಂ, ಇಕೋ (ಪರಿಸರ) ಟೂರಿಸಂ, ಹೆಲ್ತ್ (ಆರೋಗ್ಯ) ಟೂರಿಸಂ ಇತ್ಯಾದಿ ವಿವಿಧ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿಯಲ್ಲಿ ಅವಕಾಶಗಳಿವೆ. ಪ್ರವಾಸೋ ದ್ಯಮಕ್ಕೆ ಪೂರಕವಾದ ಹೊಟೇಲ್, ರೆಸ್ಟೋರೆಂಟ್, ವ್ಯಾಪಾರ ಮಳಿಗೆಗಳು ಸ್ಥಾಪನೆಯಾದರೆ ಸಮಗ್ರ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಾವ ಕಾಶಗಳ ಸೃಷ್ಟಿಯೂ ಆಗಲಿದೆ. ಪ್ರತೇಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೆ ಇದನ್ನೆಲ್ಲ ಕಾರ್ಯಗತಗೊಳಿಸಲು ಸಾಧ್ಯವಿದೆ ಎಂದು ಕೆಸಿಸಿಐ ನೂತನ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನಲ್ಲಿ ಈಗಾಗಲೇ 90ರಷ್ಟು ಐಟಿ ಕಂಪೆನಿಗಳಿದ್ದು, ಇನ್ನಷ್ಟು ಹೆಚ್ಚು ಐಟಿ ಕಂಪೆನಿಗಳು ಇಲ್ಲಿಗೆ ಬರಲು ಪ್ರಯತ್ನಿಸಲಾಗುವುದು. ಜಿಎಸ್‌ಟಿ ಕುರಿತಂತೆ ಇನ್ನೂ ಗೊಂದಲಗಳಿದ್ದರೆ ಇನ್ನಷ್ಟು ಮಾಹಿತಿ ಕಾರ್ಯಾ ಗಾರಗಳನ್ನು ನಡೆಸಲಾಗುವುದು ಎಂದರು.
Related Articles
Advertisement
ಮಂಗಳೂರಿನಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ಬೈಕಂಪಾಡಿಯಲ್ಲಿ ಮಲ್ಟಿ ಲೆವೆಲ್ ಇಂಡಸ್ಟ್ರೀಯಲ್ ಶೆಡ್‌ಗಳ ನಿರ್ಮಾಣ ಮತ್ತು 2ನೇ ಹಂತದ ಯೋಜನೆ, ಸಿಆರ್‌ಝಡ್ ಕೇಂದ್ರ ಕಚೇರಿ ಮಂಗಳೂರಿನಲ್ಲಿ ಸ್ಥಾಪನೆ ಬಗ್ಗೆ ಒತ್ತಡ ತರಲಾಗುವುದು ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಸಿಸಿಐ ಉಪಾಧ್ಯಕ್ಷ ಐಸಾಕ್ ವಾಸ್, ಗೌರವ ಕಾರ್ಯದರ್ಶಿಗಳಾದ ಶಶಿಧರ ಪೈ ಮಾರೂರು ಮತ್ತು ಪ್ರಶಾಂತ್ ಸಿ.ಜಿ., ಕೋಶಾಧಿಕಾರಿ ಎಂ. ಗಣೇಶ್ ಕಾಮತ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು- ಬೆಂಗಳೂರು ರೋ ರೋ ಸೇವೆಗೆ ಆಗ್ರಹಮಂಗಳೂರು- ಬೆಂಗಳೂರು ರಸ್ತೆ ಮೂಲಕ ನವಮಂಗಳೂರು ಬಂದರಿಗೆ ಸರಕು ಸಾಗಾಟ ಮಾಡಲು ಈಗಿರುವ ರಸ್ತೆ ವ್ಯವಸ್ಥೆಯಲ್ಲಿ ಅಧಿಕ ಸಮಯ ಹಿಡಿಯುತ್ತಿದ್ದು, ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ರಸ್ತೆ ಯೋಜನೆಯನ್ನು ಆದ್ಯತೆಯ ನೆಲೆಯಲ್ಲಿ ಕೈಗೆತ್ತಿಕೊಳ್ಳಲು ಹಾಗೂ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ರೋ ರೋ ಸೇವೆ ಆರಂಭಿಸುವ ಬಗ್ಗೆಯೂ ಸರಕಾರವನ್ನು ಆಗ್ರಹಿಸಲಾಗುವುದು ಎಂದು ಅಬ್ದುಲ್ ಹಮೀದ್ ಹೇಳಿದರು.