ಮಂಗಳೂರು: ಕರಾವಳಿ ಭಾಗದಲ್ಲಿ ಸದ್ಯ ಹಿಂಗಾರು ಮಳೆ ಕ್ಷೀಣಿಸಿದ್ದರೂ, ಕಳೆದ ಒಂದು ತಿಂಗಳಲ್ಲಿ ಉತ್ತಮ ಮಳೆಯಾಗಿ ಮೂರು ತಿಂಗಳಲ್ಲಿ ಸುರಿಯಬೇಕಾಗಿದ್ದ ವಾಡಿಕೆ ಮಳೆಯ ಗುರಿ ತಲುಪಿದೆ.
ಒಟ್ಟಾರೆ ಹಿಂಗಾರು ಅವಧಿಯ ಅಕ್ಟೋಬರ್ 1ರಿಂದ ಡಿಸೆಂಬರ್ ಅಂತ್ಯದವರೆಗೆ ಕರಾವಳಿ ಭಾಗದಲ್ಲಿ 259.4 ಮಿ.ಮೀ. ಮಳೆ ಸುರಿಯ ಬೇಕು. ಆದರೆ, ಸದ್ಯ 308.9 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಶೇ.41ರಷ್ಟು ಮಳೆ ಅಧಿಕ ಸುರಿದಿದೆ.
ಕರಾವಳಿಗೆ ಹೋಲಿಕೆ ಮಾಡಿ ದರೆ ಅ. 1ರಿಂದ ಈವರೆಗೆ ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ಶೇ. 23, ಬಂಟ್ವಾಳದಲ್ಲಿ ಶೇ. 6, ಮಂಗಳೂರಿನಲ್ಲಿ ಶೇ. 35, ಪುತ್ತೂರಿನಲ್ಲಿ ಶೇ. 16, ಸುಳ್ಯದಲ್ಲಿ ಶೇ. 30, ಮೂಡುಬಿದಿರೆ ಶೇ. 23, ಕಡಬ ಶೇ. 33, ಮುಲ್ಕಿ ಶೇ. -37, ಉಳ್ಳಾಲ ಶೇ. -23, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶೇ.10, ಕುಂದಾಪುರ ಶೇ.112, ಉಡುಪಿ ಶೇ. 17, ಬೈಂದೂರು ಶೇ. 66, ಬ್ರಹ್ಮಾವರ ಶೇ. -8, ಕಾಪು ಶೇ. -41, ಹೆಬ್ರಿ ಶೇ. 92ರಷ್ಟು ಮಳೆಯಾಗಿದೆ.
ಈ ಬಾರಿ ಕರಾವಳಿ ಭಾಗದಲ್ಲಿ ಮುಂಗಾರು ಕೂಡ ಬಿರುಸು ಪಡೆದು ವಾಡಿಕೆಗಿಂತ ಶೇ.20ರಷ್ಟು ಮಳೆ ಏರಿಕೆ ಕಂಡಿತ್ತು. ಈ ತಿಂಗಳಿನಿಂದ ಹಿಂಗಾರು ಆರಂಭಗೊಂಡಿದ್ದು, ಅಕ್ಟೋಬರ್ ತಿಂಗಳಿನಾದ್ಯಂತ ಉತ್ತಮ ಮಳೆಯಾಗಿದೆ.
ಹಿಂಗಾರು ಮಳೆ ಪ್ರಮಾಣ
(259.4 ಮಿ.ಮೀ. ವಾಡಿಕೆ ಮಳೆ)
ವರ್ಷ ಮಳೆ ಪ್ರಮಾಣ (ಶೇ.)
2016 – ಶೇ.-57
2017 – ಶೇ.-25
2018- ಶೇ.-28
2019 – ಶೇ.124
2020 – ಶೇ.27
2021 – ಶೇ.122
2022 – ಶೇ.-14
2023 – ಶೇ.6
2024 (ನ.12)- ಶೇ.41