Advertisement
ಉದ್ಯೋಗ, ಕೌಶಲ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಮಧ್ಯಮ ವರ್ಗಗಳನ್ನು ಅವರು ತಮ್ಮ ಯೋಜನೆಗಳಲ್ಲಿ ಹೆಚ್ಚಾಗಿ ಸೇರಿಸಿಕೊಂಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ನಮ್ಮ ಭಾಗಕ್ಕೇನು ಸಿಕ್ಕಿದೆ ಎಂದು ನೋಡಿದರೆ ಮುಖ್ಯವಾಗಿ ಕೈಗಾರಿಕ ವಲಯದಲ್ಲಿ ಹಲವು ವಿಚಾರಗಳು ಕಂಡುಬರುತ್ತವೆ.
Related Articles
Advertisement
ಇನ್ನು ಇ-ಕಾಮರ್ಸ್ ರಫ್ತು ಹಬ್ ರಚನೆ ಮಾಡುವುದಕ್ಕೆ ಬಜೆಟ್‌ನಲ್ಲಿ ತಿಳಿಸಲಾಗಿದೆ. ಸಣ್ಣ ಹಾಗೂ ಗುಡಿ ಕೈಗಾರಿಕೆಗಳಲ್ಲಿನ ಕೌಶಲದಾರರು ತಮ್ಮ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದಕ್ಕೆ ಪಿಪಿಪಿ-ಆಧಾರದಲ್ಲಿ ರಫ್ತು ಹಬ್‌ಗಳನ್ನು ರಚಿಸುವುದಕ್ಕೆ ಒತ್ತು ಕೊಟ್ಟಿದ್ದಾರೆ, ಇದು ಕಾರ್ಯರೂಪಕ್ಕೆ ಬಂದರೆ ಉತ್ತಮ.
ಸಾಗರೋತ್ತರ ರಫ್ತಿಗೆ ಒತ್ತುಸಿಗಡಿ ಹಾಗೂ ಮೀನು ಆಹಾರಕ್ಕೆ ಇರುವ ಸುಂಕವನ್ನು ಶೇ.5ರಷ್ಟು ಇಳಿಕೆ ಮಾಡಿದ್ದರಿಂದ ಸಾಗರೋತ್ತರ ರಫ್ತು ವಿಚಾರದಲ್ಲಿ ನಮ್ಮ ಉದ್ದಿಮೆಗಳಿಗೆ ಒತ್ತು ಕೊಟ್ಟಂತಾಗಿದೆ. ಅದೇ ರೀತಿ ನಬಾರ್ಡ್ ಮೂಲಕ ಸಿಗಡಿ ಫಾರ್ಮಿಂಗ್‌ಗೆ ಹಣಕಾಸು ನೆರವು ಕೊಡುವ ನಿರೀಕ್ಷೆ ಇದೆ. ನೌಕಾಯಾನ ಉದ್ಯಮದಲ್ಲಿ ಲೀಸಿಂಗ್ ಹಾಗೂ ಸುಧಾರಣೆಗೆ ಹೆಚ್ಚಿನ ಒತ್ತು ಕೊಡುವುದಾಗಿ ತಿಳಿಸಲಾಗಿದೆ. ಇದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಹೆಚ್ಚಿನ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ. ಜಿಡಿಪಿಯ ಶೇ 3.4ನ್ನು ಎಂದರೆ 11,11,111 ಕೋಟಿ ರೂ. ಮೊತ್ತವನ್ನು ಮೂಲಸೌಕರ್ಯಕ್ಕೆ ಮೀಸಲಿಡಲಾಗಿದೆ. ಅದರಲ್ಲಿ ನಮ್ಮ ಕರಾವಳಿ ಪ್ರದೇಶವನ್ನು ಒಳನಾಡಿಗೆ ಜೋಡಿಸಿಕೊಂಡರೆ ಬಹುತೇಕ ಸಮಸ್ಯೆಗಳೂ ಬಗೆಹರಿಯಬಹುದು. -ಅಜಿತ್ ಕಾಮತ್, ಅಧ್ಯಕ್ಷರು, ಭಾರತೀಯ
ಕೈಗಾರಿಕೆಗಳ ಮಹಾಒಕ್ಕೂಟ, ಮಂಗಳೂರು ಶಾಖೆ